Vitamins: ಮಹಿಳೆಯರು ಆರೋಗ್ಯವಾಗಿರಲು ಬೇಕಾಗುವ 5 ಪ್ರಮುಖ ವಿಟಮಿನ್​​ಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vitamins: ಮಹಿಳೆಯರು ಆರೋಗ್ಯವಾಗಿರಲು ಬೇಕಾಗುವ 5 ಪ್ರಮುಖ ವಿಟಮಿನ್​​ಗಳಿವು

Vitamins: ಮಹಿಳೆಯರು ಆರೋಗ್ಯವಾಗಿರಲು ಬೇಕಾಗುವ 5 ಪ್ರಮುಖ ವಿಟಮಿನ್​​ಗಳಿವು

  • Vitamins For Women: ಮಹಿಳೆಯರು ಯಾವಾಗಲೂ ಎನರ್ಜಿಟಿಕ್​ ಆಗಿರಬೇಕು ಅಂದ್ರೆ ಅವರ ದೇಹಕ್ಕೆ ಸಾಕಷ್ಟು ಪ್ರಮಾಣದ ವಿಟಮಿನ್‌ಗಳು ಬೇಕಾಗುತ್ತದೆ. ಮಹಿಳೆಯರು ಆರೋಗ್ಯವಾಗಿರಲು ಬೇಕಾಗುವ ವಿಟಮಿನ್​​ಗಳು ಯಾವುವು ಎಂದು ತಿಳಿಯೋಣ..

ವೈದ್ಯರು ಹೇಳುವ ಪ್ರಕಾರ ಪ್ರತಿಯೊಬ್ಬ ಮಹಿಳೆಗೂ ಬೇಕಾಗುವ 5 ಅತ್ಯಗತ್ಯ ವಿಟಮಿನ್​​ಗಳ ಲಿಸ್ಟ್ ಇಲ್ಲಿದೆ. ಈ ಜೀವಸತ್ವಗಳು ನಿಮ್ಮ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಿ.  
icon

(1 / 6)

(Freepik)

ವಿಟಮಿನ್ ಎ: ಇದು ದೃಷ್ಟಿ, ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಫಲವತ್ತತೆ ವಿಚಾರದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಮಹಿಳೆಯರ ಅಂಡಾಶಯದಲ್ಲಿ ಮೊಟ್ಟೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ.  
icon

(2 / 6)

ವಿಟಮಿನ್ ಬಿ (B3, B6, B9, B12): ವಿಟಮಿನ್ B3 ಜೀವಕೋಶಗಳ ಬೆಳವಣಿಗೆ ಮತ್ತು ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಇದು ಪೋಷಕಾಂಶಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.  ವಿಟಮಿನ್ ಬಿ 6 ಮಹಿಳೆಯರಲ್ಲಿ ರಕ್ತಹೀನತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಗರ್ಭಾವಸ್ಥೆಯ ವೇಳೆ ವಾಕರಿಕೆ ತಡೆಗಟ್ಟುತ್ತದೆ.  ವಿಟಮಿನ್ ಬಿ 9 ಗರ್ಭಿಣಿಯರಿಗೆ ಪ್ರಮುಖ ವಿಟಮಿನ್ ಆಗಿದೆ. ಇದು ಜೀವಕೋಶಗಳ ಬಿಲ್ಡಿಂಗ್ ಬ್ಲಾಕ್ಸ್ ಆಗಿರುವ ಡಿಎನ್​ಎ ಮತ್ತು ಆರ್​ಎನ್​ಎ ರಚನೆಗೆ ಸಹಾಯ ಮಾಡುತ್ತದೆ. ವಿಟಮಿನ್​​ ಬಿ 12 ಕೆಂಪು ರಕ್ತ ಕಣಗಳ ರಚನೆಗೆ ಮತ್ತು ನರಮಂಡಲ ಚುರುಕಾಗಿ ಕಾರ್ಯನಿರ್ವಹಿಸಲು ಅಗತ್ಯ. 
icon

(3 / 6)

(Unsplash)

ವಿಟಮಿನ್ ಸಿ: ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಇದು ತುಂಬಾ ಮುಖ್ಯ. ಮಗುವಿನ ಬೆಳವಣಿಗೆಗೆ ಸಹಾಯಕಾರಿಯಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತನಾಳಗಳು, ಚರ್ಮ ಮತ್ತು ಮೂಳೆಗಳನ್ನು ಆರೋಗ್ಯಕರವಾಗಿರಿಸುತ್ತದೆ.
icon

(4 / 6)

ವಿಟಮಿನ್ ಡಿ: ಇದು ಗರ್ಭಿಣಿ ಮಹಿಳೆಯರಲ್ಲಿ ಶಿಶುವಿನ ಅಕಾಲಿಕ ಜನನ ಮತ್ತು ತಾಯಿಯ ರಕ್ತದೊತ್ತಡದ ಸಾಧ್ಯತೆಗಳನ್ನು ಕಡಿಮೆ ಮಾಡಲು ಉಪಕಾರಿಯಾಗಿದೆ.  ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ, ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ಮಹಿಳೆಯರಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. 
icon

(5 / 6)

ವಿಟಮಿನ್ ಇ: ರೋಗನಿರೋಧಕ ಶಕ್ತಿ, ಕಣ್ಣಿನ ಆರೋಗ್ಯ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಇದು ಅತ್ಯಗತ್ಯ. ಇದು ಉತ್ಕರ್ಷಣ ನಿರೋಧಕವಾಗಿದ್ದು, ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ ಮತ್ತು ಹಾರ್ಮೋನುಗಳನ್ನು ಸಮತೋಲನಗೊಳಿಸುವ ಮೂಲಕ ಸರಿಯಾದ ಸಮಯಕ್ಕೆ ಋತುಚಕ್ರವಾಗುವಂತೆ ನೋಡಿಕೊಳ್ಳುತ್ತದೆ.  
icon

(6 / 6)

ವಿಟಮಿನ್ ಇ: ರೋಗನಿರೋಧಕ ಶಕ್ತಿ, ಕಣ್ಣಿನ ಆರೋಗ್ಯ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಇದು ಅತ್ಯಗತ್ಯ. ಇದು ಉತ್ಕರ್ಷಣ ನಿರೋಧಕವಾಗಿದ್ದು, ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮುಟ್ಟಿನ ನೋವನ್ನು 
ಕಡಿಮೆ ಮಾಡುತ್ತದೆ ಮತ್ತು ಹಾರ್ಮೋನುಗಳನ್ನು ಸಮತೋಲನಗೊಳಿಸುವ ಮೂಲಕ ಸರಿಯಾದ ಸಮಯಕ್ಕೆ ಋತುಚಕ್ರವಾಗುವಂತೆ ನೋಡಿಕೊಳ್ಳುತ್ತದೆ. 
 
(Unsplash)

ಇತರ ಗ್ಯಾಲರಿಗಳು