ಕನ್ನಡ ಸುದ್ದಿ  /  Photo Gallery  /  Wpl 2024 Shreyanka Patil Receives Marriage Proposal From Rcb Fan In Match Against Gujarat Giants Royal Challengers Jra

WPL 2024: ‌ಗುಜರಾತ್‌ ವಿರುದ್ಧದ ಪಂದ್ಯದ ವೇಳೆ ಶ್ರೇಯಾಂಕ ಪಾಟೀಲ್‌ಗೆ ಪ್ರಪೋಸ್ ಮಾಡಿದ RCB ಅಭಿಮಾನಿ; ಫೋಟೋ ವೈರಲ್

  • RCB vs Gujarat Giants Women's Premier League 2024: ಮಂಗಳವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಡಬ್ಲ್ಯೂಪಿಎಲ್‌ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಆರ್‌ಸಿಬಿ‌ ವನಿತೆಯರ ತಂಡ ಭರ್ಜರಿ ಜಯ ಗಳಿಸಿತು. ಈ ನಡುವೆ ಪಂದ್ಯದ ವೇಳೆ ಅಭಿಮಾನಿಯೊಬ್ಬ ಆರ್‌ಸಿಬಿಯ ಶ್ರೇಯಾಂಕ ಪಾಟೀಲ್‌ಗೆ ವಿಶೇಷ ಮನವಿಯೊಂದನ್ನು ಸಲ್ಲಿಸಿ ವೈರಲ್‌ ಆಗಿದ್ದಾನೆ.

ಕ್ರಿಕೆಟ್‌ ಪಂದ್ಯಗಳ ವೇಳೆ ಮದುವೆ ಪ್ರಸ್ತಾಪಗಳು (ಪ್ರಪೋಸಲ್‌) ಹೊಸದೇನಲ್ಲ. ಇದೀಗ ಆರ್‌ಸಿಬಿ ಪಂದ್ಯದ ವೇಳೆಯೂ ಇಂತಹದೇ ಘಟನೆ ನಡೆದಿದೆ, ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗಳೂರು ತಂಡದ ಆಟಗಾರ್ತಿಗೆ ಅಭಿಮಾನಿಯೊಬ್ಬ ಭಿನ್ನವಾಗಿ ಪ್ರಪೋಸ್‌ ಮಾಡಿದ್ದಾನೆ.
icon

(1 / 7)

ಚಿನ್ನಸ್ವಾಮಿ ಮೈದಾನದಲ್ಲಿ ಮಂಗಳವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಐದನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಿದ್ದವು. ಪಂದ್ಯದ ವೇಳೆ ಆರ್‌ಸಿಬಿ ತಂಡದ 21 ವರ್ಷದ ಆಲ್‌ರೌಂಡರ್‌ ಕನ್ನಡತಿ ಶ್ರೇಯಾಂಕಾ ಪಾಟೀಲ್‌ಗೆ ಮದುವೆ ಪ್ರಪೋಸಲ್‌ ಮಾಡಲಾಗಿದೆ. ಗ್ಯಾಲರಿಯಲ್ಲಿ ಕುಳಿತ ಪ್ರೇಕ್ಷಕನ ಕೈಯಲ್ಲಿ Will You marry me (ನೀವು ನನ್ನನ್ನು ಮದುವೆಯಾಗುತ್ತೀರಾ) ಶ್ರೇಯಾಂಕಾ ಪಾಟೀಲ್‌ ಎಂಬ ಪೋಸ್ಟರ್ ಕಾಣಿಸಿದೆ.
icon

(2 / 7)

ಚಿನ್ನಸ್ವಾಮಿ ಮೈದಾನದಲ್ಲಿ ಮಂಗಳವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಐದನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಿದ್ದವು. ಪಂದ್ಯದ ವೇಳೆ ಆರ್‌ಸಿಬಿ ತಂಡದ 21 ವರ್ಷದ ಆಲ್‌ರೌಂಡರ್‌ ಕನ್ನಡತಿ ಶ್ರೇಯಾಂಕಾ ಪಾಟೀಲ್‌ಗೆ ಮದುವೆ ಪ್ರಪೋಸಲ್‌ ಮಾಡಲಾಗಿದೆ. ಗ್ಯಾಲರಿಯಲ್ಲಿ ಕುಳಿತ ಪ್ರೇಕ್ಷಕನ ಕೈಯಲ್ಲಿ Will You marry me (ನೀವು ನನ್ನನ್ನು ಮದುವೆಯಾಗುತ್ತೀರಾ) ಶ್ರೇಯಾಂಕಾ ಪಾಟೀಲ್‌ ಎಂಬ ಪೋಸ್ಟರ್ ಕಾಣಿಸಿದೆ.(Twitter)

ಈ ವೇಳೆ ಡಗೌಟ್‌ನಲ್ಲಿ ಕುಳಿತಿದ್ದ ಆರ್‌ಸಿಬಿ ಆಟಗಾರ್ತಿಯರು ದೊಡ್ಡ ಪರದೆಯಲ್ಲಿ ಪೋಸ್ಟರ್‌ ನೋಡಿ ನಗಲು ಆರಂಭಿಸಿದರು. ಅಭಿಮಾನಿ ಹಿಡಿದ ಪೋಸ್ಟರ್‌ನಲ್ಲಿ ಉತ್ತರ ಕರ್ನಾಟಕ ಎಂದು ಬರೆಯಲಾಗಿತ್ತು. ಬೆಂಗಳೂರಿಗೆ ಉತ್ತರ ಕರ್ನಾಟಕದಿಂದ ಬಂದು ಆರ್‌ಸಿಬಿ ಪಂದ್ಯ ವೀಕ್ಷಿಸಿದ ಅಭಿಮಾನಿಗಳು, ಶ್ರೇಯಾಂಕಾಗೆ ಪ್ರಪೋಸ್‌ ಮಾಡಿದ್ದಾರೆ.
icon

(3 / 7)

ಈ ಪಂದ್ಯದಲ್ಲಿ ಶ್ರೇಯಾಂಕಾ 1 ಓವರ್ ಬೌಲಿಂಗ್ ಮಾಡಿದರು. 13 ರನ್ ವ್ಯಯಿಸಿದರೂ ವಿಕೆಟ್ ಸಿಗಲಿಲ್ಲ. ಚೇಸಿಂಗ್‌ ವೇಳೆ ಕೇವಲ ಎರಡು ವಿಕೆಟ್ ಕಳೆದುಕೊಂಡು ಆರ್‌ಸಿಬಿ ಗೆಲುವಿನ ಗುರಿ ತಲುಪಿತು. ಹೀಗಾಗಿ ಶ್ರೇಯಾಂಕಾಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ.
icon

(4 / 7)

ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಸ್ಮೃತಿ ಮಂಧಾನ ಬಳಗವು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದು ಬೀಗಿದೆ. ಅಲ್ಲದೆ ಅಂಕಪಟ್ಟಿಯಲ್ಲಿಯೂ ಅಗ್ರಸ್ಥಾನಕ್ಕೇರಿದೆ.
icon

(5 / 7)

ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಸ್ಮೃತಿ ಮಂಧಾನ ಬಳಗವು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದು ಬೀಗಿದೆ. ಅಲ್ಲದೆ ಅಂಕಪಟ್ಟಿಯಲ್ಲಿಯೂ ಅಗ್ರಸ್ಥಾನಕ್ಕೇರಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌, ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿತು. ಬಲಿಷ್ಠ ವಿದೇಶಿ ಆಟಗಾರ್ತಿಯರು ರನ್‌ ಕಲೆ ಹಾಕಲು ಪರದಾಡಿ ಸಂಪೂರ್ಣ ವಿಫಲರಾದರು. ಹೀಗಾಗಿ 7 ವಿಕೆಟ್‌ ಕಳೆದುಕೊಂಡು ಕೇವಲ 107 ರನ್‌ ಗಳಿಸಲಷ್ಟೇ ಶಕ್ತವಾಯ್ತು.
icon

(6 / 7)

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌, ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿತು. ಬಲಿಷ್ಠ ವಿದೇಶಿ ಆಟಗಾರ್ತಿಯರು ರನ್‌ ಕಲೆ ಹಾಕಲು ಪರದಾಡಿ ಸಂಪೂರ್ಣ ವಿಫಲರಾದರು. ಹೀಗಾಗಿ 7 ವಿಕೆಟ್‌ ಕಳೆದುಕೊಂಡು ಕೇವಲ 107 ರನ್‌ ಗಳಿಸಲಷ್ಟೇ ಶಕ್ತವಾಯ್ತು.(PTI)

ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿ ವನಿತೆಯರ ತಂಡವು, ನಾಯಕ ಸ್ಮೃತಿ ಮಂಧಾನ ಸ್ಫೋಟಕ ಆಟದ ನರವಿಂದ ಸುಲಭ ಜಯ ಸಾಧಿಸಿತು. ಕೇವಲ 12.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 110 ರನ್‌ ಗಳಿಸಿ ಗೆದ್ದು ಬೀಗಿತು. ಆರಂಭದಿಂದಲೂ ಅಬ್ಬರಿಸಿದ ಸ್ಮೃತಿ 43 ರನ್‌ ಸಿಡಿಸಿದರು. ಇದು ಡಬ್ಲ್ಯೂಪಿಎಲ್‌ನಲ್ಲಿ ಅವರ ಗರಿಷ್ಠ ಮೊತ್ತವಾಗಿದೆ. ತಮ್ಮ ಇನ್ನಿಂಗ್ಸ್‌ನಲ್ಲಿ ಅವರು 8 ಬೌಂಡರಿ ಹಾಗೂ 1 ಸಿಕ್ಸರ್‌ ಸಿಡಿಸಿದರು. ಅಮೋಘ ಆಟವಾಡಿದ ಮೇಗನಾ 36 ರನ್‌ ಗಳಿಸಿದರು. ಎಲಿಸ್‌ ಪೆರ್ರಿ 23 ರನ್‌ ಸಿಡಿಸಿದರು.
icon

(7 / 7)

ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿ ವನಿತೆಯರ ತಂಡವು, ನಾಯಕ ಸ್ಮೃತಿ ಮಂಧಾನ ಸ್ಫೋಟಕ ಆಟದ ನರವಿಂದ ಸುಲಭ ಜಯ ಸಾಧಿಸಿತು. ಕೇವಲ 12.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 110 ರನ್‌ ಗಳಿಸಿ ಗೆದ್ದು ಬೀಗಿತು. ಆರಂಭದಿಂದಲೂ ಅಬ್ಬರಿಸಿದ ಸ್ಮೃತಿ 43 ರನ್‌ ಸಿಡಿಸಿದರು. ಇದು ಡಬ್ಲ್ಯೂಪಿಎಲ್‌ನಲ್ಲಿ ಅವರ ಗರಿಷ್ಠ ಮೊತ್ತವಾಗಿದೆ. ತಮ್ಮ ಇನ್ನಿಂಗ್ಸ್‌ನಲ್ಲಿ ಅವರು 8 ಬೌಂಡರಿ ಹಾಗೂ 1 ಸಿಕ್ಸರ್‌ ಸಿಡಿಸಿದರು. ಅಮೋಘ ಆಟವಾಡಿದ ಮೇಗನಾ 36 ರನ್‌ ಗಳಿಸಿದರು. ಎಲಿಸ್‌ ಪೆರ್ರಿ 23 ರನ್‌ ಸಿಡಿಸಿದರು.(PTI)

ಇತರ ಗ್ಯಾಲರಿಗಳು