WPL Point Table: ಭರ್ಜರಿ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆದ ಆರ್‌ಸಿಬಿ; ಹೀಗಿದೆ ಅಂಕಪಟ್ಟಿ
- WPL 2024 Point Table: ಡಬ್ಲ್ಯೂಪಿಎಲ್ ಎರಡನೇ ಆವೃತ್ತಿಯ ಎರಡನೇ ಪಂದ್ಯದಲ್ಲಿಯೂ ಆರ್‌ಸಿಬಿ ವನಿತೆಯರ ತಂಡ ಭರ್ಜರಿ ಜಯ ಸಾಧಿಸಿದೆ. ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದ ಸ್ಮೃತಿ ಮಂಧಾನ ಬಳಗವು, ಸತತ ಎರಡು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ವಿಮೆನ್ಸ್ ಪ್ರೀಮಿಯರ್ ಲೀಗ್ ಅಂಕಪಟ್ಟಿ ಹೀಗಿದೆ.

(1 / 6)
ಡಬ್ಲ್ಯೂಪಿಎಲ್ ಎರಡನೇ ಆವೃತ್ತಿಯ ಎರಡನೇ ಪಂದ್ಯದಲ್ಲಿಯೂ ಆರ್‌ಸಿಬಿ ವನಿತೆಯರ ತಂಡ ಭರ್ಜರಿ ಜಯ ಸಾಧಿಸಿದೆ. ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದ ಸ್ಮೃತಿ ಮಂಧಾನ ಬಳಗವು, ಸತತ ಎರಡು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ವಿಮೆನ್ಸ್ ಪ್ರೀಮಿಯರ್ ಲೀಗ್ ಅಂಕಪಟ್ಟಿ ಹೀಗಿದೆ.(PTI)
(2 / 6)
ಸತತ ಎರಡು ಪಂದ್ಯಗಳಲ್ಲಿ ಗೆದ್ದು 4 ಅಂಕ ಕಲೆ ಹಾಕಿರುವ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಂಡದ ನೆಟ್ ರನ್ ರೇಟ್ +1.665ಕ್ಕೇರಿದೆ.(PTI)
(3 / 6)
ಆರ್‌ಸಿಬಿಯು ಅಗ್ರಸ್ಥಾನಕ್ಕೇರುತ್ತಿದ್ದಂತೆಯೇ, ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಆರ್‌ಸಿಬಿಯಂತೆ ಹರ್ಮನ್ ಪ್ರೀತ್ ಕೌರ್ ಬಳಗ ಕೂಡಾ ಸತತ ಎರಡು ಪಂದ್ಯಗಳಲ್ಲಿ ಗೆದ್ದಿದೆ. ಆದರೆ, ತಂಡದ ನೆಟ್ ರನ್ ರೇಟ್ ಆರ್‌ಸಿಬಿಗಿಂತ ಕಡಿಮೆ ಇದೆ. +0.488 ರನ್ ರೇಟ್‌ನಿಂದಾಗಿ ತಂಡ ಎರಡನೇ ಸ್ಥಾನದಲ್ಲಿದೆ.(PTI)
(4 / 6)
ಒಂದು ಸೋಲು ಹಾಗೂ ಮತ್ತೊಂದು ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ತಂಡದ ಅಂಕ 2 ಆಗಿದ್ದು, +1.222 ನೆಟ್ ರನ್ ರೇಟ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ.(PTI)
(5 / 6)
ಸತತ ಎರಡೂ ಪಂದ್ಯಗಳಲ್ಲಿ ಸೋತಿರುವ ಯುಪಿ ವಾರಿಯರ್ಸ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನೂ ಅಂಕಗಳ ಖಾತೆ ತೆರೆಯದ ಅಲಿಸ್ಸಾ ಹೀಲಿ ಬಳಗವು -1.266 ನೆಟ್ ರನ್ ರೇಟ್ ಹೊಂದಿದೆ.(PTI)
ಇತರ ಗ್ಯಾಲರಿಗಳು