ಗ್ರ್ಯಾಮಿ ಅವಾರ್ಡ್‌ಗೆ ತಾರಾ ಮೆರುಗು: ಹುಟ್ಟುಡುಗೆಗೆ ಆಭರಣದ ನಿಲುವಂಗಿ, ರೆಡ್‌ಕಾರ್ಪೆಟ್‌ನಲ್ಲಿ ಉಡುಗೆಯ ಅಂದ, ನಡಿಗೆಯ ಚಂದ
Grammy Awards 2024: 66ನೇ ಗ್ರ್ಯಾಮಿ ಅವಾರ್ಡ್ ರೆಡ್ ಕಾರ್ಪೆಟ್ ಕಾರ್ಯಕ್ರಮವು ಗ್ಲಾಮರ್ ಮತ್ತು ಫ್ಯಾಷನ್‌ನ ಸಮಾಗಮ. ಹಾಲಿವುಡ್ ನಟಿಯರು ಅಂದದ ಉಡುಗೆ ತೊಟ್ಟು ಚಂದದ ಪೋಸ್ ನೀಡಿದ್ದಾರೆ. ಅವಾರ್ಡ್ ಕಾರ್ಯಕ್ರಮದಲ್ಲಿ ಕಂಡ ಚೆಲುವೆಯರ ಫೋಟೋಗಳು ಇಲ್ಲಿವೆ.
(1 / 8)
2024ರ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಸಂಗೀತ ಪ್ರೇಮಿಗಳಿಗೆ ಇಷ್ಟವಾಗುವಂತಹ ಬೃಹತ್ ಮ್ಯೂಸಿಕ್ ನೈಟ್ ಲಾಸ್ ಏಂಜೆಲ್ಸ್‌ನಲ್ಲಿ ನಡೆದಿದೆ. ಈ ರೆಡ್ ಕಾರ್ಪೆಟ್ ಕಾರ್ಯಕ್ರಮಕ್ಕೆ ಪ್ರಮುಖ ನಟಿಯರು, ನಟರು ಆಗಮಿಸಿದ್ದಾರೆ. ಟೇಲರ್ ಸ್ವಿಫ್ಟ್, ಮಿಲೀ ಸೈರಸ್, ದುವಾ ಲಿಪಾ ಮತ್ತು ಇತರರು ಈ ಕಾರ್ಯಕ್ರಮದ ಅಂದ ಹೆಚ್ಚಿಸಿದ್ದಾರೆ.
(2 / 8)
ಪ್ಯಾರಿಸ್ ಹಿಲ್ಟನ್: 66ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಸಮ್ಮೋಹನಗೊಳಿಸುವ ನೀಲಿ ಅಲಂಕಾರ ಮತ್ತು ಬೆಳ್ಳಿಯ ಟಸೆಲ್‌ನಿಂದ ಅಲಂಕಾರಗೊಂಡ ಗೌನ್ ತೊಟ್ಟು ಪ್ಯಾರಿಸ್ ಹಿಲ್ಟನ್ ಆಗಮಿಸಿದ್ದಾರೆ. ಇವರ ಗ್ಲಾಮರ್ ಹೆಚ್ಚಿಸಲು ಸರಳ ಮೇಕಪ್ ಮಾಡಿಕೊಂಡಿದ್ದಾರೆ. ಡೈಮಂಡ್ ಡ್ರಾಪ್ ಕಿವಿಯೋಲೆಗಳನ್ನು ಧರಿಸಿದ್ದರು. (Jordan Strauss/Invision/AP)
(3 / 8)
ದುವಾ ಲಿಪಾ: ಮೆಟಾಲಿಕ್ ಗೌನ್ ತೊಟ್ಟು ಗ್ರ್ಯಾಮಿ ಅವಾರ್ಡ್ ರೆಡ್ ಕಾರ್ಪೆಟ್‌ನಲ್ಲಿ ದುವಾ ಲಿಪಾ ಚಕಿತಗೊಳಿಸಿದ್ದಾರೆ. ಕಸ್ಟಮ್ ಕೊರೆಜೆಸ್ ಮತ್ತು ಟಿಫಾನಿ ನೆಕ್ಲೇಸ್ ಧರಿಸಿದ್ದರು. ವಿ-ನೆಕ್‌ಲೈನ್, ಪೂರ್ಣ ತೋಳುಗಳು, ಮ್ಯಾಕ್ಸಿ ಹೆಮ್ ವಿನ್ಯಾಸದ ಈ ಉಡುಗೆ ಸೈಡ್ ಕಟ್-ಔಟ್‌ಗಳನ್ನು ಒಳಗೊಂಡಿತ್ತು. (REUTERS/Mario Anzuoni)
(4 / 8)
ಮಿಸ್ ಟೇಲರ್: ಜನಪ್ರಿಯ ಗಾಯಕಿ ಮಿಸ್ ಟೇಲರ್ ಅವರು ಗ್ರ್ಯಾಮಿ ಅವಾರ್ಡ್ ರೆಡ್ ಕಾರ್ಪೆಟ್ ಕಾರ್ಯಕ್ರಮಕ್ಕೆ ಬಿಳಿ ಗೌನ್ ತೊಟ್ಟು ಆಗಮಿಸಿದರು. ಕೈಗೆ ಕಪ್ಪು ಗ್ಲೌಸ್ ಧರಿಸಿದ್ದರು.(REUTERS/Mario Anzuoni)
(5 / 8)
ಮಿಲೀ ಸೈರಸ್: ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮಕ್ಕೆ ಜನಪ್ರಿಯ ಪಾಪ್ ತಾರೆ ಮಿಲೀ ಸೈರಸ್ ಆಗಮಿಸಿದ್ದರು. ಅವರ ಉಡುಗೆಯನ್ನು ಎಲ್ಲರೂ ಮತ್ತೆ ಮತ್ತೆ ನೋಡುತ್ತಿದ್ದರು. ಬಹುತೇಕ ಚಿನ್ನದ ಪಿನ್‌ಗಳಿಂದ ಜೋಡಿಸಿರುವಂತಹ ವಿನೂತನ ಉಡುಪನ್ನು ಧರಿಸಿದ್ದರು. ನಗ್ನ ದೇಹಕ್ಕೆ ಆಭರಣಗಳ ನಿಲುವಂಗಿ ತೊಡಿಸಿದ್ದರು.(REUTERS/Mario Anzuoni)
(6 / 8)
ಬಿಲ್ಲಿ ಎಲೀಸ್: ಗೀತೆ ರಚನೆಗಾರ್ತಿ ಬಿಲ್ಲಿ ಎಲಿಸ್ ಅವರು ಬಾರ್ಬಿ ಬಾಂಬರ್ ಜಾಕೆಟ್‌ನಲ್ಲಿ ಗಮನ ಸೆಳೆದರು. ದೊಡ್ಡ ಗಾತ್ರದ ಬಿಳಿ ಶರ್ಟ್, ಕಪ್ಪು ಟೈ ಮತ್ತು ಜೋಲಾಡುವ ಕಪ್ಪು ಪ್ಯಾಂಟ್‌ನೊಂದಿಗೆ ಗ್ಲಾಮರ್ ಅನ್ನು ಮರುವ್ಯಾಖ್ಯಾನಿಸಿದರು. (REUTERS/Mario Anzuoni)
(7 / 8)
ಬೆಬೆ ರೆಕ್ಷಾ: ಅದ್ಭುತವಾದ ಕಪ್ಪು ಗೌನ್‌ನಲ್ಲಿ ಪೋಸ್ ನೀಡಿದರು. ಆಫ್-ದಿ-ಶೋಲ್ಡರ್ ನೆಕ್‌ಲೈನ್, ಫಿಶ್‌ನೆಟ್ ತೋಳುಗಳು, ಹೆಮ್‌ಲೈನ್ ಇತ್ಯಾದಿ ವಿಶೇಷಗಳನ್ನು ಹೊಂದಿರುವ ಉಡುಪು ಧರಿಸಿದ್ದರು. (REUTERS/Mario Anzuoni)
ಇತರ ಗ್ಯಾಲರಿಗಳು