ಜಿಮ್‌ನಲ್ಲಿ ಬೆವರಿಳಿಸುತ್ತಿದ್ದೀರಾ? ಈ ತಪ್ಪುಗಳನ್ನು ಮಾಡಲೇಬೇಡಿ
ನೀವು ಪ್ರತಿದಿನ ಜಿಮ್‌ನಲ್ಲಿ ಬೆವರಿಳಿಸುತ್ತೀರಾ? ಆದರೂ ನಿಮ್ಮ ತೂಕದಲ್ಲಿ ವ್ಯತ್ಯಾಸವಾಗುತ್ತಿಲ್ಲವೆ? ನೀವು ಮಾಡುವ ಈ ಕೆಲವು ತಪ್ಪುಗಳು ನಿಮ್ಮ ದೇಹತೂಕವನ್ನು ನಿಯಂತ್ರಿಸಲು ಅಡ್ಡಿಪಡಿಸಬಹುದು. ಆ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕ, ನಿಮ್ಮ ಫಿಟ್‌ನೆಸ್ ಗುರಿಯನ್ನು ತಲುಪಲು ಸಾಧ್ಯ.
(1 / 7)
ದೈಹಿಕ ಫಿಟ್‌ನೆಸ್ ಅನ್ನು ಸುಧಾರಿಸಲು ಹಾಗೂ ಆರೋಗ್ಯದ ಗುರಿಗಳನ್ನು ಸಾಧಿಸಲು ಜಿಮ್‌ನಲ್ಲಿ ಬೆವರಿಳಿಸುವುದು ಉತ್ತಮ ಮಾರ್ಗವಾಗಿದೆ. ಅದಾಗ್ಯೂ, ನೀವು ಅನುಸರಿಸುವ ತಂತ್ರಗಳು ಹಾಗೂ ವಿಧಾನಗಳು ನಿಮ್ಮ ದೈನಂದಿನ ವ್ಯಾಯಾಮದ ದಿನಚರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜಿಮ್‌ನಲ್ಲಿ ದೇಹದಂಡನೆ ಮಾಡುವಾಗ ನಾವು ಅನುಸರಿಸುವ ಈ ಕೆಲವು ತಪ್ಪುಗಳು ನಮ್ಮ ಗುರಿಗೆ ಅಡ್ಡಪಡಿಸಬಹುದು. ಮಾತ್ರವಲ್ಲ, ಇದು ಅಪಘಾತಗಳಿಗೂ ಕಾರಣವಾಗಬಹುದು. ಹಾಗಾದರೆ ಜಿಮ್‌ನಲ್ಲಿ ನಾವು ಅನುಸರಿಸುವ ಕೆಲವು ಸಾಮಾನ್ಯ ತಪ್ಪುಗಳು ಯಾವುವು ತಿಳಿಯೋಣ ಬನ್ನಿ.
(2 / 7)
ನಿರ್ದಿಷ್ಟ ಯೋಜನೆ ಇರಲಿ: ಯಾವ ಕಾರಣಕ್ಕೆ ಜಿಮ್‌ಗೆ ಹೋಗುತ್ತಿದ್ದೇನೆ, ಯಾವ ಕಾರಣಕ್ಕೆ ನಾನು ವರ್ಕೌಟ್ ಮಾಡಬೇಕು ಎಂಬುದರ ಅರಿವಿಲ್ಲದೆ ಜಿಮ್‌ನಲ್ಲಿ ದೇಹದಂಡಿಸುವುದು ಪ್ರತಿಕೂಲ ಪರಿಸ್ಥಿತಿಗೆ ಕಾರಣವಾಗಬಹುದು. ರಚನಾತ್ಮಕ ವರ್ಕೌಟ್ ಪ್ಲಾನ್‌ದಿಂದ ಸ್ನಾಯುಗಳಿಗೆ ಬಲ ತುಂಬಬಹುದು, ಅಲ್ಲದೆ ನಮ್ಮ ಗುರಿಯನ್ನು ತಲುಪಲು ಸುಲಭವಾಗಬಹುದು.
(3 / 7)
ಕಳಪೆ ಪ್ರದರ್ಶನ: ವ್ಯಾಯಾಮದ ಸಮಯದಲ್ಲಿ ನೀವು ತೋರುವ ಕಳಪೆ ಪ್ರದರ್ಶನಗಳು ದೈಹಿಕ ಅಪಘಾತಕ್ಕೆ ಕಾರಣವಾಗಬಹುದು. ಅಲ್ಲದೆ ಇದು ವ್ಯಾಯಾಮದ ಪರಿಣಾಮವನ್ನು ಕುಂಠಿತಗೊಳಿಸಬಹುದು. ಉದ್ದೇಶಿತ ಸ್ನಾಯುಗಳ ಬಲ ಹೆಚ್ಚಳ ಹಾಗೂ ಅಪಘಾತದ ಸಂಭವವನ್ನು ಕಡಿಮೆ ಮಾಡಲು ಸರಿಯಾಗಿ ಗಮನ ಹರಿಸಿ ದೇಹದಂಡನೆ ಮಾಡುವುದು ಅವಶ್ಯ.
(4 / 7)
ಅತಿಯಾದ ದೇಹದಂಡನೆ: ಜಿಮ್‌ನಲ್ಲಿ ಅತಿಯಾಗಿ ದೇಹದಂಡಿಸುವುದು ಒಳ್ಳೆಯದಲ್ಲ. ಇದರಿಂದ ದೇಹಕ್ಕೆ ಸುಸ್ತಾಗುವ ಜೊತೆಗೆ ಹೃದಯ ಸಂಬಂಧಿ ಸಮಸ್ಯೆ ಉಂಟಾಗಲು ಕಾರಣವಾಗಬಹುದು. ವ್ಯಾಯಾಮದ ನಡುವೆ ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ದೇಹಕ್ಕೆ ಸಾಕಷ್ಟು ಸಮಯವನ್ನು ನೀಡುವುದು ಮುಖ್ಯ.
(5 / 7)
ಪೋಷಣೆಯನ್ನು ನಿರ್ಲಕ್ಷಿಸುವುದು: ಫಿಟ್‌ನೆಸ್ ಗುರಿಗಳನ್ನು ಸಾಧಿಸಲು ದೇಹಕ್ಕೆ ಸರಿಯಾದ ಪೋಷಣೆ ಒದಗಿಸುವುದು ಅತ್ಯಗತ್ಯ. ದೇಹಕ್ಕೆ ಅಗತ್ಯ ಎನ್ನಿಸುವ ಆಹಾರ ಪದಾರ್ಥಗಳನ್ನು ಸೇವಿಸದೇ ಇರುವುದು ವ್ಯಾಯಾಮವನ್ನು ಪರಿಣಾಮಕಾರಿಯನ್ನಾಗಿಸುವುದಿಲ್ಲ. ಪ್ರೊಟೀನ್, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಆರೋಗ್ಯಕರ ಕೊಬ್ಬನ್ನು ಒಳಗೊಂಡಿರುವ ಸಮತೋಲಿತ ಆಹಾರದ ಮೇಲೆ ಕೇಂದ್ರೀಕರಿಸುವುದು ಮುಖ್ಯ.
(6 / 7)
ವಾರ್ಮ್-ಅಪ್ ಮತ್ತು ಕೂಲ್-ಡೌನ್ ಮಾಡದೇ ಇರುವುದು: ವಾರ್ಮ್-ಅಪ್ ಮತ್ತು ಕೂಲ್-ಡೌನ್ ಮಾಡದೇ ಇರುವುದೂ ಅಪಾಯ. ಇದರಿಂದ ದೈಹಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆಯೂ ಇದೆ. ಅಲ್ಲದೆ ಇದು ವ್ಯಾಯಾಮದ ಪರಿಣಾಮವನ್ನು ತಗ್ಗಿಸುತ್ತದೆ. ಸ್ನಾಯುಗಳನ್ನು ಬೆಚ್ಚಗಾಗಿಸಲು ಕೆಲವು ನಿಮಿಷಗಳ ಲಘು ಕಾರ್ಡಿಯೊ ಮತ್ತು ಸ್ಟ್ರೆಚಿಂಗ್‌ನೊಂದಿಗೆ ಪ್ರಾರಂಭಿಸಬೇಕು. ಕೆಲವೊಂದು ಸ್ಟ್ರೆಚಿಂಗ್‌ಗಳ ಮೂಲಕ ಕೂಲ್ ಡೌನ್ ಮಾಡಬೇಕು.
ಇತರ ಗ್ಯಾಲರಿಗಳು