World Heart Day: ಹೃದಯದ ಬಗ್ಗೆ ಕಾಳಜಿ ಇರಲಿ, ನನಗೆ ಏನೂ ಆಗುವುದಿಲ್ಲ ಎಂಬ ವಿಶ್ವಾಸದ ಜೊತೆಗೆ ಹೃದಯದ ಪರೀಕ್ಷೆಯನ್ನೂ ಮಾಡಿಸಿ
- World Heart Day 2024: ಸಾಮಾನ್ಯವಾಗಿ ಆಗಾಗ ಹೃದಯಾಘಾತದ ಸುದ್ದಿ ಕೇಳುತ್ತಲೇ ಇರುತ್ತೀರಿ. ಅದರ ಬಗ್ಗೆ ನಿಮಗೆ ಭಯವೂ ಇರಬಹುದು. ಆದರೆ ಅದೇ ಭಯದಲ್ಲಿ ಬದುಕುವುದಕ್ಕಿಂತ ವರ್ಷಕ್ಕೊಮ್ಮೆ ನಿಮ್ಮ ಹೃದಯದ ಪರೀಕ್ಷೆ ಮಾಡಿಸಿ. ಹೃದಯದ ಬಗ್ಗೆ ಕಾಳಜಿ ಇರಲಿ.

(1 / 8)
ಒತ್ತಡದ ಬದುಕಿನಲ್ಲಿ ಕಳೆದು ಹೋಗುವುದರ ಜೊತೆಗೆ ನಿಮ್ಮ ಹೃದಯದ ಕಾಳಜಿಗೂ ಸ್ವಲ್ಪ ಸಮಯ ಮೀಸಲಿಡಿ. ನಿಮ್ಮ ಹೃದಯದ ಆರೋಗ್ಯ ಹೇಗಿದೆ ಎಂದು ಒಮ್ಮೆ ಪರೀಕ್ಷೆ ಮಾಡಿಸಿ.
(2 / 8)
ಕುತ್ತಿಗೆ ನೋವು, ದವಡೆ ನೋವು, ವಾಂತಿ, ಬೆವರು, ಆಯಾಸ, ಅಜೀರ್ಣ ಈ ಎಲ್ಲ ಲಕ್ಷಣಗಳು ಕಂಡುಬಂದರೆ ನೀವು ಎಚ್ಚರಿಕೆಯಿಂದಿರಬೇಕು.
(3 / 8)
ಮಹಿಳೆಯರು ಪರುಷರಿಗಿಂತ ಕಡಿಮೆ ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ. ಆದರೆ ಹೃದಯಾಘಾತ ಆಗುವುದೇ ಇಲ್ಲ ಎಂದು ಅತಿಯಾಗಿ ಧೈರ್ಯ ತಂದುಕೊಳ್ಳುವ ಬದಲು ಎಚ್ಚರಿಕೆಯಿಂದ ಇರಿ.
(4 / 8)
ಎದೆನೋವು ಅಥವಾ ಎದೆ ಉರಿ ಬಂದಾಗಲೂ ಅದನ್ನು ನಿರ್ಲಕ್ಷಿಸಿ ಪಿತ್ತ ಅಥವಾ ಗ್ಯಾಸ್ ಸಮಸ್ಯೆ ಇರಬಹುದು ಎಂದು ನಿಮ್ಮಷ್ಟಕ್ಕೆ ನೀವೇ ಅಂದುಕೊಳ್ಳುವುದು ತಪ್ಪು.
(5 / 8)
ಹೃದಯದ ಬಗ್ಗೆ ಕಾಳಜಿ ಇರಲಿ. ನನಗೇನೂ ಆಗಿಲ್ಲ, ಆಗೋದು ಇಲ್ಲ ಎಂಬ ವಿಶ್ವಾಸ ಎಷ್ಟು ಮುಖ್ಯವೋ ಆಗಾಗ ಪರೀಕ್ಷೆ ಮಾಡಿಸಿಕೊಳ್ಳುವುದೂ ಅಷ್ಟೇ ಮುಖ್ಯ.
(6 / 8)
ಎದೆ ನೋವು ಬಂದಾಗ ಡಾಕ್ಟರ್ ಸಲಹೆಯನ್ನು ತೆಗೆದುಕೊಳ್ಳದೆ ನೀವೇ ನಿಮ್ಮಷ್ಟಕ್ಕೆ ಮಾತ್ರೆ ತೆಗೆದುಕೊಳ್ಳುವುದು ಸರಿಯಲ್ಲ.
ಇತರ ಗ್ಯಾಲರಿಗಳು