Gukesh Net worth: ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್ಗೆ ಸಿಕ್ತು 11 ಕೋಟಿ ಬಹುಮಾನ; 18ನೇ ವಯಸ್ಸಿಗೆ ಎಷ್ಟು ಕೋಟಿ ಒಡೆಯ?
- Gukesh Net worth: ಭಾರತದ ಗುಕೇಶ್ ದೊಮ್ಮರಾಜು ಅವರು ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಆಗಿದ್ದಾರೆ. ಹಾಗಿದ್ದರೆ ಅವರ ಆಸ್ತಿ ಎಷ್ಟಿದೆ? ಚೆಸ್ ಚಾಂಪಿಯನ್ ಆಗಿದ್ದಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

(1 / 5)
ಚೆನ್ನೈ ಮೂಲದ ಗುಕೇಶ್ ದೊಮ್ಮರಾಜು ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪ್ರಶಸ್ತಿ ಜಯಿಸಿದ ವಿಶ್ವದ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಮತ್ತು ವಿಶ್ವನಾಥನ್ ಆನಂದ್ ಅವರ ನಂತರ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.(D Gukesh Instagram)
(2 / 5)
ಗುಕೇಶ್‌ಗಿಂತ ಮೊದಲು, ರಷ್ಯಾದ ಗ್ಯಾರಿ ಕಾಸ್ಪರೋವ್ ಅವರು 1985 ರಲ್ಲಿ 22ನೇ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದರು. ಇದೀಗ ಗುಕೇಶ್ 18ನೇ ವಯಸ್ಸಿನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು 7.5-6.5 ರಿಂದ ಸೋಲಿಸುವ ಮೂಲಕ ದಾಖಲೆ ಬರೆದಿದ್ದಾರೆ.
(3 / 5)
ಈ ಹಿಂದೆ ವಿಶ್ವನಾಥನ್ ಆನಂದ್ ಅವರು ಒಟ್ಟು ಐದು ಬಾರಿ ಭಾರತಕ್ಕಾಗಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಗುಕೇಶ್ 17ನೇ ವಯಸ್ಸಿನಲ್ಲಿ FIDE ಕ್ಯಾಂಡಿಡೇಟ್ಸ್ ಚೆಸ್ ಚಾಂಪಿಯನ್‌ಶಿಪ್ ಗೆದ್ದು ಅಲ್ಲಿಯೂ ದಾಖಲೆಯ ಬರೆದಿದ್ದರು.
(4 / 5)
ಮಾಧ್ಯಮ ವರದಿಗಳ ಪ್ರಕಾರ, ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಡಿ ಗುಕೇಶ್ ಅವರು 11 ಕೋಟಿ ರೂಪಾಯಿ ಬಹುಮಾನ ಪಡೆಯಲಿದ್ದಾರೆ. ಗುಕೇಶ್ ಅವರ ಆಸ್ತಿ 8.26 ಕೋಟಿ ರೂಪಾಯಿ. ಈಗ ಅವರ ಆಸ್ತಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ.
ಇತರ ಗ್ಯಾಲರಿಗಳು