Womens Day: ಬುಟಿಕ್‌ನಿಂದ ಸಲೂನ್‌ವರೆಗೆ, ಕಡಿಮೆ ಬಜೆಟ್‌ನಲ್ಲಿ ಹೆಣ್ಣುಮಕ್ಕಳು ಯಾವೆಲ್ಲಾ ಸ್ವಂತ ಬ್ಯುಸಿನೆಸ್‌ ಮಾಡಬಹುದು ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Womens Day: ಬುಟಿಕ್‌ನಿಂದ ಸಲೂನ್‌ವರೆಗೆ, ಕಡಿಮೆ ಬಜೆಟ್‌ನಲ್ಲಿ ಹೆಣ್ಣುಮಕ್ಕಳು ಯಾವೆಲ್ಲಾ ಸ್ವಂತ ಬ್ಯುಸಿನೆಸ್‌ ಮಾಡಬಹುದು ನೋಡಿ

Womens Day: ಬುಟಿಕ್‌ನಿಂದ ಸಲೂನ್‌ವರೆಗೆ, ಕಡಿಮೆ ಬಜೆಟ್‌ನಲ್ಲಿ ಹೆಣ್ಣುಮಕ್ಕಳು ಯಾವೆಲ್ಲಾ ಸ್ವಂತ ಬ್ಯುಸಿನೆಸ್‌ ಮಾಡಬಹುದು ನೋಡಿ

  • ಈಗಿನ ಕಾಲದಲ್ಲಿ ಹೆಣ್ಣುಮಕ್ಕಳು ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವ ಆಸೆ ವ್ಯಕ್ತಪಡಿಸುವುದು ಸಹಜ. ಹಲವರಿಗೆ ಇನ್ನೊಬ್ಬರ ಕೈ ಕೆಳಗೆ ದುಡಿಯುವುದಕ್ಕಿಂತ ಸ್ವಂತ ಬ್ಯುಸಿನೆಸ್‌ ಮಾಡಬೇಕು ಎಂಬ ಹಂಬಲವೂ ಇರುತ್ತದೆ. ಕಡಿಮೆ ಬಜೆಟ್‌ನಲ್ಲಿ ಸ್ವಂತ ಬ್ಯುಸಿನೆಸ್‌ ಏನೋ ಮಾಡುವ ಯೋಚನೆ ಮಾಡುವವರಿಗೆ ಇಲ್ಲಿದೆ ಒಂದಿಷ್ಟು ಐಡಿಯಾ.

ಮಾರ್ಚ್‌ 8 ಅಂತರರಾಷ್ಟ್ರೀಯ ಮಹಿಳಾ ದಿನ. ಈ ಸಂದರ್ಭ ಹೆಣ್ಣುಮಕ್ಕಳ ಸ್ವಾವಲಂಬನೆಯ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಹಲವು ಹೆಣ್ಣುಮಕ್ಕಳಿಗೆ ಸ್ವಂತ ವ್ಯವಹಾರ ಅಥವಾ ಉದ್ದಿಮೆ ಮಾಡಬೇಕು ಎಂಬ ಆಸೆ ಇರುವುದು ಸಹಜ. ಕಡಿಮೆ ಬಜೆಟ್‌ನಲ್ಲಿ ಹೆಣ್ಣುಮಕ್ಕಳು ಮಾಡಬಹುದಾದ ಬ್ಯುಸಿನೆಸ್‌ ಐಡಿಯಾಗಳು ಇಲ್ಲಿವೆ. 
icon

(1 / 11)

ಬುಟಿಕ್‌: ಫ್ಯಾಷನ್‌ ಮೇಲಿನ ಒಲವು ಎಂದಿಗೂ ಕಡಿಮೆಯಾಗುವುದಿಲ್ಲ. ಬುಟಿಕ್‌ ತೆರೆಯುವ ಮೂಲಕ ನಿಮ್ಮ ಸ್ವಂತ ಬ್ಯುಸಿನೆಸ್‌ ಕನಸನ್ನು ನನಸು ಮಾಡಿಕೊಳ್ಳಬಹುದು, ಮಾತ್ರವಲ್ಲ ಇದರಿಂದ ಉತ್ತಮ ಗಳಿಕೆ ಕೂಡ ಸಾಧ್ಯ. ಅಲ್ಲದೇ ನೀವು ಒಂದಿಷ್ಟು ಜನರಿಗೆ ಉದ್ಯೋಗ ಕೂಡ ನೀಡಬಹುದು. 
icon

(2 / 11)

ಬೇಕರಿ ಉದ್ಯಮ: ಸದ್ಯ ಬೇಕರಿ ಉದ್ಯಮ ಟ್ರೆಂಡ್‌ನಲ್ಲಿರುವುದು ಸುಳ್ಳಲ್ಲ. ಕಡಿಮೆ ಬಜೆಟ್‌ನಲ್ಲಿ ಬ್ಯುಸಿನೆಸ್‌ ಮಾಡುವವರಿಗೆ ಇದು ಬೆಸ್ಟ್‌. ಆದರೆ ಇದಕ್ಕೆ ಸಂಬಂಧಿಸಿದ ಡಿಪ್ಲೋಮಾ ಕೋರ್ಸ್‌ಗಳನ್ನು ಮಾಡಿಕೊಂಡು ನಂತರ ಸಣ್ಣ ಮಟ್ಟದಲ್ಲಿ ಆರಂಭಿಸಬಹುದು. 
icon

(3 / 11)

ಡೇಕೇರ್‌ ಸೆಂಟರ್‌: ನೀವು ಹಳ್ಳಿಯಲ್ಲಿರಲಿ, ಪಟ್ಟಣದಲ್ಲಿರಲಿ ಡೇಕೇರ್‌ಗಳಿಗೆ ಭೇಟಿ ಇದ್ದೇ ಇದೆ. ದುಡಿಯುವ ಹೆಣ್ಣುಮಕ್ಕಳು ಹೆಚ್ಚಿರುವ ಈ ಕಾಲದಲ್ಲಿ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಡೇಕೇರ್‌ಗಳನ್ನು ಅವಲಂಬಿಸುತ್ತಾರೆ. ಡೇಕೇರ್‌ಗಳನ್ನು ಮನೆಯಲ್ಲೂ ಆರಂಭಿಸಬಹುದು. 
icon

(4 / 11)

ಸಲೂನ್‌: ಇಂದಿನ ಕಾಲದಲ್ಲಿ ಅತಿ ಹೆಚ್ಚು ಗಳಿಕೆ ಮಾಡಬಹುದಾದ ಕಡಿಮೆ ಬಜೆಟ್‌ ಬ್ಯುಸಿನೆಸ್‌ ಇದು ಎನ್ನಬಹುದು. ನೀವು ಬ್ಯೂಟಿಪಾರ್ಲರ್‌, ಸಲೂನ್‌ ತೆರೆಯುವ ಬಗ್ಗೆ ನೀವು ಅದರಲ್ಲಿ ಎಕ್ಸ್‌ಫರ್ಟ್‌ ಎನ್ನಿಸಿಕೊಳ್ಳಬೇಕು. 
icon

(5 / 11)

ಇವೆಂಟ್‌ ಪ್ಲಾನರ್‌: ಈಗೀನ ಕಾಲದಲ್ಲಿ ಯಾವುದೇ ಕಾರ್ಯವನ್ನಾಗಲೀ ತಾವೇ ಮುಂದೆ ನಿಂತು ಪ್ಲಾನ್‌ ಮಾಡುವಷ್ಟು ಸಮಯ ಯಾರಿಗೂ ಇರುವುದಿಲ್ಲ, ಅದಕ್ಕಾಗಿ ಈವೆಂಟ್‌ ಪ್ಲಾನರ್‌ಗಳ ಮೊರೆ ಹೋಗುತ್ತಾರೆ. 
icon

(6 / 11)

ಫಿಟ್ನೆಸ್‌ ಟ್ರೈನರ್‌: ಫಿಟ್ನೆಸ್‌ ಕಾಪಾಡಿಕೊಳ್ಳುವ ವಿಚಾರದಲ್ಲಿ ಈಗ ಜನರು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಾರೆ. ದೇಹ ತೂಕ ಇಳಿಸುವ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಫಿಟ್‌ ಆಗಿರುವುದು ಬಹಳ ಮುಖ್ಯ. ಫಿಟ್ನೆಸ್‌ ಟ್ರೈನರ್‌ಗಳಿಗೆ ಬೇಡಿಕೆ ಹೆಚ್ಚಿರುವ ಈ ಸಂದರ್ಭದಲ್ಲಿ ನೀವು ಟ್ರೈನಿಂಗ್‌ ಪಡೆದ ಫಿಟ್ನೆಸ್‌ ಟ್ರೈನಿಂಗ್‌ ಸೆಂಟರ್‌ ತೆರೆಯಬಹುದು.
icon

(7 / 11)

ಇನ್‌ಸ್ಟಾಗ್ರಾಂ ಇನ್ಸ್‌ಫ್ಲೂಯೆನ್ಸರ್‌: ಇನ್‌ಸ್ಟಾಗ್ರಾಂ ನೋಡುವಾಗ ಇನ್ಸ್‌ಫ್ಲೂಯೆನ್ಸರ್‌ಗಳನ್ನು ನೋಡಿದಾಗ ಇವರೇನು ಸಂಪಾದಿಸುತ್ತಾರೆ, ರೀಲ್ಸ್‌-ವಿಡಿಯೊಗಳನ್ನು ಮಾಡುವುದರಿಂದ ಇವರಿಗೇನು ಸಿಗುತ್ತದೆ ಎಂದು ನಿಮಗೆ ಅನ್ನಿಸಬಹುದು. ಆದರೆ ಖಂಡಿತ ಸ್ವಂತ ದುಡಿಮೆಗೆ ಇದೊಂದು ಬೆಸ್ಟ್‌ ಮಾರ್ಗ ಎನ್ನುವುದು ಮಾತ್ರ ಸುಳ್ಳಲ್ಲ. ನೀವು ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್‌ ಆಗಿ ದುಡಿಮೆ ಆರಂಭಿಸಬಹುದು. 
icon

(8 / 11)

ಮೆಹಂದಿ ಆರ್ಟ್‌: ಇದು ಕೂಡ ಸದ್ಯ ಟ್ರೆಂಡ್‌ನಲ್ಲಿದೆ. ಇದಕ್ಕೆ ನೀವು ಸಾಕಷ್ಟು ಬಂಡವಾಳ ಹಾಕಬೇಕು ಅಂತಲೂ ಇಲ್ಲ. ಮೆಹಂದಿ ಬಿಡಿಸಿ ಹಣ ಗಳಿಸುವುದು ಮಾತ್ರವಲ್ಲ, ಮೆಹಂದಿ ಡಿಸೈನ್‌ ಕೋರ್ಸ್‌ ಮೂಲಕವೂ ಹಣ ಗಳಿಸಬಹುದು. 
icon

(9 / 11)

ಫ್ಯಾನ್ಸಿ ಸ್ಟೋರ್‌: ಫ್ಯಾನ್ಸಿ ಸ್ಟೋರ್‌ ಕೂಡ ಸದ್ಯದ ಬ್ಯುಸಿನೆಸ್‌ ಟ್ರೆಂಡ್‌. ಫ್ಯಾನ್ಸಿ ಸ್ಟೋರ್‌ ಇಡುವ ಮುನ್ನ ಸೂಕ್ತ ಜಾಗ ಆರಿಸಿಕೊಳ್ಳಿ. ಅಲ್ಲದೇ ಫ್ಯಾನ್ಸಿ ಉತ್ಪನ್ನಗಳು ಕಡಿಮೆ ದರದಲ್ಲಿ ಎಲ್ಲಿ ಸಿಗುತ್ತದೆ ಎಂಬುದನ್ನು ಮಾರ್ಕೆಟ್‌ ರೀಸರ್ಚ್‌ ಮಾಡಿ. ಇದರಿಂದ ನೀವು ಸಾಕಷ್ಟು ಲಾಭ ಗಳಿಸಬಹುದು. ಎಲ್ಲಾ ಥರಹದ ಉತ್ಪನ್ನಗಳೂ ಇರುವಂತೆ ನೋಡಿಕೊಳ್ಳಿ. ಗಿಫ್ಟ್‌ಗಳಿಗೂ ಇರಲಿ ಜಾಗ. 
icon

(10 / 11)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(11 / 11)

ಇತರ ಗ್ಯಾಲರಿಗಳು