Karnataka Water Warriors: ವಿಶ್ವ ಜಲ ದಿನ, ಕರ್ನಾಟಕದಲ್ಲೂ ಇದ್ದಾರೆ ಜಲ ಸೇನಾನಿಗಳು, ನೀರು ಕೊಡೋದು ಇವರ ಕಾಯಕ Photos
World Water Day ಸೇವೆ ಎನ್ನುವುದು ಈಗ ವ್ಯವಹಾರವಾಗಿ ಮಾರ್ಪಟ್ಟಿರುವಾಗ ಈಗಲೂ ಅದೇ ನೆಲೆಯಲ್ಲಿ ಕೆಲಸ ಮಾಡುವ ಕರ್ನಾಟಕದ ಕಾಯಕಜೀವಿಗಳಿದ್ದಾರೆ. ಅದರಲ್ಲೂ ನೀರಿನ ವಿಚಾರದಲ್ಲಿ ಕೆಲಸ ಮಾಡುತ್ತಿರುವ ಹಲವಾರು ವ್ಯಕ್ತಿಗಳ ಕಾಯಕ ಅನನ್ಯವಾದದ್ದು. ಅಂತಹ ಜನ ಸೇನಾನಿಗಳ ಮಾಹಿತಿ ಇಲ್ಲಿದೆ.
(1 / 8)
ಬರದ ನಾಡು ವಿಜಯಪುರದ ಜನ ಮನುಷ್ಯ( Water man of Vijaypura) ಎಂದೇ ಕರೆಯಿಸಿಕೊಂಡಿರುವ ಪೀಟರ್ ಅಲೆಕ್ಸಾಂಡರ್ ಅವರು ಜಲ ಚಟುವಟಿಕೆಗಳ ಮೂಲಕ ಗಮನ ಸೆಳೆದವರು. ಡಾ.ರಾಜೇಂದ್ರ ಸಿಂಗ್ ಅವರೊಂದಿಗೆ ಹತ್ತಾರು ಚಟುವಟಿಕೆ ರೂಪಿಸಿದವರು. ವಿಜಯಪುರದಲ್ಲಿ ನೀರಾವರಿ ಜಾರಿಗೆ ಇನ್ನಿಲ್ಲದ ಹೋರಾಟ ನಡೆಸಿ ಬರಿಗಾಲಿನಲ್ಲಿಯೇ ಓಡಾಡಿದವರು.
(2 / 8)
ಇವರ ಹೆಸರು ಡಾ. ಮಲ್ಲಣ್ಣ ನಾಗರಾಳ.ಬಾಗಲಕೋಟೆ ಜಿಲ್ಲೆ ಹುನಗುಂದ ಪಟ್ಟಣದ ನಿವಾಸಿ. ಓದಿದ್ದು ಕಡಿಮೆಯಾದರೂ ಕೆರೆ ನಿರ್ಮಾಣ, ನೀರಿನ ಸಂರಕ್ಷಣೆಯಲ್ಲಿ ದೊಡ್ಡ ಹೆಸರು. ಕರ್ನಾಟಕ ಭಾಗ ಮಾತ್ರವಲ್ಲದೇ ಮಹಾರಾಷ್ಟ್ರ, ಆಂಧ್ರದಲ್ಲೂ ಕೆರೆಗಳನ್ನು ನಿರ್ಮಿಸಿಕೊಟ್ಟ, ಅದಕ್ಕೆ ಮಾರ್ಗದರ್ಶನ ನೀಡುತ್ತಾರೆ ಮಲ್ಲಣ್ಣ, ಇದಕ್ಕಾಗಿ ಎರಡು ವಿವಿಗಳು ಗೌರವ ಡಾಕ್ಟರೇಟ್ ಅನ್ನು ನಾಗರಾಳರಿಗೆ ನೀಡಿವೆ. ನೀರಿನ ಕುರಿತು ಅವರು ಹೇಳುವ ಜನಪದ ಕಥಾನಕಗಳು ಆಕರ್ಷಕ. ಘನಮಠದ ಶಿವಯೋಗಿಗಳ ಜಲ ಮಹಿಮೆ ಕುರಿತು ಪುಸ್ತಕವನ್ನೂ ರಚಿಸಿದ್ದಾರೆ.
(3 / 8)
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಇವರ ಹೆಸರು ಗೌರಿ ನಾಯ್ಕ. ಬಾವಿಗಳನ್ನು ತೋಡಿ ನೀರು ಕೊಡುವುದು ಇವರ ಕಾಯಕ. ಹಲವಾರು ವರ್ಷಗಳಿಂದ ಬಾವಿಗಳನ್ನು ತೋಡಿದ್ದಾರೆ. ಕೆಲ ದಿನಗಳ ಹಿಂದೆ ಶಿರಸಿ ಅಂಗನವಾಡಿ ಮಕ್ಕಳಿಗೆ ನೀರಿಲ್ಲದೇ ಬಾವಿ ತೋಡಿ ಕೊಟ್ಟಿದ್ದರು,
(4 / 8)
ಶಿವಮೊಗ್ಗ ಜಿಲ್ಲೆ (ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಸಮೀಪದ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಡೂರು ಗೇಟ್ ಬಳಿಯ ನಿವಾಸಿ ರೈತ ಮಂಜುನಾಥ ಭಟ್ ತಮ್ಮ ಏಳೂವರೆ ಎಕರೆ ಜಮೀನಿನ ಪಕ್ಕದಲ್ಲಿರುವ ಕುಮುದ್ವತಿ ನದಿ ಬತ್ತಿದ್ದನ್ನು ಮನಗಂಡು, ಕೊಳವೆಬಾವಿ ನೀರನ್ನು ನದಿಗೆ ಹರಿಸುತ್ತಿದ್ದಾರೆ. ಇದರಿಂದ ಕಾಡು ಪ್ರಾಣಿಗಳಿಗೆ ಬೇಸಿಗೆಯಲ್ಲೂ ನೀರು ಸಿಗುತ್ತಿದೆ. (ಪ್ರಜಾವಾಣಿ)
(5 / 8)
ವಿಶ್ವ ಜಲದಿನ ರಕ್ಷಸಿ ಜಲ - ಉಳಿಸಿ ಜೀವ ಸಂಕುಲ ಪರಿಕಲ್ಪನೆಯಡಿ ಸುಮಾರು ಇಪ್ಪತ್ತು ವರ್ಷಗಳ ನಿರಂತರ ಚಿತ್ರದುರ್ಗ ಜೋಗಿ ಮಟ್ಟಿ ಗಿರಿಧಾಮದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಸಂಗ್ರಹ ವಾಗುವಂಹ ದೋಣಿಗಳನ್ನೂ ನಿರ್ಮಿಸಿ ಅವುಗಳ ಸ್ವಚ್ಚತ ಕಾರ್ಯದಲ್ಲಿ ತಮ್ಮ ತಂಡದೊಂದಿಗೆ ನಿರತರಾಗಿರುವ ನಾಗರಾಜು.
(6 / 8)
ಚಿತ್ರದುರ್ಗದ ನಾಗರಾಜು ಹಾಗೂ ಅವರ ತಂಡವರು ಕಲ್ಲಿನ ಕೋಟೆ, ಜೋಗಿಮಟ್ಟಿ ಸಹಿತ ಹಲವು ಕಡೆಗಳಲ್ಲಿ ಗುಂಡಿಗಳನ್ನು ನಿರ್ಮಿಸಿ ನೀರನ್ನು ಒದಗಿಸುತ್ತಾರೆ. ಈ ಕಾಯಕ ಇವರ ಹವ್ಯಾಸವಾಗಿ ಮಾರ್ಪಟ್ಟಿದೆ.
(7 / 8)
ಗದಗದಲ್ಲಿ ಸಂಕಲ್ಪ ರೂರಲ್ ಡೆವಲೆಪ್‌ಮೆಂಟ್ ಸೊಸೈಟಿ (Sankalpa Rural Development Society) ಕಟ್ಟಿಕೊಂಡು ಬರ ಪೀಡಿತ ಗದಗ, ಧಾರವಾಡ ಭಾಗದಲ್ಲಿ ಜಲಜಾಗೃತಿ ಮೂಡಿಸುವ ಸಿಕಂದರ್ ಮೀರ ನಾಯಕ್. ಹಲವಾರು ವರ್ಷಗಳಿಂದ ಈದರಲ್ಲಿ ನಿರತ ಸಿಕಂದರ್ ಅವರು ದೇಶ, ವಿದೇಶದಿಂದ ತಜ್ಞರನ್ನು ಕರೆಯಿಸಿ ಅವರ ಮಾರ್ಗದರ್ಶನ ಪಡೆಯುತ್ತಾರೆ. ಕೆರೆ, ಕಟ್ಟೆಗಳನ್ನು ಸುಸ್ಥಿತಿಯಲ್ಲಿಡಲು ಜಾಗೃತಿ ಮೂಡಿಸುತ್ತಾರೆ.
ಇತರ ಗ್ಯಾಲರಿಗಳು