ಕನ್ನಡ ಸುದ್ದಿ  /  Photo Gallery  /  Wpl 2024 Point Table Mumbai Indians Jumps 2nd After Win Over Up Warriorz In Womens Premier League 2024 Standings Jra

WPL 2024: ಯುಪಿ ವಿರುದ್ಧ ಗೆದ್ದು ಆರ್‌ಸಿಬಿಯನ್ನು ಕೆಳಕ್ಕೆ ತಳ್ಳಿದ ಮುಂಬೈ ಇಂಡಿಯನ್ಸ್;‌ ಹೀಗಿದೆ ಅಂಕಪಟ್ಟಿ

  • WPL 2024 Point Table: ಯುಪಿ ವಾರಿಯರ್ಸ್‌ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್‌ ವನಿತೆಯರ ತಂಡವು ಡಬ್ಲ್ಯೂಪಿಎಲ್‌ 2024ರ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಎರಡನೇ ಸ್ಥಾನದಲ್ಲಿದ್ದ ಆರ್‌ಸಿಬಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಟೂರ್ನಿಯಲ್ಲಿ 14 ಪಂದ್ಯಗಳ ಅಂತ್ಯದ ಬಳಿಕ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಅಂಕಪಟ್ಟಿ ಹೀಗಿದೆ.

ಯುಪಿ ವಾರಿಯರ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ವನಿತೆಯರ ತಂಡ ಸುಲಭ ಜಯ ಸಾಧಿಸಿತು. ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಲಿಸ್ಸಾ ಹೀಲಿ ಬಳಗದ ವಿರುದ್ಧ 42 ರನ್‌ಗಳ ಅಂತರದಿಂದ ಭರ್ಜರಿ ಅಂತರದಿಂದ ಗೆದ್ದ ಮುಂಬೈ, ಅಂಕಪಟ್ಟಿಯಲ್ಲಿ ಬಡ್ತಿ ಪಡೆಯಿತು.
icon

(1 / 6)

ಯುಪಿ ವಾರಿಯರ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ವನಿತೆಯರ ತಂಡ ಸುಲಭ ಜಯ ಸಾಧಿಸಿತು. ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಲಿಸ್ಸಾ ಹೀಲಿ ಬಳಗದ ವಿರುದ್ಧ 42 ರನ್‌ಗಳ ಅಂತರದಿಂದ ಭರ್ಜರಿ ಅಂತರದಿಂದ ಗೆದ್ದ ಮುಂಬೈ, ಅಂಕಪಟ್ಟಿಯಲ್ಲಿ ಬಡ್ತಿ ಪಡೆಯಿತು.(PTI)

ಆಡಿರುವ 5 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸದ್ಯ ಡೆಲ್ಲಿ ನೆಟ್ ರನ್ ರೇಟ್ +1.301 ಆಗಿದೆ.
icon

(2 / 6)

ಆಡಿರುವ 5 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸದ್ಯ ಡೆಲ್ಲಿ ನೆಟ್ ರನ್ ರೇಟ್ +1.301 ಆಗಿದೆ.(PTI)

ಯುಪಿ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್‌ ತಂಡವು ಎರಡನೇ ಸ್ಥಾನದಲ್ಲಿದೆ. ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ತಂಡವು ಡೆಲ್ಲಿಯಂತೆ 8 ಅಂಕ ಕಲೆ ಹಾಕಿದೆ. ಆದರೆ ಮೆಗ್‌ ಲ್ಯಾನಿಂಗ್‌ ಪಡೆಗಿಂತ ಮುಂಬೈ ನೆಟ್‌ ರನ್‌ ರೇಟ್‌ (+0.375) ಕಡಿಮೆ ಇದೆ.
icon

(3 / 6)

ಯುಪಿ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್‌ ತಂಡವು ಎರಡನೇ ಸ್ಥಾನದಲ್ಲಿದೆ. ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ತಂಡವು ಡೆಲ್ಲಿಯಂತೆ 8 ಅಂಕ ಕಲೆ ಹಾಕಿದೆ. ಆದರೆ ಮೆಗ್‌ ಲ್ಯಾನಿಂಗ್‌ ಪಡೆಗಿಂತ ಮುಂಬೈ ನೆಟ್‌ ರನ್‌ ರೇಟ್‌ (+0.375) ಕಡಿಮೆ ಇದೆ.(PTI)

ಮುಂಬೈ ವಿರುದ್ಧ ಸೋತ ಯುಪಿ ವಾರಿಯರ್ಸ್‌ ನಾಲ್ಕನೇ ಸ್ಥಾನದಲ್ಲೇ ಮುಂದುವರೆದಿದೆ. ಆಡಿದ 6 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ತಂಡ 4 ಅಂಕ ಕಲೆ ಹಾಕಿದೆ.
icon

(4 / 6)

ಮುಂಬೈ ವಿರುದ್ಧ ಸೋತ ಯುಪಿ ವಾರಿಯರ್ಸ್‌ ನಾಲ್ಕನೇ ಸ್ಥಾನದಲ್ಲೇ ಮುಂದುವರೆದಿದೆ. ಆಡಿದ 6 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ತಂಡ 4 ಅಂಕ ಕಲೆ ಹಾಕಿದೆ.(PTI)

ಆರ್‌ಸಿಬಿ ತಂಡವು ಆಡಿರುವ ಆರು ಪಂದ್ಯಗಳಲ್ಲಿ ತಲಾ 3 ಸೋಲು ಹಾಗೂ ಗೆಲುವು ಕಂಡಿದೆ. ಹೀಗಾಗಿ ತಂಡವು 6 ಅಂಕ ಕಲೆ ಹಾಕಿದೆ. ಮುಂಬಥ ತಂಡದ ಗೆಲುವಿನ ಬಳಿಕ ಸ್ಮೃತಿ ಮಂಧಾನ ಪಡೆ ಮೂರನೇ ಸ್ಥಾನಕ್ಕೆ ಕುಸಿದಿದೆ. +0.038 ರನ್‌ ರೇಟ್‌ನೊಂದಿಗೆ ಮುಂಬೈ ತಂಡಕ್ಕಿಂತ ಕೆಳಗಿದೆ.
icon

(5 / 6)

ಆರ್‌ಸಿಬಿ ತಂಡವು ಆಡಿರುವ ಆರು ಪಂದ್ಯಗಳಲ್ಲಿ ತಲಾ 3 ಸೋಲು ಹಾಗೂ ಗೆಲುವು ಕಂಡಿದೆ. ಹೀಗಾಗಿ ತಂಡವು 6 ಅಂಕ ಕಲೆ ಹಾಕಿದೆ. ಮುಂಬಥ ತಂಡದ ಗೆಲುವಿನ ಬಳಿಕ ಸ್ಮೃತಿ ಮಂಧಾನ ಪಡೆ ಮೂರನೇ ಸ್ಥಾನಕ್ಕೆ ಕುಸಿದಿದೆ. +0.038 ರನ್‌ ರೇಟ್‌ನೊಂದಿಗೆ ಮುಂಬೈ ತಂಡಕ್ಕಿಂತ ಕೆಳಗಿದೆ.(PTI)

ಆರ್‌ಸಿಬಿ ವಿರುದ್ಧದ‌ ಕೊನೆಯ ಪಂದ್ಯದಲ್ಲಿ ಗೆದ್ದ ಗುಜರಾತ್‌ ಜೈಂಟ್ಸ್‌ ತಂಡವು ಮೊದಲ ಗೆಲುವಿನ ಬಳಿಕ 2 ಅಂಕ ಪಡೆದಿದೆ. ತಂಡದ ನೆಟ್‌ ರನ್‌ ರೇಟ್‌ -1.278 ಆಗಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
icon

(6 / 6)

ಆರ್‌ಸಿಬಿ ವಿರುದ್ಧದ‌ ಕೊನೆಯ ಪಂದ್ಯದಲ್ಲಿ ಗೆದ್ದ ಗುಜರಾತ್‌ ಜೈಂಟ್ಸ್‌ ತಂಡವು ಮೊದಲ ಗೆಲುವಿನ ಬಳಿಕ 2 ಅಂಕ ಪಡೆದಿದೆ. ತಂಡದ ನೆಟ್‌ ರನ್‌ ರೇಟ್‌ -1.278 ಆಗಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.(PTI)


IPL_Entry_Point

ಇತರ ಗ್ಯಾಲರಿಗಳು