ಅನಿಯಮಿತ ಮುಟ್ಟಿನ ಸಮಸ್ಯೆ ಎದುರಿಸುತ್ತಿದ್ದೀರಾ? ಈ ಆಹಾರಗಳು ನಿಮ್ಮ ಆರೋಗ್ಯ ಸುಧಾರಿಸಲು ಸಹಾಯವಾಗಬಹುದು
ಅನಿಯಮಿತ ಋತುಚಕ್ರಮವು ಬಹುತೇಕ ಮಹಿಳೆಯರನ್ನು ಬಾಧಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಸಾಮಾನ್ಯ ಮುಟ್ಟಿನ ಚಕ್ರವನ್ನು ಆರೋಗ್ಯಕರ ಸ್ತ್ರೀ ದೇಹದ ಸಂಕೇತವೆಂದು ಹೇಳಲಾಗುತ್ತದೆ. ಮಹಿಳೆಯರು ಈ ಸಮಸ್ಯೆಯಿಂದ ಹೊರಬರಲು ಕೆಲವೊಂದು ಆಹಾರ ಪದಾರ್ಥಗಳನ್ನು ತಮ್ಮ ಡಯಟ್‌ನಲ್ಲಿ ಸೇರಿಸಿಕೊಂಡರೆ ಉತ್ತಮ.
(1 / 7)
ಮಾನಸಿಕ ಒತ್ತಡ, ಹಾರ್ಮೋನ್ ಅಸಮತೋಲನ, ಗುಣಮಟ್ಟವಲ್ಲದ ಆಹಾರ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳು ಋತುಚಕ್ರದ ಮೇಲೆ ಪರಿಣಾಮ ಬೀರಬಹುದು. ಒಳ್ಳೆಯ ಆಹಾರವೇ ಅನೇಕ ರೋಗಗಳಿಗೆ ಮದ್ದು. ಋತುಚಕ್ರವನ್ನು ನಿಯಂತ್ರಿಸುವಲ್ಲಿ ಪೌಷ್ಟಿಕಾಂಶವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ದೇಹದ ಒಟ್ಟಾರೆ ಆರೋಗ್ಯಕ್ಕೂ ಸಹಾಯ ಮಾಡುತ್ತದೆ.
(2 / 7)
ಕಬ್ಬಿಣದ ಕೊರತೆಯಿಂದ ಅನಿಯಮಿತ ಅಥವಾ ಅತಿಯಾದ ಮುಟ್ಟು ಕೂಡ ಉಂಟಾಗಬಹುದು. ಇದು ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಬ್ಬಿಣದಲ್ಲಿ ಸಮೃದ್ಧವಾಗಿರುವ ಆಹಾರಗಳು ದೇಹದಲ್ಲಿನ ಆರೋಗ್ಯಕರ ರಕ್ತ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹಸಿರು ತರಕಾರಿಗಳು, ಕುಂಬಳಕಾಯಿ ಬೀಜಗಳು, ಧಾನ್ಯಗಳು, ಕೆಂಪು ಮಾಂಸ, ಬೇಳೆಕಾಳುಗಳನ್ನು ಸೇವಿಸಿ.
(3 / 7)
ಹಾರ್ಮೋನ್ ಸಮತೋಲನ ಮತ್ತು ಸಾಮಾನ್ಯ ಋತುಚಕ್ರದಲ್ಲಿ ಆರೋಗ್ಯಕರ ಕೊಬ್ಬುಗಳು ಪ್ರಮುಖ ಪಾತ್ರವಹಿಸುತ್ತವೆ. ಒಮೆಗಾ 3 ಕೊಬ್ಬಿನಾಮ್ಲಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಮುಟ್ಟಿನ ಸೆಳೆತವನ್ನು ನಿಯಂತ್ರಿಸುತ್ತದೆ. ಅವಕಾಡೊ, ಸಾಲ್ಮನ್, ಸಾರ್ಡೀನ್, ಅಗಸೆ ಬೀಜಗಳು, ಚಿಯಾ ಬೀಜಗಳು, ವಾಲ್‌ನಟ್ಸ್, ಆಲಿವ್ ಎಣ್ಣೆಯಂತಹ ಆಹಾರವನ್ನು ಸೇವಿಸಬಹುದು.
(4 / 7)
ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ಮುಟ್ಟಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಧಾನ್ಯಗಳಾದ ಓಟ್ಸ್, ಬ್ರೌನ್ ರೈಸ್, ಕ್ವಿನೋವಾ, ಸಿಹಿ ಆಲೂಗಡ್ಡೆ ಮತ್ತು ಬಟಾಣಿಗಳಂತಹ ದ್ವಿದಳ ಧಾನ್ಯಗಳು, ಬ್ರೊಕೊಲಿ ಮತ್ತು ಕ್ಯಾರೆಟ್‌ಗಳಂತಹ ತರಕಾರಿಗಳನ್ನು ಸೇವಿಸಿ.
(5 / 7)
ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಆಹಾರಗಳು ಹಾರ್ಮೋನ್ ಉತ್ಪಾದನೆ ಮತ್ತು ಕಬ್ಬಿಣದ ಹೀರಿಕೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದು ಋತುಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ, ದ್ರಾಕ್ಷಿ, ಸ್ಟ್ರಾಬೆರಿ, ಪಪ್ಪಾಯಿ ಮತ್ತು ಕಿವಿಯಲ್ಲಿ ವಿಟಮಿನ್ ಸಿ ಇರುತ್ತದೆ.
(6 / 7)
ಮೆಗ್ನೀಷಿಯಮ್ ಸಮೃದ್ಧವಾಗಿರುವ ಆಹಾರಗಳು ಅನಿಯಮಿತ ಮುಟ್ಟಿಗೆ ಕಾರಣವಾಗುತ್ತದೆ. ಡಾರ್ಕ್ ಚಾಕೊಲೇಟ್, ಬಾದಾಮಿ, ವಾಲ್‌ನಟ್ಸ್, ಗೋಡಂಬಿ, ಹಸಿರು ಎಲೆಗಳ ತರಕಾರಿಗಳು ಮತ್ತು ಕುಂಬಳಕಾಯಿ ಬೀಜಗಳು ಉತ್ತಮ ಆಹಾರಗಳಾಗಿವೆ.
ಇತರ ಗ್ಯಾಲರಿಗಳು