ಮುಂಬೈ ವಿರುದ್ಧ ಗೆದ್ದು ಅಗ್ರಸ್ಥಾನ ಉಳಿಸಿಕೊಂಡ ಡೆಲ್ಲಿ; ಮತ್ತೆ ಒಂದು ಸ್ಥಾನ ಮೇಲೇರಿದ ಆರ್ಸಿಬಿ
- WPL 2024 Points Table : ಡಬ್ಲ್ಯುಪಿಎಲ್ನ ಎರಡನೇ ಹಂತ ಆರಂಭಗೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡವನ್ನು 29 ರನ್ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. (ಮಾರ್ಚ್ 5ರ ಅಂತ್ಯಕ್ಕೆ)
- WPL 2024 Points Table : ಡಬ್ಲ್ಯುಪಿಎಲ್ನ ಎರಡನೇ ಹಂತ ಆರಂಭಗೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡವನ್ನು 29 ರನ್ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. (ಮಾರ್ಚ್ 5ರ ಅಂತ್ಯಕ್ಕೆ)
(1 / 5)
ತವರಿನ ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಸಾಧಿಸಿದೆ. ಮುಂಬೈ ತಂಡವನ್ನು ಮಣಿಸಿ ಅಂಕಪಟ್ಟಿಯ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಆಡಿದ 5 ಪಂದ್ಯಗಳಲ್ಲಿ 4 ಗೆಲುವು, 1 ಸೋಲು ಕಂಡಿದೆ. 8 ಅಂಕ ಪಡೆದಿದು ಪ್ರಥಮ ಸ್ಥಾನದಲ್ಲಿದೆ.(PTI)
(2 / 5)
ಮುಂಬೈ ಸೋತ ಪರಿಣಾಮ ಆರ್ಸಿಬಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಹರ್ಮನ್ ಪಡೆ ಸೋತ ಕಾರಣ ನೆಟ್ ರನ್ ರೇಟ್ ಆರ್ಸಿಬಿಗಿಂತ ಕೆಳಕ್ಕೆ ಕುಸಿದಿದೆ. ಹಾಗಾಗಿ ಮುಂಬೈ 3ಕ್ಕೆ ಜಾರಿದೆ. ಇನ್ನು ಆರ್ಸಿಬಿ 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲು ಕಂಡಿದೆ. +0.242 ನೆಟ್ ರನ್ ರೇಟ್ ಹೊಂದಿದೆ.(AFP)
(3 / 5)
ಡೆಲ್ಲಿ ಎದುರು ಶರಣಾದ ಮುಂಬೈ ಮೂರನೇ ಸ್ಥಾನಕ್ಕೆ ಕುಸಿದಿದ್ದು, 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲು ಅನುಭವಿಸಿದೆ. ನೆಟ್ ರನ್ ರೇಟ್+0.018.(PTI)
(4 / 5)
ಯುಪಿ ವಾರಿಯರ್ಸ್ 4ನೇ ಸ್ಥಾನದಲ್ಲೇ ಉಳಿದಿದೆ. ಆಡಿದ 5 ಪಂದ್ಯಗಳಲ್ಲಿ 2 ಗೆಲುವು, 3 ಸೋಲು ಕಂಡಿದೆ. ನೆಟ್ ರನ್ ರೇಟ್ -0.073.(PTI)
ಇತರ ಗ್ಯಾಲರಿಗಳು