World Photography Day 2024: ಕಬಿನಿ ಕರಿಚಿರತೆ ಛಾಯಾಚಿತ್ರ ಸೆರೆ ಹಿಡಿಯಲು ಕಾಡಿನಲ್ಲಿ ಈ ಛಾಯಾಗ್ರಾಹಕ ಎಷ್ಟು ವರ್ಷ ಕಳೆದಿರಬಹುದು
Wild life Photography ವನ್ಯಜೀವಿ ಛಾಯಾಗ್ರಹಣದಲ್ಲಿ ದೊಡ್ಡ ಹೆಸರು ಮಾಡಿರುವ ಶಾಜ್ ಜಂಗ್(Shaaz Jung) ದೇಶದಲ್ಲಿ ವಿಭಿನ್ನ ಎನಿಸಿರುವ ನಾಗರಹೊಳೆ ಕರಿ ಚಿರತೆ( Nagara Hole Black Panther) ಸೆರೆ ಹಿಡಿಯಲು ಪಟ್ಟ ಶ್ರಮ ಹೇಗಿರಬಹುದು. ವಿಶ್ವ ಛಾಯಾಗ್ರಹಣ ದಿನದ ಹಿನ್ನೆಲೆಯಲ್ಲಿ ಇಲ್ಲಿದೆ ಚಿತ್ರನೋಟ
(1 / 11)
ಛಾಯಾಗ್ರಹಣ ಎನ್ನುವುದು ಕಲೆ. ಅದು ಎಲ್ಲರಿಗೂ ಸಿದ್ದಿಸಿವುದಿಲ್ಲ. ಅದಕ್ಕೆ ವಿಶೇಷ ಕೌಶಲ್ಯವೇ ಬೇಕಾಗುತ್ತದೆ. ಕರ್ನಾಟಕದಲ್ಲಿ ಅಂತ ಹಲವಾರು ಛಾಯಾಗ್ರಾಹಕರು ನಮ್ಮ ನಡುವೆ ಇದ್ದಾರೆ.
(2 / 11)
ವನ್ಯಜೀವಿ ಛಾಯಾಗ್ರಹಣ ಕೌಶಲ್ಯದ ಜತೆ ತಾಳ್ಮೆಯನ್ನು ಬಯಸುತ್ತದೆ. ಕಾಡಲ್ಲಿ ವನ್ಯಜೀವಿಗಳು ಸುಲಭವಾಗಿ ಸಿಗುವುದಿಲ್ಲ. ಇನ್ನು ಛಾಯಾಗ್ರಹಣಕ್ಕೆ ಬೇಕಂದರೆ ಸಿಗೋದು ಕಷ್ಟ.
(3 / 11)
ಭಾರತದಲ್ಲಿ ಕಪ್ಪು ಚಿರತೆಯ ಕುರಿತು ಹೆಚ್ಚು ಚರ್ಚೆ. ಕೊಡಗು- ಮೈಸೂರು ಜಿಲ್ಲೆಯ ನಾಗರಹೊಳೆ ಕಬಿನಿ ಹಿನ್ನೀರಿನಲ್ಲಿ ಒಂದು ದಶಕದಿಂದ ಕರಿ ಚಿರತೆಯದ್ದೇ ಸದ್ದು. ಅದರ ಛಾಯಾಗ್ರಹಣಕ್ಕೆ ಬಂದವರು ಅದೆಷ್ಟೋ.
(4 / 11)
ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶಗಳಿಂದಲೂ ಹಲವಾರು ಛಾಯಾಗ್ರಹಕರು ಈ ಕರಿ ಚಿರತೆ ಹುಡುಕಿಕೊಂಡು ಬರುತ್ತಾರೆ. ಅದು ಕಣ್ಣಿಗೆ ಬೀಳುವ ಜತೆಗೆ ಕ್ಯಾಮರ್ ಕಣ್ಣಿಗೆ ಬೀಳುವುದು ಸುಲಭ ಅಲ್ಲೇ ಅಲ್ಲ.
(5 / 11)
ಚರ್ಮದ ಸಮಸ್ಯೆಯಿಂದ ಕಪ್ಪು ಬಣ್ಣ ಹೊಂದಿರುವ ಈ ಚಿರತೆಗೆ ಸಾಯಾ ಎನ್ನುವ ಹೆಸರಿಡಲಾಗಿದೆ. ಇದರ ಮೇಲೆ ಸಾಕ್ಷ್ಯಚಿತ್ರಗಳೂ ಸಾಕಷ್ಟು ಬಂದಿವೆ. ಇದು ಕರ್ನಾಟಕದ ಅರಣ್ಯ, ಪರಿಸರ ಪ್ರವಾಸೋದ್ಯಮದ ಆಕರ್ಷಣೆಯೂ ಹೌದು.
(6 / 11)
ಆದರೆ ಭಾರತದ ಖ್ಯಾತ ಛಾಯಾಗ್ರಾಹಕ ಹಾಗೂ ಉದ್ಯಮಿ ಶಾಜ್ ಜಂಗ್(Shaaz jung) ಮಾತ್ರ ನಿಜಕ್ಕೂ ಅದೃಷ್ಟವಂತರೇ. ಅವರಿಗೆ ಅದೆಷ್ಟು ಬಾರಿ ಈ ಕರಿ ಚಿರತೆ ದರ್ಶನ ನೀಡಿದೆಯೋ ಗೊತ್ತೇ ಇಲ್ಲ
(7 / 11)
ಶಾಜ್ ಜಂಗ್ ಅವರಿಗೆ ಈ ಕರಿ ಚಿರತೆ ಹೋದಾಗಲೆಲ್ಲಾ ಸಿಕ್ಕಿಲ್ಲ. ಆದರೆ ಸಿಕ್ಕ ಸಮಯದಲ್ಲಿ ಮಾತ್ರ ಭಾರೀ ಪೋಸುಗಳನ್ನು ನೀಡಿ ಹುರುದುಂಬಿಸಿದೆ. ಇದರಿಂದಲೇ ಜಂಗ್ ಅವರು ಕರಿಚಿರತೆಯ ನೂರಾರು ಭಂಗಿ , ಭಾವಗಳ ಫೋಟೋ ಸೆರೆ ಹಿಡಿದಿದ್ದಾರೆ.
(8 / 11)
ಶಾಜ್ ಜಂಗ್ ಅವರು ಸತತ ಐದು ವರ್ಷ ಕಾಲ ಕಬಿನಿ ಅರಣ್ಯ ಪ್ರದೇಶವನ್ನೇ ತಮ್ಮ ವಾಸ ಸ್ಥಾನ ಮಾಡಿಕೊಂಡಿದ್ದರು. ಅಂದರೆ ಐದು ವರ್ಷ ಕಾಲ ನಿರಂತರ ಕಾಡಿಗೆ ಬರುವುದು ಹೋಗುವುದು ಅವರ ದಿನಚರಿಯೇ ಆಗಿತ್ತು.
(9 / 11)
ಈ ಕಾರಣದಿಂದಲೇ ಈ ಕರಿಚಿರತೆಯ ಕುರಿತು ನಿಖರ ಮಾಹಿತಿ, ಎಲ್ಲಿ ಹೋಗುತ್ತಿದೆ. ಏನು ಮಾಡುತ್ತಿದೆ ಎನ್ನುವ ಮಾಹಿತಿ ಆಧರಿಸಿಯೇ ಅವರು ಚಿತ್ರ ತೆಗೆದಿರುವುದು ವಿಶೇಷ.
(10 / 11)
ಶಾಜ್ ಜಂಗ್ ಅವರು ನಾಗರಹೊಳೆ ಪ್ರದೇಶದಲ್ಲಿಯೇ ತಮ್ಮದೇ ರೆಸಾರ್ಟ್ ಬೈಸನ್ ಕಬಿನಿ (TheBisonKabini) ಕೂಡ ಹೊಂದಿದ್ದಾರೆ. ನಿಕಾನ್ ಇಂಡಿಯಾ (NikonIndia)ಹಾಗೂ ಸ್ಯಾಮ್ಸಂಗ್ ಇಂಡಿಯಾ (SamsungIndia)ದ ರಾಯಭಾರೀಯೂ ಹೌದು.
ಇತರ ಗ್ಯಾಲರಿಗಳು