ಕನ್ನಡ ಸುದ್ದಿ  /  Photo Gallery  /  World Cup 2023 Final Venue Details Capacity History Renovation Cost All You Need To Know About Narendra Modi Stadium Prs

ಇಂಡೋ-ಆಸೀಸ್ ಅಂತಿಮ ಕದನಕ್ಕೆ ಮೋದಿ ಮೈದಾನ ಆತಿಥ್ಯ: ಪಂದ್ಯಕ್ಕೂ ಮುನ್ನ ವಿಶ್ವದ ಅತಿದೊಡ್ಡ ಸ್ಟೇಡಿಯಂನ ವಿಶೇಷತೆ ತಿಳಿಯಿರಿ

  • India vs Australia World Cup 2023 Final: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ವಿಶ್ವಕಪ್ ಫೈನಲ್‌ಗೆ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ಕಲ್ಪಿಸುತ್ತಿದೆ. ಆದರೆ ಪಂದ್ಯಕ್ಕೂ ಮುನ್ನ ಮುನ್ನ ಈ ಮೈದಾಬದ ಕುರಿತು ಮಾಹಿತಿ ತಿಳಿಯಿರಿ.

ನರೇಂದ್ರ ಮೋದಿ ಸ್ಟೇಡಿಯಂ ಗುಜರಾತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಕ್ರೀಡಾ ಸಂಕೀರ್ಣದಲ್ಲಿದೆ. ಮೊಟೆರಾದಲ್ಲಿನ ಕ್ರೀಡಾಂಗಣ ನವೀಕರಿಸಿದ ನಂತರ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿ ಮರುನಾಮಕರಣ ಮಾಡಲಾಯಿತು. ಈ ಸ್ಟೇಡಿಯಂ ವೀಕ್ಷಕರ ವಿಷಯದಲ್ಲಿ ವಿಶ್ವದಲ್ಲೇ ನಂ.1 ಆಗಿದೆ. ಆಧುನಿಕ ಮೂಲಸೌಕರ್ಯ, ಸೌಲಭ್ಯಗಳ ವಿಷಯದಲ್ಲಿ ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಯಾವುದೇ ಕ್ರೀಡಾಂಗಣಕ್ಕಿಂತ ಹಿಂದೆ ಉಳಿದಿಲ್ಲ.
icon

(1 / 9)

ಮೊಟೆರಾದ ಕ್ರಿಕೆಟ್ ಸ್ಟೇಡಿಯಂ ಅನ್ನು 1982ರಲ್ಲಿ ಸ್ಥಾಪಿಸಲಾಯಿತು. 2006ರ ಚಾಂಪಿಯನ್ಸ್ ಟ್ರೋಫಿಗೆ ಮುನ್ನ 3 ಹೊಸ ಪಿಚ್‌ಗಳನ್ನು ನಿರ್ಮಿಸಲಾಗಿತ್ತು. ಬಳಿಕ ನವೀಕರಣಗೊಳಿಸಿ ಹೊರಾಂಗಣ ಬದಲಾಯಿಸಲಾಯಿತು. ಆಧುನಿಕ ಫ್ಲಡ್‌ಲೈಟ್ಸ್, ಗ್ಯಾಲರಿಗಳನ್ನು ನಿರ್ಮಿಸಲಾಯಿತು. 2015 ರಿಂದ 2020ರ ನಡುವೆ ಹಳೆಯ ಕ್ರೀಡಾಂಗಣವನ್ನು ಕೆಡವಿ ಮರು ನಿರ್ಮಿಸಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಯಿತು.
icon

(2 / 9)

ಮೊಟೆರಾದ ಹೊಸ ಕ್ರೀಡಾಂಗಣವು ವಾಸ್ತವವಾಗಿ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು. ಅವರು ಗುಜರಾತ್‌ ಮುಖ್ಯಮಂತ್ರಿ ಮತ್ತು ಗುಜರಾತ್ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾಗಿದ್ದ ಸಮಯದಲ್ಲಿ, ಮೊಟೆರಾ ಕ್ರೀಡಾಂಗಣವನ್ನು ನವೀಕರಣಗೊಳಿಸಲು ಬಯಸ್ಸಿದ್ದರು. ತದನಂತರ ನವೀಕರಣಗೊಳಿಸಲು ಸುಮಾರು 800 ಕೋಟಿ ವೆಚ್ಚವಾಯಿತು. ಬಳಿಕ ಮೋದಿ ಅವರ ಹೆಸರನ್ನೇ ಮೈದಾನಕ್ಕೆ ಇಡಲಾಯಿತು.
icon

(3 / 9)

ವೀಕ್ಷಕರ ದೃಷ್ಟಿಯಿಂದ ವಿಶ್ವದಲ್ಲೇ ಅತಿ ದೊಡ್ಡ ಕ್ರೀಡಾಂಗಣವಾದ ನಮೋ ಸ್ಟೇಡಿಯಂನಲ್ಲಿ 1 ಲಕ್ಷದ 32 ಸಾವಿರ ಪ್ರೇಕ್ಷಕರು ಒಟ್ಟಿಗೆ ಕುಳಿತು ಆಟ ವೀಕ್ಷಿಸಬಹುದು. 1987, 1996 ಮತ್ತು 2011ರ ವಿಶ್ವಕಪ್‌ನ ಹಲವಾರು ಪ್ರಮುಖ ಪಂದ್ಯಗಳನ್ನು ಇಲ್ಲಿ ಆಯೋಜಿಸಲಾಗಿದೆ. 
icon

(4 / 9)

ನರೇಂದ್ರ ಮೋದಿ ಸ್ಟೇಡಿಯಂ 2023ರ ವಿಶ್ವಕಪ್‌ನ ಆರಂಭಿಕ ಪಂದ್ಯ ಮತ್ತು ಫೈನಲ್ ಸೇರಿದಂತೆ ಒಟ್ಟು 5 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಪ್ರಸಕ್ತ ವಿಶ್ವಕಪ್‌ನ ಹೈವೋಲ್ಟೇಜ್ ಭಾರತ-ಪಾಕಿಸ್ತಾನ ಪಂದ್ಯವೂ ಇಲ್ಲಿಯೇ ನಡೆದಿದ್ದು. ಭಾರತ ಗೆಲುವು ಸಾಧಿಸಿತ್ತು.
icon

(5 / 9)

ಹೊಸದಾಗಿ ಅನಾವರಣಗೊಂಡಿರುವ ನಮೋ ಸ್ಟೇಡಿಯಂ 55 ಕೊಠಡಿಗಳ ಕ್ಲಬ್‌ಹೌಸ್ ಹೊಂದಿದೆ. ನಾಲ್ಕು ಡ್ರೆಸ್ಸಿಂಗ್ ಕೊಠಡಿಗಳಿವೆ. ಈ ಕ್ರೀಡಾಂಗಣದಲ್ಲಿ 76 ಕಾರ್ಪೊರೇಟ್ ಬಾಕ್ಸ್‌ಗಳಿವೆ. ಕ್ರೀಡಾಂಗಣದ ಆವರಣದಲ್ಲಿ ಒಲಿಂಪಿಕ್ ಗಾತ್ರದ ಈಜುಕೊಳವಿದೆ. 
icon

(6 / 9)

ಕ್ರೀಡಾ ಸಂಕೀರ್ಣವು ಮೈದಾನದ ಹೊರಗೆ ಅಭ್ಯಾಸ ಪಿಚ್ ಮತ್ತು ಅಭ್ಯಾಸಕ್ಕಾಗಿ ಪ್ರತ್ಯೇಕ ಮೈದಾನವನ್ನು ಹೊಂದಿದೆ. ಬಿಸಿಸಿಐ ಹೋಮ್ ಪಂದ್ಯಗಳನ್ನು ಮುಖ್ಯ ಕ್ರೀಡಾಂಗಣದ ಹೊರಗಿನ ಮೈದಾನದಲ್ಲಿ ನಡೆಸಲಾಗುತ್ತದೆ.
icon

(7 / 9)

ದಿಗ್ಗಜ ಸುನಿಲ್ ಗವಾಸ್ಕರ್ ಈ ಮೈದಾನದಲ್ಲಿ 10,000 ಟೆಸ್ಟ್ ರನ್‌ಗಳ ಮೈಲಿಗಲ್ಲನ್ನು ತಲುಪಿದರು. ಇಲ್ಲಿ ಕಪಿಲ್ ದೇವ್ ತಮ್ಮ 432ನೇ ವಿಕೆಟ್‌ನೊಂದಿಗೆ ಆ ಸಮಯದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
icon

(8 / 9)

ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ವೇದಿಕೆ ಕಲ್ಪಿಸುತ್ತಿದೆ. ಭಾರತ 3ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ, ಆಸ್ಟ್ರೇಲಿಯಾ 6ನೇ ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ.
icon

(9 / 9)

ಇತರ ಗ್ಯಾಲರಿಗಳು