ಸತತ ಸೋಲುಗಳ ನಂತರ ಅಂಕಪಟ್ಟಿಯಲ್ಲಿ ಭಾರಿ ಕುಸಿದ ಆರ್ಸಿಬಿ; ಗೆಲುವಿನ ಹಳಿಗೆ ಮರಳಿದ ಮುಂಬೈ ಟೇಬಲ್ ಟಾಪರ್
- WPL 2024 Points Table: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ಎದುರು ಶರಣಾಗುತ್ತಿದ್ದಂತೆ ಅಂಕಪಟ್ಟಿಯಲ್ಲಿ ಭಾರಿ ಕುಸಿತ ಕಂಡಿದೆ.
- WPL 2024 Points Table: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ಎದುರು ಶರಣಾಗುತ್ತಿದ್ದಂತೆ ಅಂಕಪಟ್ಟಿಯಲ್ಲಿ ಭಾರಿ ಕುಸಿತ ಕಂಡಿದೆ.
(1 / 6)
ಆರ್ಸಿಬಿ ಎದುರು 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯಕ್ಕೂ ಮುನ್ನ ನಾಲ್ಕನೇ ಸ್ಥಾನದಲ್ಲಿದ್ದ ಮುಂಬೈ, ಈಗ 3 ಗೆಲುವು ಸಾಧಿಸಿ 6 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಜಿಗಿತ ಕಂಡಿದೆ. ನೆಟ್ ರನ್ ರೇಟ್ +0.402
(2 / 6)
ಎರಡು ಗೆಲುವು, 1 ಸೋಲಿನೊಂದಿಗೆ 4 ಅಂಕ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ. ನೆಟ್ರನ್ ರೇಟ್ +1.271 ಇದೆ. ಡೆಲ್ಲಿ ತನ್ನ ಮುಂದಿನ ಪಂದ್ಯದಲ್ಲಿ ಜಯದ ನಗೆ ಬೀರಿದರೆ ಅಗ್ರಸ್ಥಾನಕ್ಕೇರುವುದು ಖಚಿತ.
(3 / 6)
ಯುಪಿ ವಾರಿಯರ್ಸ್ ತಂಡದ ಸ್ಥಾನ ತಟಸ್ಥವಾಗಿದೆ. ಆಡಿದ 4 ಪಂದ್ಯಗಳಲ್ಲಿ ತಲಾ 2 ಸೋಲು, ಗೆಲುವಿನೊಂದಿಗೆ 4 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ. +0.211 ನೆಟ್ ರನ್ ರೇಟ್.
(4 / 6)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಸ್ಥಾನದಿಂದ ನಾಲ್ಕಕ್ಕೆ ಕುಸಿತ ಕಂಡಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದ ಆರ್ಸಿಬಿ ನಂತರದ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಸದ್ಯ 4 ಅಂಕ ಪಡೆದಿರುವ ಬೆಂಗಳೂರು ನೆಟ್ ರನ್ ರೇಟ್ -0.015.
(5 / 6)
ಗುಜರಾತ್ ಜೈಂಟ್ಸ್ ಇನ್ನೂ ಖಾತೆಯೇ ತೆರೆದಿಲ್ಲ. ಆಡಿದ ಮೂರು ಪಂದ್ಯಗಳಲ್ಲೂ ಸೋಲು ಕಂಡಿದೆ. ನೆಟ್ ರನ್ ರೇಟ್ -1.995.
ಇತರ ಗ್ಯಾಲರಿಗಳು