WPL 2024: ಎರಡನೇ ಸ್ಥಾನಕ್ಕೆ ನೆಗೆದ ಡೆಲ್ಲಿ ಕ್ಯಾಪಿಟಲ್ಸ್; ಕುಸಿದ ಆರ್‌ಸಿಬಿ, ಮಹಿಳಾ ಪ್ರೀಮಿಯರ್ ಲೀಗ್ ಅಂಕಪಟ್ಟಿ
- WPL 2024 Points Table: ಡಬ್ಲ್ಯೂಪಿಎಲ್ ಎರಡನೇ ಆವೃತ್ತಿಯ ನಾಲ್ಕನೇ ಲೀಗ್ ಪಂದ್ಯದ ನಂತರ, ಮಹಿಳಾ ಪ್ರೀಮಿಯರ್ ಲೀಗ್‌ನ ಅಂಕಪಟ್ಟಿ ಹೇಗಿದೆ? ಯಾವ ತಂಡ ಸ್ಥಾನ ಪಡೆದಿದೆ ಎಂಬುದನ್ನು ನೋಡೋಣ. ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನೊಂದಿಗೆ, ಆರ್‌ಸಿಬಿ ತಂಡ ಒಂದು ಸ್ಥಾನ ಕುಸಿದಿದೆ.
- WPL 2024 Points Table: ಡಬ್ಲ್ಯೂಪಿಎಲ್ ಎರಡನೇ ಆವೃತ್ತಿಯ ನಾಲ್ಕನೇ ಲೀಗ್ ಪಂದ್ಯದ ನಂತರ, ಮಹಿಳಾ ಪ್ರೀಮಿಯರ್ ಲೀಗ್‌ನ ಅಂಕಪಟ್ಟಿ ಹೇಗಿದೆ? ಯಾವ ತಂಡ ಸ್ಥಾನ ಪಡೆದಿದೆ ಎಂಬುದನ್ನು ನೋಡೋಣ. ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನೊಂದಿಗೆ, ಆರ್‌ಸಿಬಿ ತಂಡ ಒಂದು ಸ್ಥಾನ ಕುಸಿದಿದೆ.
(1 / 5)
ಮಹಿಳಾ ಪ್ರೀಮಿಯರ್ ಲೀಗ್‌ನ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್, ತನ್ನ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಗೆದ್ದಿದೆ. ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ತಂಡ ಅಂಕಗಳ ಖಾತೆ ತೆರೆದಿದೆ. ಅಲ್ಲದೆ ಎರಡನೇ ಸ್ಥಾನಕ್ಕೆ ಏರಿದೆ. 2 ಪಂದ್ಯಗಳಲ್ಲಿ 2 ಅಂಕ ಕಲೆಹಾಕಿದ ಡೆಲ್ಲಿ ತಂಡದ ನೆಟ್ ರನ್-ರೇಟ್ +1.222 ಆಗಿದೆ.
(PTI)(2 / 5)
ಸತತ 2 ಪಂದ್ಯಗಳನ್ನು ಸೋತ ನಂತರ ಯುಪಿ ವಾರಿಯರ್ಸ್ ಲೀಗ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ, ಅಂದರೆ 5 ನೇ ಸ್ಥಾನಕ್ಕೆ ಕುಸಿದಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಎದುರು ತಂಡ ಸೋತಿತ್ತು. ಅಲಿಸ್ಸಾ ಹೀಲಿ ಬಳಗವು ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಗ್ಗರಿಸಿತು. 2 ಪಂದ್ಯಗಳನ್ನೂ ಕಳೆದುಕೊಂಡ ತಂಡದ ನೆಟ್ ರನ್ ರೇಟ್ -1.266ಕ್ಕೆ ಇಳಿದಿದೆ.
(PTI)(3 / 5)
ಮುಂಬೈ ಇಂಡಿಯನ್ಸ್ ತಂಡವು ಆಡಿದ ಮೊದಲ 2 ಪಂದ್ಯಗಳನ್ನು ಗೆದ್ದು ಪ್ರಸ್ತುತ ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿದೆ. ಆಡಿದ 2 ಪಂದ್ಯಗಳಲ್ಲಿ 4 ಅಂಕ ಕಲೆಹಾಕಿದೆ. ಹರ್ಮನ್‌ಪ್ರೀತ್ ಬಳಗದ ನಿವ್ವಳ ರನ್ ರೇಟ್ +0.488 ಆಗಿದೆ.
(AFP)(4 / 5)
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎರಡನೇ ಸ್ಥಾನ ಪಡೆಯುವುದರೊಂದಿಗೆ ಆರ್‌ಸಿಬಿ ತಂಡವು ಲೀಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಲ್ಲಿ ಇದುವರೆಗೆ 1 ಪಂದ್ಯ ಮಾತ್ರ ಆಡಿದೆ. ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿದ ಆರ್‌ಸಿಬಿ 1 ಪಂದ್ಯದಿಂದ 2 ಅಂಕಗಳೊಂದಿಗೆ ಲೀಗ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ತಂಡದ ನಿವ್ವಳ ರನ್-ರೇಟ್ +0.100 ಆಗಿದೆ.
(AFP)ಇತರ ಗ್ಯಾಲರಿಗಳು