ಕನ್ನಡ ಸುದ್ದಿ  /  Photo Gallery  /  Wpl Stars Celebrate Holi In Mumbai

WPL stars playing Holi: ಬಣ್ಣದಲ್ಲಿ ಮಿಂದೆದ್ದ ಡಬ್ಲ್ಯೂಪಿಎಲ್‌ ತಾರೆಯರು; ವಿದೇಶಿ ಕ್ರಿಕೆಟರ್‌ಗಳ ಸಂಭ್ರಮವೋ ಸಂಭ್ರಮ

  • WPL stars playing Holi: ಇಂದು ದೇಶದಲ್ಲಿ ಹೋಳಿ ಸಂಭ್ರಮ ಮನೆ ಮಾಡಿದೆ. ಭಾರತದಲ್ಲಿ ಈಗ ವನಿತೆಯರ ಕ್ರಿಕೆಟ್‌ನ ಹಬ್ಬ ವಿಮೆನ್ಸ್‌ ಪ್ರೀಮಿಯರ್ ಲೀಗ್ ಕೂಡಾ ನಡೆಯುತ್ತಿದೆ. ಸೋಲು ಗೆಲುವಿನ ನಡುವೆ ಡಬ್ಲ್ಯೂಪಿಎಲ್‌ ತಾರೆಗಳು ಬಣ್ಣಗಳ ಹಬ್ಬವನ್ನು ಸಂಭ್ರಮದಿಂದ‌ ಆಚರಿಸಿದ್ದಾರೆ. ಭಾರತದ ಆಟಗಾರ್ತಿಯರ ಜೊತೆಗೆ ವಿದೇಶಿ ಕ್ರಿಕೆಟಿಗರಾದ ಎಲಿಸ್ ಪೆರ್ರಿ, ಹೆದರ್ ನೈಟ್ಸ್ ಸೇರಿದಂತೆ ವಿವಿಧ ತಂಡಗಳ ಆಟಗಾರ್ತಿಯರು ಬಣ್ಣ ಎರಚಿ ಸಂಭ್ರಮಿಸಿದ್ದಾರೆ.

ಆರ್‌ಸಿಬಿ ಆಟಗಾರ್ತಿ ಆಸ್ಟ್ರೇಲಿಯಾದ ತಾರೆ ಎಲಿಸ್ ಪೆರ್ರಿ ಹೋಳಿ ಆಚರಣೆಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇಬ್ಬರು ವಿಶ್ವ ಕ್ರಿಕೆಟ್ ತಾರೆಯರಾದ ಸೋಫಿ ಡಿವೈನ್ (ನ್ಯೂಜಿಲೆಂಡ್ ನಾಯಕಿ) ಮತ್ತು ಮೇಗನ್ ಶಟ್‌ (ಆಸ್ಟ್ರೇಲಿಯಾ ಸ್ಟಾರ್ ವೇಗಿ) ಅವರೊಂದಿಗೆ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. 'ಸಮಸ್ತ ಭಾರತೀಯರಿಗೆ ಹೋಳಿ ಹಬ್ಬದ ಶುಭಾಶಯಗಳು' ಎಂದು ಕ್ಯಾಪ್ಶನ್‌ ಬರೆದಿದ್ದಾರೆ.
icon

(1 / 8)

ಆರ್‌ಸಿಬಿ ಆಟಗಾರ್ತಿ ಆಸ್ಟ್ರೇಲಿಯಾದ ತಾರೆ ಎಲಿಸ್ ಪೆರ್ರಿ ಹೋಳಿ ಆಚರಣೆಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇಬ್ಬರು ವಿಶ್ವ ಕ್ರಿಕೆಟ್ ತಾರೆಯರಾದ ಸೋಫಿ ಡಿವೈನ್ (ನ್ಯೂಜಿಲೆಂಡ್ ನಾಯಕಿ) ಮತ್ತು ಮೇಗನ್ ಶಟ್‌ (ಆಸ್ಟ್ರೇಲಿಯಾ ಸ್ಟಾರ್ ವೇಗಿ) ಅವರೊಂದಿಗೆ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. 'ಸಮಸ್ತ ಭಾರತೀಯರಿಗೆ ಹೋಳಿ ಹಬ್ಬದ ಶುಭಾಶಯಗಳು' ಎಂದು ಕ್ಯಾಪ್ಶನ್‌ ಬರೆದಿದ್ದಾರೆ.(Twitter @EllysePerry)

ಭಾರತೀಯ ಆಟಗಾರ್ತಿಯರೊಂದಿಗೆ ವಿದೇಶಿ ಆಟಗಾರ್ತಿಯರು ಬಣ್ಣದ ಹಬ್ಬವನ್ನು ಸಂಭ್ರಮಿಸಿದ್ದಾರೆ.
icon

(2 / 8)

ಭಾರತೀಯ ಆಟಗಾರ್ತಿಯರೊಂದಿಗೆ ವಿದೇಶಿ ಆಟಗಾರ್ತಿಯರು ಬಣ್ಣದ ಹಬ್ಬವನ್ನು ಸಂಭ್ರಮಿಸಿದ್ದಾರೆ.(Twitter)

ಇಂಗ್ಲೆಂಡ್ ನಾಯಕಿ ಹೆದರ್ ನೈಟ್ ಹಾಗೂ ಇಬ್ಬರು ಭಾರತೀಯ ತಾರೆಗಳಾದ ಸ್ಮೃತಿ ಮಂಧನ ಮತ್ತು ರಿಚಾ ಘೋಷ್ ಬಣ್ಣಗಳ ಹಬ್ಬದಲ್ಲಿ ಸೇರಿಕೊಂಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಇವರು ಆಡುತ್ತಿದ್ದಾರೆ. ಆರ್‌ಸಿಬಿ ಕ್ಯಾಂಪ್‌ನಲ್ಲಿ ಬಣ್ಣಗಳ ಹಬ್ಬ ಜೋರಾಗಿ ನಡೆದಿದೆ. ನೈಟ್ ಇಬ್ಬರು ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
icon

(3 / 8)

ಇಂಗ್ಲೆಂಡ್ ನಾಯಕಿ ಹೆದರ್ ನೈಟ್ ಹಾಗೂ ಇಬ್ಬರು ಭಾರತೀಯ ತಾರೆಗಳಾದ ಸ್ಮೃತಿ ಮಂಧನ ಮತ್ತು ರಿಚಾ ಘೋಷ್ ಬಣ್ಣಗಳ ಹಬ್ಬದಲ್ಲಿ ಸೇರಿಕೊಂಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಇವರು ಆಡುತ್ತಿದ್ದಾರೆ. ಆರ್‌ಸಿಬಿ ಕ್ಯಾಂಪ್‌ನಲ್ಲಿ ಬಣ್ಣಗಳ ಹಬ್ಬ ಜೋರಾಗಿ ನಡೆದಿದೆ. ನೈಟ್ ಇಬ್ಬರು ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.(Twitter @Heatherknight55)

ರಾಯಲ್ ಚಾಲೆಂಜರ್ಸ್ ಬೆಂಗಳೂರು ಶಿಬಿರದಲ್ಲಿ, ನೈಟ್ ಈ ಹಬ್ಬವನ್ನು ಎಂಜಾಯ್‌ ಮಾಡಿದ್ದಾರೆ. ಇಂಗ್ಲೆಂಡ್ ನಾಯಕ ನೈಟ್ ಟ್ವೀಟ್ ಮಾಡಿ 'ಹ್ಯಾಪಿ ಹೋಳಿ (ಶುಭ್ ಡೋಲ್)' ಶುಭಾಶಯ ಕೋರಿದ್ದಾರೆ.
icon

(4 / 8)

ರಾಯಲ್ ಚಾಲೆಂಜರ್ಸ್ ಬೆಂಗಳೂರು ಶಿಬಿರದಲ್ಲಿ, ನೈಟ್ ಈ ಹಬ್ಬವನ್ನು ಎಂಜಾಯ್‌ ಮಾಡಿದ್ದಾರೆ. ಇಂಗ್ಲೆಂಡ್ ನಾಯಕ ನೈಟ್ ಟ್ವೀಟ್ ಮಾಡಿ 'ಹ್ಯಾಪಿ ಹೋಳಿ (ಶುಭ್ ಡೋಲ್)' ಶುಭಾಶಯ ಕೋರಿದ್ದಾರೆ.(Twitter @Heatherknight55)

ಲಾರೆನ್ ಬೆಲ್: ವಿಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಸ್ ಪರ ಆಡುತ್ತಿರುವ ಇಂಗ್ಲೀಷ್ ಆಟಗಾರ್ತಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೋಳಿ ಆಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
icon

(5 / 8)

ಲಾರೆನ್ ಬೆಲ್: ವಿಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಸ್ ಪರ ಆಡುತ್ತಿರುವ ಇಂಗ್ಲೀಷ್ ಆಟಗಾರ್ತಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೋಳಿ ಆಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.(Instagram l.bell_)

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲೆರಡು ಪಂದ್ಯಗಳಲ್ಲಿ ಸೋತರೂ ಆರ್‌ಸಿಬಿ ಪಾಳಯದಲ್ಲಿ ಸಂಭ್ರಮದಿಂದ ಹೋಳಿ ಆಚರಿಸಲಾಯಿತು. ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಿನ ಮರುದಿನ, ಆರ್‌ಸಿಬಿ ಸ್ಟಾರ್‌ಗಳು ಮುಂಬೈನ ಹೋಟೆಲ್‌ನಲ್ಲಿ ಹೋಳಿ ಆಚರಿಸಿದರು. ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
icon

(6 / 8)

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲೆರಡು ಪಂದ್ಯಗಳಲ್ಲಿ ಸೋತರೂ ಆರ್‌ಸಿಬಿ ಪಾಳಯದಲ್ಲಿ ಸಂಭ್ರಮದಿಂದ ಹೋಳಿ ಆಚರಿಸಲಾಯಿತು. ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಿನ ಮರುದಿನ, ಆರ್‌ಸಿಬಿ ಸ್ಟಾರ್‌ಗಳು ಮುಂಬೈನ ಹೋಟೆಲ್‌ನಲ್ಲಿ ಹೋಳಿ ಆಚರಿಸಿದರು. ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.(Instagram Vanithavr)

ಆರ್ಸಿಬಿಇಯ ಬ್ಯೂಟಿ ಕ್ವೀನ್‌ಗಳಾದ ಎಲಿಸ್‌ ಪೆರ್ರಿ ಹಾಗೂ ಸ್ಮೃತಿ ಫೋಟೋ ನೋಡಿ ಅಭಿಮಾನಿಗಳು ಪುಳಕಿತರಾಗಿದ್ದಾರೆ. ಚಿತ್ರದಿಂದಾಗಿ, ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಬಿರುಗಾಳಿ ಎದ್ದಿದೆ ಎಂದು ನೆಟಿಜನ್‌ಗಳು ಕಾಮೆಂಟ್‌ ಮಾಡಿದ್ದಾರೆ. ಈ ಇಬ್ಬರು ಸುಂದರಿಯರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
icon

(7 / 8)

ಆರ್ಸಿಬಿಇಯ ಬ್ಯೂಟಿ ಕ್ವೀನ್‌ಗಳಾದ ಎಲಿಸ್‌ ಪೆರ್ರಿ ಹಾಗೂ ಸ್ಮೃತಿ ಫೋಟೋ ನೋಡಿ ಅಭಿಮಾನಿಗಳು ಪುಳಕಿತರಾಗಿದ್ದಾರೆ. ಚಿತ್ರದಿಂದಾಗಿ, ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಬಿರುಗಾಳಿ ಎದ್ದಿದೆ ಎಂದು ನೆಟಿಜನ್‌ಗಳು ಕಾಮೆಂಟ್‌ ಮಾಡಿದ್ದಾರೆ. ಈ ಇಬ್ಬರು ಸುಂದರಿಯರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.(Facebook @RoyalChallengersBangalore)

ತಹಿಲಾ ಮೆಕ್‌ಗ್ರಾತ್ ಕೂಡ ಹೋಳಿ ಆಚರಣೆಯ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಯುಪಿ ವಾರಿಯರ್ಸ್ ನಾಯಕಿ ಮತ್ತು ಆಸ್ಟ್ರೇಲಿಯಾದ ಸಹ ಆಟಗಾರ್ತಿ ಅಲಿಸ್ಸಾ ಹೀಲಿ ಅವರು ಬಣ್ಣದಲ್ಲಿ ಮಿಂದೆದ್ದಿರುವ ಫೊಟೋವನ್ನು ಅವರು ಶೇರ್‌ ಮಾಡಿದ್ದಾರೆ. 
icon

(8 / 8)

ತಹಿಲಾ ಮೆಕ್‌ಗ್ರಾತ್ ಕೂಡ ಹೋಳಿ ಆಚರಣೆಯ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಯುಪಿ ವಾರಿಯರ್ಸ್ ನಾಯಕಿ ಮತ್ತು ಆಸ್ಟ್ರೇಲಿಯಾದ ಸಹ ಆಟಗಾರ್ತಿ ಅಲಿಸ್ಸಾ ಹೀಲಿ ಅವರು ಬಣ್ಣದಲ್ಲಿ ಮಿಂದೆದ್ದಿರುವ ಫೊಟೋವನ್ನು ಅವರು ಶೇರ್‌ ಮಾಡಿದ್ದಾರೆ. (Instagram tahlia.mcgrath ಮತ್ತು Twitter)


ಇತರ ಗ್ಯಾಲರಿಗಳು