ಆರ್ಸಿಬಿ ಪ್ಲೇಆಫ್ ಹಾದಿ ಸಲೀಸು, ಆದರೂ ಇರಲಿ ಎಚ್ಚರ; ಯುಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್ಗೂ ಇದೆ ಅವಕಾಶ
- WPL Points Table 2024: ಡಬ್ಲ್ಯುಪಿಎಲ್ ಲೀಗ್ ಹಂತ ಇನ್ನೆರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಪ್ರವೇಶಿಸಿವೆ. ಆದರೆ ಒಂದು ಸ್ಥಾನಕ್ಕಾಗಿ 3 ತಂಡಗಳ ನಡುವೆ ಪೈಪೋಟಿ ಇನ್ನೂ ಮುಂದುವರೆದಿದೆ. ಯಾವ ತಂಡಕ್ಕೆ ಎಷ್ಟಿದೆ ಸಾಧ್ಯತೆ?
- WPL Points Table 2024: ಡಬ್ಲ್ಯುಪಿಎಲ್ ಲೀಗ್ ಹಂತ ಇನ್ನೆರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಪ್ರವೇಶಿಸಿವೆ. ಆದರೆ ಒಂದು ಸ್ಥಾನಕ್ಕಾಗಿ 3 ತಂಡಗಳ ನಡುವೆ ಪೈಪೋಟಿ ಇನ್ನೂ ಮುಂದುವರೆದಿದೆ. ಯಾವ ತಂಡಕ್ಕೆ ಎಷ್ಟಿದೆ ಸಾಧ್ಯತೆ?
(1 / 7)
ಪ್ರಸ್ತುತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಸಹ ಅಗ್ರಸ್ಥಾನದೊಂದಿಗೆ ನೇರವಾಗಿ ಫೈನಲ್ಗೇರಲು ಸಿದ್ಧವಾಗಿದೆ. ಆಡಿದ 7ರಲ್ಲಿ 5 ಗೆಲುವು, 2 ಸೋಲು ಕಂಡಿದ್ದು 10 ಅಂಕ ಪಡೆದಿದೆ. ಆದರೆ ನೆಟ್ ರನ್ ರೇಟ್ ವಿಚಾರದಲ್ಲಿ ಡೆಲ್ಲಿಗಿಂತ ಹಿಂದಿದೆ. ಇದೀಗ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆರ್ಸಿಬಿ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.(PTI)
(2 / 7)
ಡೆಲ್ಲಿ ಕ್ಯಾಪಿಟಲ್ಸ್ ಸದ್ಯ ಅಗ್ರಸ್ಥಾನದಲ್ಲಿದೆ. ಆಡಿದ 7ರಲ್ಲಿ 5 ಗೆಲುವು, 2 ಸೋಲು ಕಂಡಿದ್ದು, 10 ಅಂಕ ಪಡೆದಿದೆ. ಇದೀಗ ತನ್ನ ಕೊನೆ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದ್ದು, ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸುವ ಕನಸಿನಲ್ಲಿದೆ.(PTI)
(3 / 7)
3ನೇ ಸ್ಥಾನದಲ್ಲಿರುವ ಆರ್ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಣಿಸಿ ಪ್ಲೇಆಫ್ಗೆ ಅರ್ಹತೆ ಪಡೆಯಲು ಸಜ್ಜಾಗಿದೆ. ಆಡಿದ 7ರಲ್ಲಿ 3 ಗೆಲುವು, 4 ಸೋಲು ಕಂಡು 6 ಅಂಕ ಪಡೆದಿದೆ. ಮುಂಬೈ ವಿರುದ್ಧ ಗೆದ್ದರೆ ಯಾವುದೇ ಟೆನ್ಶನ್ ಇಲ್ಲದೆ ನಾಕೌಟ್ಗೇರಲಿದೆ.(PTI)
(4 / 7)
ಒಂದು ವೇಳೆ ಸೋತರೂ ಪ್ಲೇಆಫ್ ಪ್ರವೇಶಿಸುವ ಹೆಚ್ಚಿನ ಅವಕಾಶ ಸಹ ಹೊಂದಿದೆ. ಆದರೆ ರನ್ ರೇಟ್ ಕಾಪಾಡಿಕೊಳ್ಳಲು ಯಶಸ್ವಿಯಾಗಬೇಕು. ಸದ್ಯ ನಾಕೌಟ್ ರೇಸ್ನಲ್ಲಿರುವ ಯುಪಿ, ಗುಜರಾತ್ ತಂಡಗಳಿಗಿಂತಲೂ ಆರ್ಸಿಬಿ ಉತ್ತಮ ರನ್ ರೇಟ್ (+0.027) ಹೊಂದಿದೆ. ಹಾಗಾಗಿ ಬೆಂಗಳೂರು ಪ್ಲೇ ಆಫ್ ಹಾದಿ ಸಲೀಸಾಗಿದ್ದು, ಎಚ್ಚರವಹಿಸಬೇಕಿದೆ.(PTI)
(5 / 7)
ಗುಜರಾತ್ ವಿರುದ್ಧ ಸೋತ ಯುಪಿ ವಾರಿಯರ್ಸ್ಗೆ ಕೂಡ ಪ್ಲೇ ಆಫ್ ಪ್ರವೇಶಿಸಲು ಎರಡು ಮಾರ್ಗ ಇದೆ. ಒಂದು ಆರ್ಸಿಬಿ ಹೀನಾಯವಾಗಿ ಸೋಲಬೇಕು. ಇದರೊಂದಿಗೆ ರನ್ ರೇಟ್ ಪಾತಾಳಕ್ಕೆ ಕುಸಿಯಬೇಕು. ಮತ್ತೊಂದು ಗುಜರಾತ್, ಡೆಲ್ಲಿ ವಿರುದ್ಧ ಸೋತರೆ ಸಾಕು. ಅಥವಾ ಗೆದ್ದರೂ ಅದು ಕಡಿಮೆ ಅಂತರದ ಗೆಲುವು ಇದಾಗಿರಬೇಕು. ಆಗ ಮಾತ್ರ ನಾಕೌಟ್ಗೇರಲು ಸಾಧ್ಯ.(WPL-X)
(6 / 7)
ಯುಪಿ ವಿರುದ್ಧ ಗೆದ್ದಿರುವ ಗುಜರಾತ್ ಜೈಂಟ್ಸ್ ಪ್ಲೇಆಫ್ ಕನಸನ್ನು ವಿಸ್ತರಿಸಿಕೊಂಡಿದೆ. ಅಲ್ಲದೆ, ಗುಜರಾತ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯ. ಅದು ಕೂಡ ದೊಡ್ಡ ಅಂತರದ ಗೆಲುವಾಗಿರಬೇಕು. ಆಗ ಮಾತ್ರ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಲು ಸಾಧ್ಯ. ಒಂದು ವೇಳೆ ಸೋತರೆ ಲೀಗ್ನಿಂದ ಬೀಳಲಿದೆ. ಅಲ್ಲದೆ, ಆರ್ಸಿಬಿ, ಮುಂಬೈ ವಿರುದ್ಧ ಹೀನಾಯವಾಗಿ ಸೋಲಬೇಕು. ರನ್ ರೇಟ್ ಪಾತಾಳಕ್ಕೆ ಕುಸಿಯಬೇಕು. ಆಗ ನಾಕೌಟ್ ಪ್ರವೇಶಿಸುವ ಅವಕಾಶ ಪಡೆಯಲಿದೆ.(PTI)
ಇತರ ಗ್ಯಾಲರಿಗಳು