ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  World No Tobacco Day: ಧೂಮಪಾನ ಮಾಡಬೇಕಂತೇನಿಲ್ಲ, ಬೀಡಿ-ಸಿಗರೇಟ್ ಹೊಗೆ ಉಸಿರಾಡಿದ್ರು ಆರೋಗ್ಯದ ಮೇಲಾಗುತ್ತೆ ಗಂಭೀರ ಪರಿಣಾಮ

World No Tobacco Day: ಧೂಮಪಾನ ಮಾಡಬೇಕಂತೇನಿಲ್ಲ, ಬೀಡಿ-ಸಿಗರೇಟ್ ಹೊಗೆ ಉಸಿರಾಡಿದ್ರು ಆರೋಗ್ಯದ ಮೇಲಾಗುತ್ತೆ ಗಂಭೀರ ಪರಿಣಾಮ

  • World No Tobacco Day 2024: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಹಲವರಿಗೆ ತಿಳಿದಿರುವ ವಿಚಾರ. ಆದರೆ ಧೂಮಪಾನ ಮಾಡುವುದು ಮಾತ್ರವಲ್ಲ, ಬೀಡಿ, ಸಿಗರೇಟಿನ ಹೊಗೆ ನಮ್ಮ ಉಸಿರಿಗೆ ಸೇರುವುದು ಕೂಡ ಅಷ್ಟೇ ಅಪಾಯಕಾರಿ. ಇದರಿಂದ ದೇಹದ ಮೇಲಾಗುವ ಪರಿಣಾಮಗಳ ಬಗ್ಗೆ ತಿಳಿಯಿರಿ.

World No Tobacco Day 2024: ಬೀಡಿ, ಸಿಗರೇಟ್‌, ಪಾನ್‌, ಗುಟ್ಕಾ ಹೀಗೆ ಯಾವುದೇ ರೂಪದಲ್ಲಿ ತಂಬಾಕು ಸೇವಿಸುವುದು ಆರೋಗ್ಯಕ್ಕೆ ಮಾರಕ. ಇದು ಕ್ಯಾನ್ಸರ್‌ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ನಿರಂತರ ಧೂಮಪಾನವು ಸಾವಿಗೆ ನಮ್ಮನ್ನು ಹತ್ತಿರವಾಗಿಸುತ್ತದೆ. ಸೆಕೆಂಡ್‌ ಹ್ಯಾಂಡ್‌ ಸ್ಮೋಕಿಂಗ್‌ ಅಥವಾ ನಿಷ್ಕ್ರೀಯ ಧೂಮಪಾನ ಕೂಡ ಆರೋಗ್ಯಕ್ಕೆ ಅಷ್ಟೇ ಅಪಾಯ. ನಿಷ್ಕ್ರೀಯ ಅಥವಾ ಪ್ಯಾಸಿವ್‌ ಸ್ಮೋಕಿಂಗ್‌ ಎಂದರೆ ಸಕ್ರಿಯ ಧೂಮಪಾನಿಗಳ ಕಾರಣದಿಂದ ಹೊಗೆಗೆ ನಮ್ಮನ್ನು ಒಡ್ಡಿಕೊಳ್ಳುವುದು. ಇದು ನಾವು ಸಿಗರೇಟ್‌, ಬೀಡಿ ಸೇದದೇ ಇದ್ದರೂ ನಮ್ಮನ್ನು ಅಪಾಯಕ್ಕೆ ಒಡ್ಡುತ್ತದೆ. ಪ್ರತಿ ವರ್ಷ ಧೂಮಪಾನ ತ್ಯಜಿಸಲು ಹಾಗೂ ಆರೋಗ್ಯಕರ ಜೀವನಶೈಲಿ ಪಾಲಿಸಲು ಜನರಿಗೆ ಒತ್ತಾಯ ಮಾಡುವ ಉದ್ದೇಶದಿಂದ ವಿಶ್ವ ತಂಬಾಕು ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಮೇ 31 ರಂದು ಈ ದಿನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ.
icon

(1 / 7)

World No Tobacco Day 2024: ಬೀಡಿ, ಸಿಗರೇಟ್‌, ಪಾನ್‌, ಗುಟ್ಕಾ ಹೀಗೆ ಯಾವುದೇ ರೂಪದಲ್ಲಿ ತಂಬಾಕು ಸೇವಿಸುವುದು ಆರೋಗ್ಯಕ್ಕೆ ಮಾರಕ. ಇದು ಕ್ಯಾನ್ಸರ್‌ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ನಿರಂತರ ಧೂಮಪಾನವು ಸಾವಿಗೆ ನಮ್ಮನ್ನು ಹತ್ತಿರವಾಗಿಸುತ್ತದೆ. ಸೆಕೆಂಡ್‌ ಹ್ಯಾಂಡ್‌ ಸ್ಮೋಕಿಂಗ್‌ ಅಥವಾ ನಿಷ್ಕ್ರೀಯ ಧೂಮಪಾನ ಕೂಡ ಆರೋಗ್ಯಕ್ಕೆ ಅಷ್ಟೇ ಅಪಾಯ. ನಿಷ್ಕ್ರೀಯ ಅಥವಾ ಪ್ಯಾಸಿವ್‌ ಸ್ಮೋಕಿಂಗ್‌ ಎಂದರೆ ಸಕ್ರಿಯ ಧೂಮಪಾನಿಗಳ ಕಾರಣದಿಂದ ಹೊಗೆಗೆ ನಮ್ಮನ್ನು ಒಡ್ಡಿಕೊಳ್ಳುವುದು. ಇದು ನಾವು ಸಿಗರೇಟ್‌, ಬೀಡಿ ಸೇದದೇ ಇದ್ದರೂ ನಮ್ಮನ್ನು ಅಪಾಯಕ್ಕೆ ಒಡ್ಡುತ್ತದೆ. ಪ್ರತಿ ವರ್ಷ ಧೂಮಪಾನ ತ್ಯಜಿಸಲು ಹಾಗೂ ಆರೋಗ್ಯಕರ ಜೀವನಶೈಲಿ ಪಾಲಿಸಲು ಜನರಿಗೆ ಒತ್ತಾಯ ಮಾಡುವ ಉದ್ದೇಶದಿಂದ ವಿಶ್ವ ತಂಬಾಕು ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಮೇ 31 ರಂದು ಈ ದಿನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ.(Unsplash)

ನಾವು ಧೂಮಪಾನಿಗಳಲ್ಲದೇ ಇದ್ದರೂ ಧೂಮಪಾನ ಮಾಡುವವರ ದೆಸೆಯಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಜೀವನದಲ್ಲಿ ಎಂದೂ ಧೂಮಪಾನ ಮಾಡದ ಜನರು ಕೂಡ ನಿಷ್ಕ್ರೀಯ ಧೂಮಪಾನಕ್ಕೆ ಒಡ್ಡಿಕೊಳ್ಳುವುದರಿಂದ ಸಾಯುತ್ತಾರೆ. ಹಾಗಾಗಿ ಧೂಮಪಾನ ಮಾಡುವವರು ತಮ್ಮ ಬಗ್ಗೆ ಮಾತ್ರವಲ್ಲ, ತಮ್ಮ ಸುತ್ತಲಿನ ಜನರು ಹಾಗೂ ಸಮಾಜದ ಬಗ್ಗೆಯೂ ಯೋಚಿಸಬೇಕು. 
icon

(2 / 7)

ನಾವು ಧೂಮಪಾನಿಗಳಲ್ಲದೇ ಇದ್ದರೂ ಧೂಮಪಾನ ಮಾಡುವವರ ದೆಸೆಯಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಜೀವನದಲ್ಲಿ ಎಂದೂ ಧೂಮಪಾನ ಮಾಡದ ಜನರು ಕೂಡ ನಿಷ್ಕ್ರೀಯ ಧೂಮಪಾನಕ್ಕೆ ಒಡ್ಡಿಕೊಳ್ಳುವುದರಿಂದ ಸಾಯುತ್ತಾರೆ. ಹಾಗಾಗಿ ಧೂಮಪಾನ ಮಾಡುವವರು ತಮ್ಮ ಬಗ್ಗೆ ಮಾತ್ರವಲ್ಲ, ತಮ್ಮ ಸುತ್ತಲಿನ ಜನರು ಹಾಗೂ ಸಮಾಜದ ಬಗ್ಗೆಯೂ ಯೋಚಿಸಬೇಕು. (Unsplash)

ನಿಷ್ಕ್ರೀಯ ಧೂಮಪಾನಿಗಳು ಎದುರಿಸುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಪರಿಧಮನಿಯ ಹೃದಯ ಸಂಬಂಧಿ ಸಮಸ್ಯೆಗಳು, ಕ್ಯಾನ್ಸರ್‌ ಮತ್ತು ಪಾರ್ಶ್ವವಾಯು ಪ್ರಮುಖವಾದದ್ದು. ಇದು ಅಕಾಲಿಕ ಮರಣಕ್ಕೂ ಕಾರಣವಾಗುತ್ತದೆ. 
icon

(3 / 7)

ನಿಷ್ಕ್ರೀಯ ಧೂಮಪಾನಿಗಳು ಎದುರಿಸುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಪರಿಧಮನಿಯ ಹೃದಯ ಸಂಬಂಧಿ ಸಮಸ್ಯೆಗಳು, ಕ್ಯಾನ್ಸರ್‌ ಮತ್ತು ಪಾರ್ಶ್ವವಾಯು ಪ್ರಮುಖವಾದದ್ದು. ಇದು ಅಕಾಲಿಕ ಮರಣಕ್ಕೂ ಕಾರಣವಾಗುತ್ತದೆ. (Unsplash)

ಧೂಮಪಾನದ ಹೊಗೆ ಉಸಿರಾಡುವ ಮಹಿಳೆಯರರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದರಿಂದ ಹುಟ್ಟಲಿರುವ ಮಗುವಿನ ತೂಕ ಕಡಿಮೆಯಾಗುವುದು, ಮಗುವಿಗೆ ತೊಂದರೆಯಾಗುವುದು ಇಂತಹ ಸಮಸ್ಯೆಗಳು ಎದುರಾಗಬಹುದು. 
icon

(4 / 7)

ಧೂಮಪಾನದ ಹೊಗೆ ಉಸಿರಾಡುವ ಮಹಿಳೆಯರರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದರಿಂದ ಹುಟ್ಟಲಿರುವ ಮಗುವಿನ ತೂಕ ಕಡಿಮೆಯಾಗುವುದು, ಮಗುವಿಗೆ ತೊಂದರೆಯಾಗುವುದು ಇಂತಹ ಸಮಸ್ಯೆಗಳು ಎದುರಾಗಬಹುದು. (Unsplash)

ಧೂಮಪಾನದ ಹೊಗೆಯನ್ನು ಉಸಿರಾಡುವವ ಗರ್ಭಿಣಿ ಮಹಿಳೆಯರಿಗೆ ಹೊಟ್ಟೆಯಲ್ಲೇ ಮಗು ಸಾಯುವುದು, ಅಂಗವೈಕಲ್ಯದಂತಹ ಗಂಭೀರ ಸಮಸ್ಯೆಗಳು ಎದುರಾಗಬಹುದು. 
icon

(5 / 7)

ಧೂಮಪಾನದ ಹೊಗೆಯನ್ನು ಉಸಿರಾಡುವವ ಗರ್ಭಿಣಿ ಮಹಿಳೆಯರಿಗೆ ಹೊಟ್ಟೆಯಲ್ಲೇ ಮಗು ಸಾಯುವುದು, ಅಂಗವೈಕಲ್ಯದಂತಹ ಗಂಭೀರ ಸಮಸ್ಯೆಗಳು ಎದುರಾಗಬಹುದು. 

ನಿಷ್ಕ್ರೀಯ ಧೂಮಪಾನಕ್ಕೆ ಒಡ್ಡಿಕೊಂಡ ಒಂದು ಗಂಟೆಯೊಳಗೆ ಉರಿಯೂತ ಮತ್ತು ಉಸಿರಾಟದ ಸಮಸ್ಯೆಗಳು ಉಂಟಾಗಬಹುದು. ಧೂಮಪಾನದ ಹೊಗೆಗೆ ಒಡ್ಡಿಕೊಂಡ ಮೂರು ಗಂಟೆಯವರೆಗೆ ಇದರ ಪರಿಣಾಮ ಇರುತ್ತದೆ. 
icon

(6 / 7)

ನಿಷ್ಕ್ರೀಯ ಧೂಮಪಾನಕ್ಕೆ ಒಡ್ಡಿಕೊಂಡ ಒಂದು ಗಂಟೆಯೊಳಗೆ ಉರಿಯೂತ ಮತ್ತು ಉಸಿರಾಟದ ಸಮಸ್ಯೆಗಳು ಉಂಟಾಗಬಹುದು. ಧೂಮಪಾನದ ಹೊಗೆಗೆ ಒಡ್ಡಿಕೊಂಡ ಮೂರು ಗಂಟೆಯವರೆಗೆ ಇದರ ಪರಿಣಾಮ ಇರುತ್ತದೆ. (Unsplash)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(7 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು