ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್; ಗೆದ್ದ ಶ್ರೀಲಂಕಾ ಭಾರಿ ಏರಿಕೆ, ಸೋತ ಬಾಂಗ್ಲಾದೇಶ ಭಾರಿ ಕುಸಿತ, ಭಾರತ ಎಷ್ಟು ಸುರಕ್ಷಿತ?
- WTC Points Table: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ ಕೊನೆಯ 8ನೇ ಸ್ಥಾನಕ್ಕೆ ಕುಸಿದಿದೆ. ಈ ಸರಣಿಗೂ ಮುನ್ನ ಕೊನೆಯ ಸ್ಥಾನದಲ್ಲಿದ್ದ ಶ್ರೀಲಂಕಾ ಈಗ ಭಾರಿ ಜಿಗಿತ ಕಂಡಿದೆ.
- WTC Points Table: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ ಕೊನೆಯ 8ನೇ ಸ್ಥಾನಕ್ಕೆ ಕುಸಿದಿದೆ. ಈ ಸರಣಿಗೂ ಮುನ್ನ ಕೊನೆಯ ಸ್ಥಾನದಲ್ಲಿದ್ದ ಶ್ರೀಲಂಕಾ ಈಗ ಭಾರಿ ಜಿಗಿತ ಕಂಡಿದೆ.
(1 / 5)
ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲೂ ಗೆದ್ದ ಶ್ರೀಲಂಕಾ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ ಕಂಡಿದೆ, ಇದರೊಂದಿಗೆ ತಾನಾಡಿದ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಸೋಲು, ಗೆಲುವು ದಾಖಲಿಸಿದೆ. ಅಲ್ಲದೆ, ಈ ಸರಣಿಗೂ ಮುನ್ನ ಅಂಕಪಟ್ಟಿಯಲ್ಲಿ ಕೊನೆಯಲ್ಲಿದ್ದ ದ್ವೀಪರಾಷ್ಟ್ರ ಇದೀಗ ನಾಲ್ಕನೇ ಸ್ಥಾನಕ್ಕೇರಿದೆ. ಗೆಲುವಿನ ಶೇಕಡವಾರು 50ರಷ್ಟು ಹೊಂದಿದೆ.
(2 / 5)
ತವರಿನಲ್ಲಿ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್ವಾಶ್ ಆದ ಬಾಂಗ್ಲಾದೇಶವು ಡಬ್ಲ್ಯುಟಿಸಿ ಟೇಬಲ್ನಲ್ಲಿ ಕೊನೆಯ ಸ್ಥಾನಕ್ಕೆ ತಲುಪಿದೆ. ಸರಣಿ ಆರಂಭಕ್ಕೂ ಮುನ್ನ ಬಾಂಗ್ಲಾ ನಾಲ್ಕನೇ ಸ್ಥಾನದಲ್ಲಿತ್ತು. ಸದ್ಯ 8ನೇ ಸ್ಥಾನಕ್ಕೆ ಕುಸಿದಿರುವ ಬಾಂಗ್ಲಾ ಆಡಿರುವ 4 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 3ರಲ್ಲಿ ಸೋತಿದೆ. 25ರಷ್ಟು ಗೆಲುವಿನ ಪ್ರಮಾಣ ಹೊಂದಿದೆ. ಇಂಗ್ಲೆಂಡ್ ಮಾತ್ರ ಈ ಪಟ್ಟಿಯಲ್ಲಿ ಬಾಂಗ್ಲಾದೇಶಕ್ಕಿಂತ ಕೆಳಗಿದೆ.
(3 / 5)
ಲೀಗ್ ಟೇಬಲ್ನ ಮೊದಲ ಮೂರು ಸ್ಥಾನಗಳ ಮೇಲೆ ಶ್ರೀಲಂಕಾದ ಏರಿಕೆ ಮತ್ತು ಬಾಂಗ್ಲಾದೇಶದ ಕುಸಿತವು ಪರಿಣಾಮ ಬೀರಲಿಲ್ಲ. ಭಾರತ ಮೊದಲಿನಂತೆ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿರುವ ಭಾರತ 74 ಅಂಕ ಗಳಿಸಿದೆ. ಭಾರತ ಶೇ.68.51ರಷ್ಟು ಗೆಲುವಿನ ಪ್ರಮಾಣ ಹೊಂದಿದೆ. ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು, 62.50ರ ಗೆಲುವಿನ ಶೇಕಡವಾರು ಹೊಂದಿದೆ. ನ್ಯೂಜಿಲೆಂಡ್ 3ನೇ ಸ್ಥಾನದಲ್ಲಿದೆ. ಕಿವೀಸ್ 50ರ ಗೆಲುವಿನ ಶೇಕಡ ಹೊಂದಿದೆ.
(4 / 5)
ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಸೋತ ನಂತರ ಪಾಕಿಸ್ತಾನ ಟೇಬಲ್ನಲ್ಲಿ ಒಂದು ಸ್ಥಾನ ಮೇಲೇರಿತ್ತು. ಆದರೆ 2ನೇ ಟೆಸ್ಟ್ನಲ್ಲೂ ಬಾಂಗ್ಲಾ ಸೋತ ನಂತರ ಪಾಕ್ 5ನೇ ಸ್ಥಾನಕ್ಕೆ ಮರಳಿತು. ಐದು ಪಂದ್ಯಗಳಲ್ಲಿ ಶೇಕಡಾ 36.66ರ ಗೆಲುವಿನ ಪ್ರಮಾಣ ಹೊಂದಿರುವ ಪಾಕ್, ಲೀಗ್ ಟೇಬಲ್ನಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ವೆಸ್ಟ್ ಇಂಡೀಸ್ ಕೂಡ ಒಂದು ಹೆಜ್ಜೆ ಹಿಂದೆ ಸರಿದಿದೆ. ನಾಲ್ಕು ಪಂದ್ಯಗಳಲ್ಲಿ ಗೆಲುವಿನ ಶೇಕಡಾ.33.33ರ ಗಳಿಸಿರುವ ವೆಸ್ಟ್ ಇಂಡೀಸ್ ಆರನೇ ಸ್ಥಾನದಲ್ಲಿದೆ.
(5 / 5)
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ಕೊನೆಯ ಸ್ಥಾನದಲ್ಲಿದೆ. ಬ್ರಿಟೀಷರು ಆಡಿದ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಮಾತ್ರ ಗೆದ್ದಿದ್ದಾರೆ. 6 ಟೆಸ್ಟ್ ಪಂದ್ಯಗಳಲ್ಲಿ ಸೋತಿದ್ದು, 1 ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ. ಇಂಗ್ಲೆಂಡ್ ಕೇವಲ 17.5ರ ಗೆಲುವಿನ ಸರಾಸರಿ ಹೊಂದಿದೆ. ಸದ್ಯ 4 ಪಂದ್ಯಗಳಲ್ಲಿ ಶೇ.25ರಷ್ಟು ಗೆಲುವಿನ ಪ್ರಮಾಣ ಹೊಂದಿರುವ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಇತರ ಗ್ಯಾಲರಿಗಳು