ಕ್ರಿಕೆಟ್ ವರ್ಲ್ಡ್ ಕಪ್ ನೋಡೋಕೆ ಅಹಮದಾಬಾದ್‌ಗೆ ಹೋಗ್ತಿದ್ದೀರಾ? ಮ್ಯಾಚ್ ಮುಗಿಸಿ ಈ ಸುಂದರ ಸ್ಥಳಗಳನ್ನು ಎಕ್ಸ್‌ಪ್ಲೋರ್ ಮಾಡಿ ಬನ್ನಿ
ನವೆಂಬರ್ 19, ಭಾನುವಾರ ಗುಜರಾತ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯವನ್ನು ನೋಡಲು ಇಡೀ ಭಾರತವೇ ಎದುರು ನೋಡುತ್ತಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಮ್ಯಾಚ್ ನಡೆಯುತ್ತಿದ್ದು ಮ್ಯಾಚ್ ನೋಡಲು ಜನರು ಒಂದು ತಿಂಗಳ ಮುನ್ನವೇ ಟಿಕೆಟ್ ಕಾಯ್ದಿರಿಸಿದ್ದಾರೆ.
(1 / 10)
ಫೈನಲ್ ಮ್ಯಾಚ್ ಭಾರತದಲ್ಲೇ ನಡೆಯುತ್ತಿರುವುದರಿಂದ ದೇಶದ ಎಲ್ಲಾ ಕಡೆಗಳಿಂದ ಕ್ರಿಕೆಟ್‌ಪ್ರೇಮಿಗಳು ಅಹಮದಾಬಾದ್‌ಗೆ ದೌಡಾಯಿಸುತ್ತಿದ್ದಾರೆ. ಮ್ಯಾಚ್ ನೋಡುವುದು ಮಾತ್ರವಲ್ಲ, ಅಹಮದಾಬಾದ್‌ನಲ್ಲಿ ವಿವಿಧ ಸ್ಥಳಗಳನ್ನು ನೋಡಲು, ಅಲ್ಲಿ ಶಾಪಿಂಗ್ ಮಾಡಲು ಕೂಡಾ ಟ್ರಾವೆಲ್‌ಪ್ರಿಯರು ಎದುರು ನೋಡುತ್ತಿದ್ಧಾರೆ. ಹಾಗಾದರೆ ಅಹಮದಾಬಾದ್‌ನಲ್ಲಿ ಯಾವೆಲ್ಲಾ ಸ್ಥಳಗಳನ್ನು ನೋಡಬಹುದು? ಶಾಪಿಂಗ್ ಮಾಡಲು ಉತ್ತಮ ಸ್ಥಳ ಯಾವುದು? ಎನ್ನುವುದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
(2 / 10)
ಅಹಮದಾಬಾದ್‌ನ ಪ್ರಮುಖ ಆಕರ್ಷಣೆ ಸಬರಮತಿ ಆಶ್ರಮ. ರಾಷ್ಟ್ರಪಿತ ಬಳಸುತ್ತಿದ್ದ ವಸ್ತುಗಳನ್ನು ಇಲ್ಲಿನ ವಸ್ತು ಸಂಗ್ರಹಾಲಯದಲ್ಲಿ ನೋಡಬಹುದು. ಜೊತೆಗೆ ಗ್ಯಾಲರಿ ಗ್ರಂಥಾಲಯಗಳು ಕೂಡಾ ಇದೆ. ಇದರೊಂದಿಗೆ ಜಮಾ ಮಸೀದಿ, ಅದ್ಲಾಜ್ ಸ್ಟೆಪ್‌ವೆಲ್, ಕಂಕಾರಿಯಾ ಸರೋವರ, ಸಿಡಿ ಸೈಯದ್ ಮಸೀದಿ, ಸ್ವಾಮಿ ನಾರಾಯಣ ದೇವಸ್ಥಾನ, ಸರ್ಖೇಜ್ ರೋಜಾ ಮತ್ತು ಅಕ್ಷರಧಾಮ ದೇವಾಲಯಗಳಿಗೆ ಭೇಟಿ ನೀಡಬಹುದು.
(3 / 10)
ಅಹಮದಾಬಾದ್‌ನಲ್ಲಿ ನೀವು ಭಾರತದ ಅತ್ಯಂತ ಪ್ರಸಿದ್ಧ ಜವಳಿ ವಸ್ತುಸಂಗ್ರಹಾಲಯವಾದ ಕ್ಯಾಲಿಕೋ ಮ್ಯೂಸಿಯಂ ಆಫ್ ಟೆಕ್ಸ್ಟೈಲ್ಸ್‌ಗೆ ಹೋಗಿ ಬರಬಹುದು. ಇದು 500 ವರ್ಷಗಳಷ್ಟು ಹಳೆಯದು. ಗಾಳಿಪಟ ವಸ್ತುಸಂಗ್ರಹಾಲಯವು ಕೂಡಾ ಅಹಮದಾಬಾದ್‌ನ ಮತ್ತೊಂದು ಸುಂದರ ಸ್ಥಳ. 120 ಕ್ಕೂ ಹೆಚ್ಚು ಬಗೆಯ ವಿವಿಧ ಗಾಳಿಪಟಗಳು ಇಲ್ಲಿವೆ.
(PC: DISTRICT AHMEDABAD)(4 / 10)
ಅಹಮದಾಬಾದ್‌ನಲ್ಲಿ ವಿವಿಧ ರೆಸ್ಟೋರೆಂಟ್‌ಗಳಿವೆ. ಇಲ್ಲಿ ನೀವು ಗುಜರಾತಿ ಥಾಲಿಯನ್ನು ರುಚಿ ಮಾಡಬಹುದು. ದಕ್ಷಿಣ ಭಾರತಕ್ಕಿಂತ ಇಲ್ಲಿನ ಫುಡ್ ಬಹಳ ವಿಭಿನ್ನವಾಗಿದೆ.
(5 / 10)
ನಿಮಗೆ ಸಮಯ ಇದ್ದರೆ ಗಾಂಧಿನಗರಕ್ಕೆ ಭೇಟಿ ನೀಡಿದರೆ ಅಲ್ಲಿ ಕೂಡಾ ನಿಮಗೆ ನೋಡಲು ಸಾಕಷ್ಟು ಸ್ಥಳಗಳಿವೆ. ಅದಾಲಜ್ ಎಂಬಲ್ಲಿ ರುದಾಬಾಯ್ ಮೆಟ್ಟಿಲುಗಳ ಬಾವಿ ಇದೆ. ಇದನ್ನು 1498 ರಲ್ಲಿ ರಣವೀರ್ ಸಿಂಗ್ ಅವರ ನೆನಪಿಗಾಗಿ ಅವರ ಪತ್ನಿ ರಾಣಿ ರುದಾದೇವಿ ನಿರ್ಮಿಸಿದರು.
(6 / 10)
ಮಾಣೆಕ್ ಚೌಕ್, ಅಹಮದಾಬಾದ್‌ನಲ್ಲಿರುವ ಅತ್ಯಂತ ಹಳೆಯ ಸ್ಥಳವಾಗಿದೆ. ಬೆಂಗಳೂರಿನ ಚಿಕ್ಕಪೇಟೆ, ತಿಂಡಿಬೀದಿಯಂತೆ ನೀವು ಇಲ್ಲಿ ಬಟ್ಟೆ, ಜೂವೆಲರಿ ಹಾಗೂ ಇನ್ನಿತರ ವಸ್ತುಗಳನ್ನು ಶಾಪಿಂಗ್ ಮಾಡಬಹುದು, ಸ್ಟ್ರೀಟ್ ಫುಡ್ ಸವಿಯಬಹುದು.
(7 / 10)
ಅಹಮದಾಬಾದ್‌ನಲ್ಲಿರುವ ಪುರಾತನದ ಸ್ಥಳಗಳಲ್ಲಿ ಹುತೀ ಸಿಂಗ್ ದೇವಾಲಯ ಕೂಡಾ ಒಂದು. ಇದನ್ನು 1848 ರಲ್ಲಿ ಹುತೀ ಸಿಂಗ್ ಕುಟುಂಬದವರು ನಿರ್ಮಿಸಿದರು. ದೇವಾಲಯವು ಹಳೆಯ ಮಾರು-ಗುರ್ಜರ ದೇವಾಲಯದ ವಾಸ್ತುಶಿಲ್ಪ ಶೈಲಿಯನ್ನು ಒಳಗೊಂಡಿದೆ.
(8 / 10)
ಅಹಮದಾಬಾದ್‌ನಲ್ಲಿ ನೀವು ಗುಜರಾತಿನ ಸ್ಪೆಷಲ್ ಕ್ಯುಸಿನ್ ಫರ್ಸಾನ್ ರುಚಿ ನೋಡಲು ಅವಕಾಶವಿದೆ. ಇದನ್ನೂ ನೀವು ನಿಮ್ಮ ಮನೆಗೂ ಪಾರ್ಸಲ್ ತರಬಹುದು. ಢೋಕ್ಲಾ, ಖಮನ್, ಖಾಂಡ್ವಿ, ಆಲೂ ಸೇವ್, ಧೆಬ್ರಾ ಸೇರಿದಂತೆ ಇನ್ನಿತರ ಸ್ನಾಕ್ಸ್‌ಗಳನ್ನು ನೀವು ಸವಿಯಬಹುದು.
(PC: Gujarati food in manitoba-Winnipeg)(9 / 10)
ಅಹಮದಾಬಾದ್‌ನಲ್ಲಿರುವ ಕಂಕಾರಿಯಾ , ನಗರದ ಎರಡನೇ ಅತಿ ದೊಡ್ಡ ಲೇಕ್ ಆಗಿದೆ. ರಾತ್ರಿಯಾಗುತ್ತಿದ್ದಂತೆ ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಪ್ರಶಾಂತ ವಾತಾವರಣ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ.
(PC: @incredibleindia)ಇತರ ಗ್ಯಾಲರಿಗಳು