ಕನ್ನಡ ಸುದ್ದಿ  /  Photo Gallery  /  Wpl Points Table 2024 Updated Standings After Up Warriorz Vs Royal Challengers Bangalore Match Details Here Prs

ಯುಪಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ ಆರ್​ಸಿಬಿ; ಪ್ಲೇಆಫ್​ನತ್ತ ದಿಟ್ಟ ಹೆಜ್ಜೆ

  • Women's Premier League 2024 Standings: ಡಬ್ಲ್ಯುಪಿಎಲ್​​ನಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೆರಿದೆ. ಯಾವ ತಂಡ ಯಾವ ಸ್ಥಾನದಲ್ಲಿದೆ. ಬನ್ನಿ ನೋಡೋಣ.

ಯುಪಿ ವಾರಿಯರ್ಸ್ ಮತ್ತು ಆರ್​ಸಿಬಿ ಪಂದ್ಯದ ಬಳಿಕವೂ ಡೆಲ್ಲಿ ಕ್ಯಾಪಿಟಲ್ಸ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಆಡಿದ 4ರಲ್ಲಿ 3 ಗೆಲುವು, 1 ಸೋಲಿನೊಂದಿಗೆ 6 ಅಂಕ ಪಡೆದು +1.251 ನೆಟ್​ ರನ್​ ರೇಟ್​ನೊಂದಿಗೆ ಡೆಲ್ಲಿ ಮೊದಲ ಸ್ಥಾನದಲ್ಲೇ ಇದೆ.
icon

(1 / 6)

ಮುಂಬೈ ಇಂಡಿಯನ್ಸ್ ಸ್ಥಾನವೂ ಅಲುಗಾಡಲಿಲ್ಲ. ಎರಡನೇ ಸ್ಥಾನದಲ್ಲಿ ಮುಂಬೈ ಇದ್ದು, ಆಡಿದ 4 ಪಂದ್ಯಗಳಲ್ಲಿ 3 ಗೆಲುವು, 1 ಸೋಲು ಕಂಡಿದೆ. 6 ಅಂಕ ಪಡೆದು ನೆಟ್ ರನ್​ ರೇಟ್​​ನಲ್ಲಿ (+0.402)​ ಆರ್​ಸಿಬಿಗಿಂತ ಕೊಂಚ ಮುಂದಿದೆ. ಇಂದು (ಮಾರ್ಚ್ 5) ಡೆಲ್ಲಿ-ಮುಂಬೈ ತಂಡಗಳು ಸೆಣಸಾಟ ನಡೆಸಲಿದ್ದು, ಗೆದ್ದವರು ಅಗ್ರಸ್ಥಾನದಲ್ಲಿರುತ್ತಾರೆ.
icon

(2 / 6)

ಇದೀಗ ಯುಪಿ ವಾರಿಯರ್ಸ್ ಎದುರು ಜಯಿಸಿದ ಆರ್​​ಸಿಬಿ, ಒಂದು ಸ್ಥಾನ ಮೇಲೇರಿದೆ. ನಾಲ್ಕರಿಂದ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದು, ಪ್ಲೇ ಆಫ್​​ನತ್ತ ಹೆಜ್ಜೆ ಇಡುತ್ತಿದೆ. ಆಡಿದ 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲು ಕಂಡಿದೆ. 6 ಅಂಕ ಪಡೆದಿರುವ ಮಂಧಾನ ಪಡೆ ನೆಟ್ ರನ್​ ರೇಟ್ +0.242 ಹೊಂದಿದೆ. ಇನ್ನೆರಡು ಪಂದ್ಯ ಗೆದ್ದರೆ ಪ್ಲೇ ಆಫ್​ಗೆ ಖಚಿತವಾಗಲಿದೆ.
icon

(3 / 6)

ಸದ್ಯ ಸೋತ ಯುಪಿ, ಅಂಕಪಟ್ಟಿಯಲ್ಲಿ ಮೂರರಿಂದ ನಾಲ್ಕಕ್ಕೆ ಜಾರಿದೆ. ಆಡಿದ 5 ಪಂದ್ಯಗಳಲ್ಲಿ 2 ಗೆಲುವು, 3 ಸೋಲು ಕಂಡಿದೆ. 4 ಅಂಕ ಸಂಪಾದಿಸಿರುವ ಯುಪಿ -0.073 ಹೊಂದಿದೆ.
icon

(4 / 6)

ಗುಜರಾತ್ ಜೈಂಟ್ಸ್ ಟೂರ್ನಿಯ ಆರಂಭದಿಂದಲೂ ಕೊನೆಯ ಸ್ಥಾನದಲ್ಲೇ ಇದೆ. ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಅಂಕಪಟ್ಟಿಯಲ್ಲಿ ಖಾತೆ ತೆರೆದಿಲ್ಲ.
icon

(5 / 6)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(6 / 6)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

IPL_Entry_Point

ಇತರ ಗ್ಯಾಲರಿಗಳು