ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡದಿಂದ ಹೊರಗುಳಿದಿದ್ದ ಈ ಆಟಗಾರನಿಗೆ ವಿದಾಯದ ಪಂದ್ಯ; ಹೀಗಿದೆ ಆತನ ಅಂಕಿ-ಅಂಶ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡದಿಂದ ಹೊರಗುಳಿದಿದ್ದ ಈ ಆಟಗಾರನಿಗೆ ವಿದಾಯದ ಪಂದ್ಯ; ಹೀಗಿದೆ ಆತನ ಅಂಕಿ-ಅಂಶ

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡದಿಂದ ಹೊರಗುಳಿದಿದ್ದ ಈ ಆಟಗಾರನಿಗೆ ವಿದಾಯದ ಪಂದ್ಯ; ಹೀಗಿದೆ ಆತನ ಅಂಕಿ-ಅಂಶ

  • Wriddhiman Saha: ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ನಲ್ಲಿ ನಡೆಯುತ್ತಿರುವ ಪಂಜಾಬ್ ವಿರುದ್ಧದ ರಣಜಿ ಟ್ರೋಫಿ ಪಂದ್ಯವು ಭಾರತದ ಹಿರಿಯ ಆಟಗಾರ ವೃದ್ಧಿಮಾನ್ ಸಾಹ ಅವರಿಗೆ ಕೊನೆಯ ವೃತ್ತಿಪರ ಕ್ರಿಕೆಟ್ ಪಂದ್ಯವಾಗಿದೆ. ಈ ಪಂದ್ಯದ ನಂತರ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ.

ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಭಾರತ ತಂಡದಿಂದ ಹೊರಗುಳಿದಿದ್ದ ಹಿರಿಯ ಕ್ರಿಕೆಟಿಗ ಹಾಗೂ ವಿಕೆಟ್ ಕೀಪರ್​ ಬ್ಯಾಟರ್​ ವೃದ್ಧಿಮಾನ್ ಸಾಹ ಅವರು ರಣಜಿ ಟ್ರೋಫಿಯಲ್ಲಿ ತಮ್ಮ ವಿದಾಯದ ಪಂದ್ಯ ಆಡುತ್ತಿದ್ದಾರೆ.
icon

(1 / 10)

ರಣಜಿಯಲ್ಲಿ ಈಡನ್ ಗಾರ್ಡರ್ನ್ಸ್​ನಲ್ಲಿ ಇಂದು (ಜನವರಿ 30) ನಡೆಯುತ್ತಿರುವ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಬೆಂಗಾಲ್ ಪರ ಕಣಕ್ಕಿಳಿದಿರುವ ವೃದ್ಧಿಮಾನ್ ಸಾಹ ಈ ಪಂದ್ಯದ ನಂತರ ವೃತ್ತಿಪರ ಕ್ರಿಕೆಟ್​ನಿಂದ ನಿವೃತ್ತರಾಗಲಿದ್ದಾರೆ. ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.
icon

(2 / 10)

ಈ ವರ್ಷ ರಣಜಿ ಟ್ರೋಫಿಯಲ್ಲಿ ನಾಕೌಟ್ ಹಂತವನ್ನು ತಲುಪುವ ಬಂಗಾಳ ತಂಡದ ಅವಕಾಶಗಳು ಮುಗಿದಿವೆ. ಹೀಗಾಗಿ, ಗ್ರೂಪ್ ಲೀಗ್​ನ ಕೊನೆಯ ಪಂದ್ಯವು 40 ವರ್ಷದ ವೃದ್ಧಿಮಾನ್ ಸಾಹ ಅವರಿಗೆ ಕೊನೆಯ ಪಂದ್ಯವಾಗಲಿದೆ.
icon

(3 / 10)

ವಿದಾಯ ಪಂದ್ಯಕ್ಕೂ ಮೊದಲು ವೃದ್ಧಿಮಾನ್ ಸಹಾ ಅವರ ವರ್ಣರಂಜಿತ ಕ್ರಿಕೆಟ್ ವೃತ್ತಿಜೀವನವನ್ನು ಹಿಂತಿರುಗಿ ನೋಡೋಣ.
icon

(4 / 10)

ವೃದ್ಧಿಮಾನ್ ಸಹಾ ಭಾರತದ ಪರ ಒಟ್ಟು 40 ಟೆಸ್ಟ್​ಗಳಲ್ಲಿ ಟೆಸ್ಟ್​​ನಲ್ಲಿ 29.41ರ ಸರಾಸರಿಯಲ್ಲಿ 1353 ರನ್ (3 ಶತಕ, 6 ಅರ್ಧಶತಕ) ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 117 ರನ್. ಸಾಹ ಟೆಸ್ಟ್​​ನಲ್ಲಿ 92 ಕ್ಯಾಚ್​ ಪಡೆದಿದ್ದಾರೆ. 12 ಸ್ಟಂಪ್ ಮಾಡಿದ್ದಾರೆ.
icon

(5 / 10)

ಏಕದಿನ ಕ್ರಿಕೆಟ್​ನಲ್ಲಿ ಆಡಿರುವ ಪಂದ್ಯಗಳಲ್ಲಿ 41 ರನ್ ಗಳಿಸಿರುವ ಸಾಹ, 17 ಕ್ಯಾಚ್​​ ಪಡೆದಿದ್ದಾರೆ ಮತ್ತು 1 ಸ್ಟಂಪ್ ಔಟ್ ಮಾಡಿದ್ದಾರೆ.
icon

(6 / 10)

ವೃದ್ಧಿಮಾನ್ ಸಾಹ 141 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಅವರು 41.68 ಸರಾಸರಿಯಲ್ಲಿ 7169 ರನ್ ಗಳಿಸಿದ್ದಾರೆ. ಅವರು 14 ಶತಕ ಮತ್ತು 44 ಅರ್ಧಶತಕ ಸಿಡಿಸಿದ್ದಾರೆ. ವೈಯಕ್ತಿಕ ಗರಿಷ್ಠ ಇನ್ನಿಂಗ್ಸ್ 203 ರನ್ ಆಗಿದೆ. ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ವೃದ್ಧಿ 344 ಕ್ಯಾಚ್​​ಗಳನ್ನು ಪಡೆದಿದ್ದಾರೆ.
icon

(7 / 10)

ವೃದ್ಧಿಮಾನ್ ಲಿಸ್ಟ್ ಎ ಕ್ರಿಕೆಟ್​​ನಲ್ಲಿ ಒಟ್ಟು 116 ಪಂದ್ಯಗಳನ್ನು ಆಡಿದ್ದಾರೆ. ಅವರು 40.42 ಸರಾಸರಿಯಲ್ಲಿ 3072 ರನ್ ಗಳಿಸಿದ್ದಾರೆ. 3 ಶತಕ ಮತ್ತು 20 ಅರ್ಧಶತಕ ಸಿಡಿಸಿದ್ದಾರೆ. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 116 ರನ್. ಲಿಸ್ಟ್ ಎ ಕ್ರಿಕೆಟ್​ನಲ್ಲಿ ಸಾಹ 138 ಕ್ಯಾಚ್​​ ಪಡೆದಿದ್ದಾರೆ. 18 ಸ್ಟಂಪ್ ಮಾಡಿದ್ದಾರೆ.
icon

(8 / 10)

ಸಾಹ 255 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 24.24 ಸರಾಸರಿಯಲ್ಲಿ 4655 ರನ್ ಗಳಿಸಿದ್ದಾರೆ. 2 ಶತಕ ಮತ್ತು 24 ಅರ್ಧಶತಕ ಸಿಡಿಸಿದ್ದಾರೆ.  ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 129 ರನ್. ಟಿ20 ಕ್ರಿಕೆಟ್​ನಲ್ಲಿ ಸಾಹ 142 ಕ್ಯಾಚ್​​ಗಳು, 39 ಸ್ಟಂಪ್ ಮಾಡಿದ್ದಾರೆ.
icon

(9 / 10)

ವೃದ್ಧಿಮಾನ್ ಐಪಿಎಲ್​ನಲ್ಲೂ ಮಿಂಚಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಸನ್​ರೈಸರ್ಸ್​ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಪರ ಆಡಿದ್ದಾರೆ. 170 ಐಪಿಎಲ್ ಪಂದ್ಯಗಳಲ್ಲಿ 24.25 ಸರಾಸರಿಯಲ್ಲಿ 2934 ರನ್ ಗಳಿಸಿದ್ದಾರೆ. 1 ಶತಕ ಮತ್ತು 13 ಅರ್ಧಶತಕ ಸಿಡಿಸಿದ್ದಾರೆ. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 115 ರನ್. ಐಪಿಎಲ್​​ನಲ್ಲಿ ವೃದ್ದಿ 93 ಕ್ಯಾಚ್​, 26 ಸ್ಟಂಪ್ ಮಾಡಿದ್ದಾರೆ.
icon

(10 / 10)

ಇತರ ಗ್ಯಾಲರಿಗಳು