ಗೆದ್ದರೂ ಇಂಗ್ಲೆಂಡ್ ತಟಸ್ಥ, ಸೋತು ಭಾರಿ ಕುಸಿತ ಕಂಡ ಭಾರತ; ಡಬ್ಲ್ಯುಟಿಸಿ ಅಂಕಪಟ್ಟಿ ಹೀಗಿದೆ
- ICC World Test Championship Points Table: ಭಾರತದ ವಿರುದ್ಧ ಗೆದ್ದರೂ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ತಟಸ್ಥವಾಗಿದೆ. ಆದರೆ ಸೋತ ರೋಹಿತ್ ಪಡೆ, ಕೆಳಕ್ಕೆ ಜಾರಿದೆ. ಇಲ್ಲಿದೆ ನೋಡಿ ಅಂಕಪಟ್ಟಿ.
- ICC World Test Championship Points Table: ಭಾರತದ ವಿರುದ್ಧ ಗೆದ್ದರೂ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ತಟಸ್ಥವಾಗಿದೆ. ಆದರೆ ಸೋತ ರೋಹಿತ್ ಪಡೆ, ಕೆಳಕ್ಕೆ ಜಾರಿದೆ. ಇಲ್ಲಿದೆ ನೋಡಿ ಅಂಕಪಟ್ಟಿ.
(1 / 11)
ಜನವರಿ 28ರಂದು ಎರಡು ಬೇರೆ ಬೇರೆ ಸ್ಥಳಗಳಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಆತಿಥೇಯ ತಂಡಗಳಿಗೆ ಪ್ರವಾಸಿ ತಂಡಗಳು ಆಘಾತ ನೀಡಿವೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಹಾಗೂ ಕೊನೆಯ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದು ಚರಿತ್ರೆ ಸೃಷ್ಟಿಸಿದೆ.(AFP)
(2 / 11)
ಮತ್ತೊಂದೆಡೆ ಭಾರತದ ನೆಲದಲ್ಲಿ ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ ಮಹೋನ್ನತ ದಾಖಲೆ ಬರೆದಿದೆ. ಮೊದಲ ಟೆಸ್ಟ್ನಲ್ಲಿ 28 ರನ್ಗಳ ಗೆಲುವು ಸಾಧಿಸಿದೆ. ಹಾಗಾದರೆ ಎರಡೂ ಪಂದ್ಯಗಳ ನಂತರ ಡಬ್ಲ್ಯುಟಿಸಿ ಅಂಕಪಟ್ಟಿ ಏನೆಲ್ಲಾ ಬದಲಾಗಿದೆ ನೋಡೋಣ ಬನ್ನಿ.(ANI )
(3 / 11)
ವೆಸ್ಟ್ ಇಂಡೀಸ್ ವಿರುದ್ಧ ಸೋತರೂ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಡಿದ 10 ಪಂದ್ಯಗಳಲ್ಲಿ 6 ಗೆಲುವು, 3 ಸೋಲು, 1 ಡ್ರಾ ಸಾಧಿಸಿದೆ. 66 ಅಂಕ ಪಂಕ ಪಡೆದಿರುವ ಆಸೀಸ್, ಗೆಲುವಿನ ಶೇಕಡವಾರು 55ರಷ್ಟಿದೆ. ಉಳಿದ ತಂಡಗಳದ್ಟು ಇದಕ್ಕಿಂತ ಕಡಿಮೆ ಇದೆ.
(4 / 11)
ಇಂಗ್ಲೆಂಡ್ ವಿರುದ್ಧ ಭಾರತ ಸೋತ ನಂತರ 2ನೇ ಸ್ಥಾನದಿಂದ ಕುಸಿದಿದೆ. ಮೂರನೇ ಸ್ಥಾನದಲ್ಲಿದ್ದ ಸೌತ್ ಆಫ್ರಿಕಾ 2ನೇ ಸ್ಥಾನಕ್ಕೆ ಏರಿದೆ. ಆಡಿದ 2 ಪಂದ್ಯಗಳಲ್ಲಿ ಒಂದು ಸೋಲು, ಒಂದು ಗೆಲುವು ಸಾಧಿಸಿದೆ. 12 ಅಂಕಗಳೊಂದಿಗೆ ಗೆಲುವಿನ ಶೇಕಡವಾರು 50ರಷ್ಟಿದೆ.
(5 / 11)
4ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಜಿಗಿತ ಕಂಡಿರುವ ನ್ಯೂಜಿಲೆಂಡ್ ಸಹ 50ರಷ್ಟು ಗೆಲುವಿನ ಶೇಕಡಾವಾರು ಹೊಂದಿದೆ. ಆಡಿದ 2 ಪಂದ್ಯಗಳಲ್ಲಿ ಒಂದು ಸೋಲು, ಒಂದು ಗೆಲುವು ಸಾಧಿಸಿದೆ. 12 ಅಂಕ ಪಡೆದಿದೆ.
(6 / 11)
ಇನ್ನು 5ನೇ ಸ್ಥಾನದಿಂದ 4ಕ್ಕೆ ಜಂಪ್ ಆಗಿರುವ ಬಾಂಗ್ಲಾದೇಶ ಸಹ ಗೆಲುವಿನ ಶೇಕಡಾವಾರು 50ರಷ್ಟು ಅನ್ನು ಹೊಂದಿದೆ. ಆಡಿದ 2 ಪಂದ್ಯಗಳಲ್ಲಿ 1 ಸೋಲು, 1 ಗೆಲುವು ಸಾಧಿಸಿದೆ. 12 ಅಂಕ ಪಡೆದಿದೆ.
(7 / 11)
ಇಂಗ್ಲೆಂಡ್ ವಿರುದ್ಧ ಸೋತ ಭಾರತ ಅಗ್ರ ಎರಡನೇ ಸ್ಥಾನದಿಂದ 5ನೇ ಕುಸಿತ ಕಂಡಿದೆ. ಈ ಪಂದ್ಯಕ್ಕೂ ಮುನ್ನ 54.16ರಷ್ಟು ಗೆಲುವಿನ ಶೇಕಡವಾರು ಹೊಂದಿತ್ತು. ಆದರೀಗ 43.33ಕ್ಕೆ ಕುಸಿದಿದೆ. ಆಡಿದ 5 ಪಂದ್ಯಗಳಲ್ಲಿ 2 ಗೆಲುವು, 2 ಸೋಲು, 1 ಡ್ರಾ ಸಾಧಿಸಿದ್ದು, 26 ಅಂಕ ಪಡೆದಿದೆ.(PTI)
(8 / 11)
ಇನ್ನು ಪಾಕಿಸ್ತಾನ 6ನೇ ಸ್ಥಾನದಲ್ಲಿದೆ. ಆಡಿದ 5 ಪಂದ್ಯಗಳಲ್ಲಿ 2 ಗೆಲುವು, 3 ಸೋಲು ಕಂಡಿದೆ. ಗೆಲುವಿನ ಶೇಕಡವಾರು 36.66.
(9 / 11)
ಆಸೀಸ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದರೂ ಒಂದು ಸ್ಥಾನವೂ ಮೇಲೇರದೆ ಅಲ್ಲೇ ಇದೆ. ಸದ್ಯ 7ನೇ ಸ್ಥಾನದಲ್ಲಿರುವ ವಿಂಡೀಸ್ ಆಡಿದ 4 ಪಂದ್ಯಗಳಲ್ಲಿ 1 ಗೆಲುವು, 2 ಸೋಲು, 1 ಡ್ರಾ ಸಾಧಿಸಿದೆ. ಗೆಲುವಿನ ಶೇಕಡ 33.33.
(10 / 11)
ಇನ್ನು ಭಾರತದ ವಿರುದ್ಧ ಗೆದ್ದರು ಇಂಗ್ಲೆಂಡ್ ಕೂಡ 8ನೇ ಸ್ಥಾನದಲ್ಲೇ ಉಳಿದಿದೆ. ಆಡಿದ 6 ಪಂದ್ಯಗಳಲ್ಲಿ 3 ಗೆಲುವು, 2 ಸೋಲು, 1 ಡ್ರಾ ಸಾಧಿಸಿದೆ. ಗೆಲುವಿನ ಶೇಕಡಾ 29.16 .
ಇತರ ಗ್ಯಾಲರಿಗಳು