ಯುಪಿ ವಿರುದ್ಧ ಡೆಲ್ಲಿಗೆ ರೋಚಕ ಸೋಲು; ಡಬ್ಲ್ಯುಪಿಎಲ್ ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣ ಏನು?
- WPL Points Table 2024 : ವುಮೆನ್ಸ್ ಪ್ರೀಮಿಯರ್ ಲೀಗ್ನ 15ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 1 ರನ್ ರೋಚಕ ಸೋಲು ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಹಾಗಾದರೆ ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣ ಏನು?

(1 / 5)
ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡಬ್ಲ್ಯುಪಿಎಲ್ನ 15ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುಪಿ ವಾರಿಯರ್ಸ್ 1 ರನ್ ಗೆಲುವು ದಾಖಲಿಸಿದೆ. ಆದರೂ ಡೆಲ್ಲಿ ಅಂಕಪಟ್ಟಿಯ ಅಗ್ರಸ್ಥಾನದಿಂದ ಅಲುಗಾಡಲೇ ಇಲ್ಲ. ಆಡಿದ 6 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿರುವ ಡೆಲ್ಲಿ, 2 ಸೋಲು ಕಂಡಿದೆ. ನೆಟ್ ರನ್ ರೇಟ್ +1.059.
(2 / 5)
ಇನ್ನು ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿ ತಟಸ್ಥವಾಗಿದೆ. ಆಡಿದ 6 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿರುವ ಹರ್ಮನ್ ಪಡೆ, 2ರಲ್ಲಿ ಸೋತಿದೆ. ನೆಟ್ ರನ್ ರೇಟ್ +0.375
(3 / 5)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಸ್ಥಾನದಲ್ಲೇ ಇದೆ. ನೆಟ್ ರನ್ ರೇಟ್ ಪ್ಲಸ್ ಇರುವುದು ತಂಡಕ್ಕೆ ಲಾಭದಾಯಕವಾಗಿದೆ. ಆಡಿದ 6ರಲ್ಲಿ 3 ಗೆಲುವು, 3 ಸೋಲನುಭವಿಸಿದೆ. ಆರ್ಸಿಬಿ ಮುಂದಿನ ಪಂದ್ಯ ಮಾರ್ಚ್ 10ರಂದು.
(4 / 5)
ಡೆಲ್ಲಿ ತಂಡವನ್ನು ಸೋಲಿಸಿದ ಯುಪಿ ಗೆದ್ದರೂ ನಾಲ್ಕರಲ್ಲೇ ಉಳಿದಿದೆ. ಆದರೆ ಅಂಕಗಳನ್ನು ಮಾತ್ರ ಏರಿಸಿಕೊಂಡಿದೆ. ಆಡಿರುವ 7 ಪಂದ್ಯಗಳಲ್ಲಿ 3 ಗೆಲುವು, 4 ಸೋಲು ಕಂಡಿದೆ. ಇನ್ನು ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ನೆಟ್ ರನ್ ರೇಟ್ -0.365.
ಇತರ ಗ್ಯಾಲರಿಗಳು