WPL Points Table: ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಆರ್ಸಿಬಿ ದರ್ಬಾರ್; ಯಾರಲ್ಲಿದೆ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್?
- WPL 2025 Points Table Updates: ಡಬ್ಲ್ಯುಪಿಎಲ್ನಲ್ಲಿ ನಾಲ್ಕು ಪಂದ್ಯಗಳು ಪೂರ್ಣಗೊಂಡಿವೆ. ಫೆಬ್ರವರಿ 17ರ ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಆರ್ಸಿಬಿ ಸತತ 2ನೇ ಗೆಲುವು ಸಾಧಿಸಿದೆ. ಈ ಪಂದ್ಯದ ನಂತರ ಅಂಕಪಟ್ಟಿ ಹೇಗಿದೆ? ಇಲ್ಲಿದೆ ವಿವರ. (ಇಲ್ಲಿರುವ ಅಂಕಿಅಂಶ ಫೆ 17ರ ಅಂತ್ಯಕ್ಕೆ ಸಂಬಂಧಿಸಿದ್ದು)
- WPL 2025 Points Table Updates: ಡಬ್ಲ್ಯುಪಿಎಲ್ನಲ್ಲಿ ನಾಲ್ಕು ಪಂದ್ಯಗಳು ಪೂರ್ಣಗೊಂಡಿವೆ. ಫೆಬ್ರವರಿ 17ರ ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಆರ್ಸಿಬಿ ಸತತ 2ನೇ ಗೆಲುವು ಸಾಧಿಸಿದೆ. ಈ ಪಂದ್ಯದ ನಂತರ ಅಂಕಪಟ್ಟಿ ಹೇಗಿದೆ? ಇಲ್ಲಿದೆ ವಿವರ. (ಇಲ್ಲಿರುವ ಅಂಕಿಅಂಶ ಫೆ 17ರ ಅಂತ್ಯಕ್ಕೆ ಸಂಬಂಧಿಸಿದ್ದು)
(1 / 10)
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಸತತ ಎರಡು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್, ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ಸ್ಮೃತಿ ಮಂಧಾನ ಪಡೆ 4 ಅಂಕ ಪಡೆದು +1.440 ನೆಟ್ ರನ್ ರೇಟ್ ಹೊಂದಿದೆ.
(2 / 10)
ತನ್ನ ಆರಂಭಿಕ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋತಿದ್ದ ಗುಜರಾತ್ ಜೈಂಟ್ಸ್, 2ನೇ ಪಂದ್ಯದಲ್ಲಿ ಪುಟಿದೆದ್ದು ಯುಪಿ ವಾರಿಯರ್ಸ್ಗೆ ಸೋಲುಣಿಸಿತು. ಇದರೊಂದಿಗೆ ಗುಜರಾತ್ 2 ಪಂದ್ಯಗಳಲ್ಲಿ 2 ಅಂಕ ಗಳಿಸಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವ ಗುಜರಾತ್ ನೆಟ್ ರನ್ ರೇಟ್ +0.118.
( AFP)(3 / 10)
ಮೊದಲ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಪಂದ್ಯದಲ್ಲಿ ಮತ್ತೊಂದು ಗೆಲುವು ಸಾಧಿಸಲು ವಿಫಲವಾಗಿದೆ. ಆಡಿದ 2 ಪಂದ್ಯದಲ್ಲಿ 1 ಗೆಲುವು, 1 ಸೋಲು ಕಂಡಿರುವ ಡೆಲ್ಲಿ, 2 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ. ಆರ್ಸಿಬಿ ವಿರುದ್ಧ ಸೋತ ಬಳಿಕ ಮೆಗ್ ಲ್ಯಾನಿಂಗ್ ಪಡೆಯ ನೆಟ್ ರನ್ ರೇಟ್ (-0.882) ಮತ್ತಷ್ಟು ಕುಸಿತ ಕಂಡಿದೆ.
(4 / 10)
ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಖಾತೆ ತೆರೆದಿಲ್ಲ. ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ನೆಟ್ ರನ್ ರೇಟ್ -0.050 ಆಗಿದೆ.
(5 / 10)
ಯುಪಿ ವಾರಿಯರ್ಸ್ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಸೋಲು ಕಂಡಿತು. ಪರಿಣಾಮ ಅಂಕಪಟ್ಟಿಯಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ವಾರಿಯರ್ಸ್ ನೆಟ್ ರನ್ ರೇಟ್ -0.850 ಆಗಿದೆ. ಯುಪಿ ಐದನೇ ಸ್ಥಾನದಲ್ಲಿದೆ.
(6 / 10)
ಆಡಿದ ಎರಡೂ ಪಂದ್ಯಗಳಲ್ಲಿ ಅಬ್ಬರಿಸಿದ ಯುಪಿ ವಾರಿಯರ್ಸ್ ಕ್ಯಾಪ್ಟನ್ ಆ್ಯಶ್ಲೆ ಗಾರ್ಡ್ನರ್ ಸತತ ಅರ್ಧಶತಕ ಸಿಡಿಸಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 131 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಸ್ಮೃತಿ ಮಂಧಾನ, ನಟಾಲಿ ಸೀವರ್ ರೇಸ್ನಲ್ಲಿದ್ದಾರೆ.
(HT_PRINT)(7 / 10)
ಆರ್ಸಿಬಿ ವೇಗದ ಬೌಲರ್ ರೇಣುಕಾ ಸಿಂಗ್ ಆಡಿದ 2 ಪಂದ್ಯಗಳಲ್ಲಿ 5 ವಿಕೆಟ್ ಉರುಳಿಸಿ ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. ಆರೆಂಜ್ ಕ್ಯಾಪ್ ಪಡೆದಿರುವ ಆ್ಯಶ್ಲೆ ಗಾರ್ಡ್ನರ್ ಪರ್ಪಲ್ ಕ್ಯಾಪ್ ರೇಸ್ನಲ್ಲೂ ಇದ್ದಾರೆ.
(8 / 10)
ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಆ್ಯಶ್ಲೇ ಗಾರ್ಡ್ನರ್ ಅಗ್ರಸ್ಥಾನ ಹೊಂದಿದ್ದಾರೆ. ಅವರು ಎರಡು ಪಂದ್ಯಗಳಲ್ಲಿ 11 ಸಿಕ್ಸರ್ ಬಾರಿಸಿದ್ದಾರೆ. ರಿಚಾ ಘೋಷ್ 4 ಸಿಕ್ಸರ್ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. (ಫೆ 17ರ ಅಂತ್ಯಕ್ಕೆ)
(9 / 10)
ಅತ್ಯಧಿಕ ಬೌಂಡರಿ ಸಿಡಿಸಿದವರ ಲಿಸ್ಟ್ನಲ್ಲಿ ಮುಂಬೈ ಇಂಡಿಯನ್ಸ್ ನಟಾಲಿ ಸೀವರ್ 13 ಬೌಂಡರಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. 12 ಬೌಂಡರಿ ಬಾರಿಸಿರುವ ಸ್ಮೃತಿ ಮಂಧಾನ 2ನೇ ಸ್ಥಾನದಲ್ಲಿದ್ದಾರೆ. (ಫೆ 17ರ ಅಂತ್ಯಕ್ಕೆ)
ಇತರ ಗ್ಯಾಲರಿಗಳು