ಶ್ರೀಲಂಕಾ ವಿರುದ್ಧ ಗೆದ್ದು ಡಬ್ಲ್ಯುಟಿಸಿ ಆವೃತ್ತಿಗೆ ಅಂತ್ಯ ಹಾಡಿದ ಆಸ್ಟ್ರೇಲಿಯಾ; ಅಂತಿಮ ಅಂಕ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶ್ರೀಲಂಕಾ ವಿರುದ್ಧ ಗೆದ್ದು ಡಬ್ಲ್ಯುಟಿಸಿ ಆವೃತ್ತಿಗೆ ಅಂತ್ಯ ಹಾಡಿದ ಆಸ್ಟ್ರೇಲಿಯಾ; ಅಂತಿಮ ಅಂಕ ಪಟ್ಟಿ ಇಲ್ಲಿದೆ

ಶ್ರೀಲಂಕಾ ವಿರುದ್ಧ ಗೆದ್ದು ಡಬ್ಲ್ಯುಟಿಸಿ ಆವೃತ್ತಿಗೆ ಅಂತ್ಯ ಹಾಡಿದ ಆಸ್ಟ್ರೇಲಿಯಾ; ಅಂತಿಮ ಅಂಕ ಪಟ್ಟಿ ಇಲ್ಲಿದೆ

  • WTC 2025 Points Table: ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಿದ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ 2025 3ನೇ ಆವೃತ್ತಿಗೆ ತೆರೆ ಬಿದ್ದಿತು.

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಆಸ್ಟ್ರೇಲಿಯಾ ಗೆದ್ದು 2-0 ಅಂತರದಲ್ಲಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್​ಗಳೊಂದಿಗೆ ಗೆಲುವು ಸಾಧಿಸುವುದರ ಜೊತೆಗೆ 3ನೇ ಆವೃತ್ತಿಯ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೂ ತೆರೆ ಬಿದ್ದಿತು.
icon

(1 / 8)

(AP)

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ, 257 ರನ್​ಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ, ಸ್ಟೀವ್ ಸ್ಮಿತ್ (131) ಮತ್ತು ಅಲೆಕ್ಸ್ ಕ್ಯಾರಿ (156) ಅವರ ಶತಕಗಳ ನೆರವಿನಿಂದ 414 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಪರಿಣಾಮ 157 ರನ್​ಗಳ ಮುನ್ನಡೆ ಪಡೆಯಿತು.
icon

(2 / 8)

ಬಳಿಕ ಲಂಕಾ ಎರಡನೇ ಇನ್ನಿಂಗ್ಸ್​ನಲ್ಲೂ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. 231 ರನ್​ ಗಳಿಸಲಷ್ಟೇ ಶಕ್ತವಾಯಿತು. ಹಾಗಾಗಿ ಆಸೀಸ್​ಗೆ ಸಿಕ್ಕ ಗುರಿ 75 ರನ್. ಪಂದ್ಯದ ಅಂತಿಮ ದಿನವಾದ ಇಂದು ಮೊದಲ ಸೆಷನ್​​ನಲ್ಲೇ ಕಾಂಗರೂ ಪಡೆ ಗುರಿ ತಲುಪಿ ಸರಣಿಗೆ ಮುತ್ತಿಕ್ಕಿತು. 
icon

(3 / 8)

ಇದರೊಂದಿಗೆ 14 ವರ್ಷಗಳ ನಂತರ ಲಂಕಾ ನಾಡಿನಲ್ಲಿ ಆಸ್ಟ್ರೇಲಿಯಾ ಸರಣಿಗೆ ಗೆದ್ದಿದೆ. 156 ರನ್ ಸಿಡಿಸಿದ ಅಲೆಕ್ಸ್ ಕ್ಯಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸತತ ಟೆಸ್ಟ್ ಪಂದ್ಯಗಳಲ್ಲಿ ಶತಕ ಸಿಡಿಸಿದ ಸ್ಟೀವ್ ಸ್ಮಿತ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜೂನ್ 11 ರಿಂದ ಲಾರ್ಡ್ಸ್​ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್​ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ.
icon

(4 / 8)

(AFP)

2023-25ನೇ ಆವೃತ್ತಿಯ ಡಬ್ಲ್ಯುಟಿಸಿಗೆ ತೆರೆ ಬಿದ್ದಿದ್ದು, ಈಗಾಗಲೇ ಫೈನಲ್ ಪ್ರವೇಶಿಸಿರುವ ಆಸ್ಟ್ರೇಲಿಯಾ (69.44 ಗೆಲುವಿನ ಶೇಕಡವಾರು) ಎರಡನೇ ಸ್ಥಾನದೊಂದಿಗೆ ಟೂರ್ನಿ ಕೊನೆಗೊಳಿಸಿದೆ. ಮತ್ತೊಂದು ಫೈನಲಿಸ್ಟ್ ದಕ್ಷಿಣ ಆಫ್ರಿಕಾ (67.54 ಗೆಲುವಿನ ಶೇಕಡವಾರು) ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.
icon

(5 / 8)

ಭಾರತ ತಂಡವು ಮೂರನೇ ಸ್ಥಾನದಲ್ಲಿದೆ. ಗೆಲುವಿನ ಶೇಕಡವಾರು 50 ಹೊಂದಿದೆ. ನ್ಯೂಜಿಲೆಂಡ್ ಗೆಲುವಿನ ಶೇಕಡವಾರು 48.21 5ನೇ ಸ್ಥಾನದಲ್ಲಿದೆ. 
icon

(6 / 8)

(HT_PRINT)

ಇಂಗ್ಲೆಂಡ್ ಐದನೇ ಸ್ಥಾನದೊಂದಿಗೆ ಟೂರ್ನಿಯನ್ನು ಮುಗಿಸಿದೆ. ಗೆಲುವಿನ ಶೇಕಡವಾರು 43.18. ಆಸ್ಟ್ರೇಲಿಯಾ ವಿರುದ್ಧ ಸೋತ ಶ್ರೀಲಂಕಾ 38.46 ಗೆಲುವಿನ ಶೇಕಡವಾರಿನೊಂದಿಗೆ 6ನೇ ಸ್ಥಾನ ಪಡೆದಿದೆ.
icon

(7 / 8)

(PTI)

ಬಾಂಗ್ಲಾದೇಶ, ವೆಸ್ಟ್​ ಇಂಡೀಸ್, ಪಾಕಿಸ್ತಾನ ತಂಡಗಳು ಕ್ರಮವಾಗಿ 7, 8, 9ನೇ ಸ್ಥಾನದಲ್ಲಿವೆ.
icon

(8 / 8)

ಇತರ ಗ್ಯಾಲರಿಗಳು