ಸೀರೆ, ಲೆಹಂಗಾಗೆ ಸರಿ ಹೊಂದುವ ಆಕರ್ಷಕ ಕುಪ್ಪಸದ ಪೆಂಡೆಂಟ್ ಡಿಸೈನ್‌ಗಳು: ನಿಮ್ಮ ಸೀರೆಗೆ ಯಾವುದು ಹೊಂದುತ್ತೆ ನೋಡಿ
ಫ್ಯಾಷನ್ ಟ್ರೆಂಡ್ ಬದಲಾಗಿದೆ. ಮೊದಲೆಲ್ಲಾ ಒಂದು ಸಿಂಪಲ್ ಸೀರೆಗೆ 2-3 ಸಾವಿರ ಖರ್ಚು ಮಾಡುತ್ತಿದ್ದವರು, ಈಗ ಒಂದು ಬ್ಲೌಸ್‌ಗೆ ಅಷ್ಟೇ ದುಡ್ಡು ಖರ್ಚು ಮಾಡುತ್ತಿದ್ದಾರೆ. ಸೀರೆಗಿಂತ ಕುಪ್ಪಸದ ಡಿಸೈನ್ ಬೆಲೆಯೇ ಹೆಚ್ಚಾಗಿದೆ.
(1 / 8)
ನೀವೂ ಸೀರೆ ಅಥವಾ ಲೆಹಂಗಾಪ್ರಿಯರಾಗಿದ್ದು, ಸ್ಟೈಲಿಷ್ ಕುಪ್ಪಸ ಟ್ರೈ ಮಾಡಬೇಕು ಎಂದುಕೊಂಡಿದ್ದರೆ ಕುಪ್ಪಸದ ಹಿಂದೆ ಕಟ್ಟುವ ದಾರಕ್ಕೆ ಇನ್ನೂ ಹೆಚ್ಚಿನ ಮೆರುಗು ನೀಡಬಹುದು. ಅದು ಲೆಹೆಂಗಾ ಬ್ಲೌಸ್ ಆಗಿರಲಿ ಸೀರೆ ಕುಪ್ಪಸ ಆಗಿರಲಿ, ಈ ರೀತಿಯ ವಿನ್ಯಾಸಗಳು ನಿಮಗೂ ಇಷ್ಟವಾಗಬಹುದು ನೋಡಿ.
(2 / 8)
ನೀವು ಧರಿಸುವ ಲೆಹೆಂಗಾ ಕುಪ್ಪಸ ನೋಡಲು ಆಕರ್ಷಕವಾಗಿರಬೇಕು, ಭಾರವಾಗಿರಬಾರದು ಎನಿಸಿದರೆ ಮುತ್ತು, ಹರಳುಗಳಿಂದ ತಯಾರಿಸಿದ ಪೆಂಡೆಂಟ್ ಬಿಟ್ಟು ಉಲ್ಲನ್‌ನಿಂದಲೇ ಈ ರೀತಿ ಪೆಂಡೆಂಟ್‌ಗಳನ್ನು ಮಾಡಿಕೊಳ್ಳಬಹುದು.
(3 / 8)
ಸೀರೆ ಬಣ್ಣಕ್ಕೆ ಮ್ಯಾಚಿಂಗ್ ಆಗುವಂತೆ ಬಟ್ಟೆಯಿಂದಲೇ ಮಾಡಿದ ಬೆಲ್ ಅಕಾರದ ಪೆಂಡೆಂಟ್‌ಗಳನ್ನು ರೆಡಿ ಮಾಡಿಕೊಳ್ಳಬಹುದು
(5 / 8)
ಈ ರೀತಿಯ ಕುಪ್ಪಸವು ಲೆಹಂಗಾಕ್ಕೆ ಸರಿ ಹೊಂದುತ್ತದೆ.ಕುಶನ್ ರೀತಿಯ ಪೆಂಡೆಂಟನ್ನು ತಯಾರಿಸಬಹುದು. ಚಿನ್ನದ ಬಣ್ಣದ ಈ ಪೆಂಡೆಂಟ್ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಈ ರೀತಿಯ ಪೆಂಡೆಂಟ್ ನಿಮಗೆ ತಯಾರಿಸಲು ಆಗದಿದ್ದಲ್ಲಿ ರೆಡಿ ಪೆಂಡೆಟನ್ನು ಮಾರುಕಟ್ಟೆಯಿಂದ ತರಬಹುದು.
(6 / 8)
ಸಣ್ಣ ಸಣ್ಣ ಮುತ್ತಿನ ಪೆಂಡೆಂಟ್‌ಗಳು ನೋಡಲು ಬಹಳ ಆಕರ್ಷಕವಾಗಿ ಕಾಣುತ್ತದೆ, ನಿಮಗೆ ಸಿಂಪಲ್ ಡಿಸೈನ್ ಬೇಕೆಂದರೆ ಈ ರೀತಿಯ ಪೆಂಡೆಂಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
(7 / 8)
ಲೆಹಂಗಾಗೆ ಸರಿಹೊಂದುವಂತೆ ಕುಪ್ಪಸದ ಡಿಸೈನ್ ಅದ್ಧೂರಿಯಾಗಿರಬೇಕು ಎಂದರೆ ಈ ರೀತಿ ಕಿವಿಯೋಲೆ ಮಾದರಿಯ ಡಿಸೈನ್ ಆಯ್ಕೆ ಮಾಡಿಕೊಳ್ಳಬಹುದು.
ಇತರ ಗ್ಯಾಲರಿಗಳು