ಮಹಿಳಾ ಹಾಕಿ ಚಾಂಪಿಯನ್ಸ್ ಟ್ರೋಫಿ 2024: ಜಪಾನ್ ವಿರುದ್ಧ 3-0 ಅಂತರದ ಗೆದ್ದ ಭಾರತ ಸೆಮಿಫೈನಲ್ಗೆ ಲಗ್ಗೆ
- India vs Japan: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಕೊನೆ ಲೀಗ್ ಪಂದ್ಯದಲ್ಲಿ ಭಾರತ 3-0 ಗೋಲುಗಳಿಂದ ಜಪಾನ್ ತಂಡವನ್ನು ಮಣಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿತು.
- India vs Japan: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಕೊನೆ ಲೀಗ್ ಪಂದ್ಯದಲ್ಲಿ ಭಾರತ 3-0 ಗೋಲುಗಳಿಂದ ಜಪಾನ್ ತಂಡವನ್ನು ಮಣಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿತು.
(1 / 7)
ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ (ಎಸಿಟಿ) ಹಾಕಿ ಟೂರ್ನಮೆಂಟ್ನ ಕೊನೆಯ ಲೀಗ್ ಪಂದ್ಯದಲ್ಲಿ ಜಪಾನ್ ತಂಡವನ್ನು 3-0 ಗೋಲುಗಳಿಂದ ಸೋಲಿಸಿದ ಹಾಲಿ ಚಾಂಪಿಯನ್ ಭಾರತ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆದಿದೆ.
(2 / 7)
ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿ ಉತ್ತಮ ಫಾರ್ಮ್ನಲ್ಲಿದ್ದ ದೀಪಿಕಾ, 47 ಮತ್ತು 48 ನೇ ನಿಮಿಷಗಳಲ್ಲಿ ಗೋಲುಗಳನ್ನು ಗಳಿಸಿ ಗಮನ ಸೆಳೆದರು. ಉಪನಾಯಕಿ ನವನೀತ್ ಕೌರ್ 37ನೇ ನಿಮಿಷದಲ್ಲಿ ಗೋಲ್ ಬಾರಿಸಿ ಭಾರತ ತಂಡದ ಖಾತೆ ತೆರೆದರು.
(3 / 7)
ಇದರೊಂದಿಗೆ ಭಾರತ ಆಡಿರುವ 5 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಚೀನಾ (12 ಅಂಕ) 2ನೇ ಸ್ಥಾನದಲ್ಲಿದೆ. ನವೆಂಬರ್ 19ರ ಮಂಗಳವಾರ ನಡೆಯಲಿರುವ ಸೆಮಿಫೈನಲ್ನಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿರುವ ಜಪಾನ್ ತಂಡವನ್ನು ಎದುರಿಸಲಿದ್ದು, ಚೀನಾ ತಂಡವು ಮೂರನೇ ಸ್ಥಾನದಲ್ಲಿರುವ ಮಲೇಷ್ಯಾ ತಂಡವನ್ನು ಎದುರಿಸಲಿದೆ.
(4 / 7)
ಟೂರ್ನಿಯ ಅಗ್ರ ಸ್ಕೋರರ್ ಆಗಿರುವ ದೀಪಿಕಾ ಈವರೆಗೆ 4 ಫೀಲ್ಡ್ ಗೋಲು, ಪೆನಾಲ್ಟಿ ಕಾರ್ನರ್ಗಳಿಂದ 5 ಗೋಲುಗಳು ಮತ್ತು ಪೆನಾಲ್ಟಿ ಸ್ಟ್ರೋಕ್ನಿಂದ ಒಂದು ಗೋಲು ಸೇರಿದಂತೆ ಒಟ್ಟು 10 ಗೋಲು ಗಳಿಸಿದ್ದಾರೆ.
(5 / 7)
ಎಂಟನೇ ನಿಮಿಷದಲ್ಲಿ ಭಾರತೀಯರು ಸತತ ಪೆನಾಲ್ಟಿ ಕಾರ್ನರ್ ಪಡೆಯಿತು. ಆದರೆ, ಗೋಲುಗಳಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ. 25ನೇ ನಿಮಿಷದಲ್ಲಿ ಆತಿಥೇಯರು ನಾಲ್ಕನೇ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದರು. ಆದರೆ ಮತ್ತೆ ಅವರು ಅವಕಾಶದ ಲಾಭ ಪಡೆಯಲು ವಿಫಲರಾದರು.
(6 / 7)
37ನೇ ನಿಮಿಷದಲ್ಲಿ ನವನೀತ್ ಗಳಿಸಿದ ಗೋಲಿನಿಂದ ಭಾರತ ಮೇಲುಗೈ ಸಾಧಿಸಿತು. 47ನೇ ನಿಮಿಷದಲ್ಲಿ ಭಾರತ ಸತತ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೆದ್ದುಕೊಂಡಿತು ಮತ್ತು ಸ್ಟಾರ್ ಡ್ರ್ಯಾಗ್ ಫ್ಲಿಕರ್ ದೀಪಿಕಾ ಪ್ರಬಲ ಡ್ರಾಗ್ ಫ್ಲಿಕ್ ಮೂಲಕ ಖಾತೆ ತೆರೆದರು.
ಇತರ ಗ್ಯಾಲರಿಗಳು