ಫೆಬ್ರುವರಿ ತಿಂಗಳಲ್ಲಿ ಅಸಾಧಾರಣ ಪ್ರದರ್ಶನ; ಕೇನ್ ವಿಲಿಯಮ್ಸನ್ ಹಿಂದಿಕ್ಕಿ ಐಸಿಸಿ ಪ್ರಶಸ್ತಿ ಪಡೆದ ಯಶಸ್ವಿ ಜೈಸ್ವಾಲ್
- ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, 2024ರ ಫೆಬ್ರುವರಿ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎಡಗೈ ಬ್ಯಾಟರ್ ಬರೋಬ್ಬರಿ 712 ರನ್ ಗಳಿಸಿದರು. ಸರಣಿಯುದ್ದಕ್ಕೂ ಅಬ್ಬರಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಜೈಸ್ವಾಲ್, ನಿಸ್ಸಂಶಯವಾಗಿ ಈ ಪ್ರಶಸ್ತಿಗೆ ಅರ್ಹರು.

(1 / 6)
ಸರಣಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ಬ್ಯಾಟರ್ ಎಂಬ ದಾಖಲೆಗೆ ಯಶಸ್ವಿ ಪಾತ್ರರಾದರು. ಈ ಹಿಂದೆ ಭಾರತದ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್, ದ್ವಿಪಕ್ಷೀಯ ಸರಣಿಯಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ್ದರು.
(Reuters)(2 / 6)
ಫೆಬ್ರುವರಿ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಒಟ್ಟು ಮೂವರು ನಾಮನಿರ್ದೇಶನಗೊಂಡಿದ್ದರು. ನ್ಯೂಜಿಲ್ಯಾಂಡ್ ತಂಡದ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಮತ್ತು ಶ್ರೀಲಂಕಾದ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕಾ ಅವರನ್ನು ಸೋಲಿಸಿ ಯಶಸ್ವಿ ಜೈಸ್ವಾಲ್ ಈ ಪ್ರಶಸ್ತಿ ಗೆದ್ದಿದ್ದಾರೆ.
(AFP)(3 / 6)
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪ್ರಸಕ್ತ ಋತುವಿನಲ್ಲಿ ಹೆಚ್ಚು ರನ್ ಗಳಿಸುವ ಪ್ರಮುಖ ಆಟಗಾರ ಜೈಸ್ವಾಲ್. ಫೆಬ್ರವರಿ ತಿಂಗಳಲ್ಲಿ ಸತತ ಎರಡು ದ್ವಿಶತಕಗಳನ್ನು ಸಿಡಿಸಿರುವ ಅವರು ತಮ್ಮ ಫಾರ್ಮ್ ತೋರಿಸಿಕೊಂಡಿದ್ದಾರೆ.
(AFP)(4 / 6)
ಐಸಿಸಿ ಪ್ರಶಸ್ತಿ ಪಡೆಯಲು ನನಗೆ ನಿಜಕ್ಕೂ ಸಂತೋಷವಾಗಿದೆ. ಭವಿಷ್ಯದಲ್ಲಿ ನಾನು ಇನ್ನೂ ಹೆಚ್ಚಿನ ಪ್ರಶಸ್ತಿಗಳನ್ನು ಪಡೆಯುತ್ತೇನೆ ಎಂದು ಭಾವಿಸುತ್ತೇನೆ" ಎಂದು ಪ್ರಶಸ್ತಿ ದೊರೆತಿರುವ ಬಗ್ಗೆ ಜೈಸ್ವಾಲ್ ಹೇಳಿದ್ದಾರೆ.
(PTI)(5 / 6)
"ಇದು ನನ್ನ ಮೊದಲ ಐದು ಪಂದ್ಯಗಳ ಸರಣಿಯಾಗಿದೆ. ನಾನು ಅದನ್ನು ನಿಜವಾಗಿಯೂ ಆನಂದಿಸಿದ್ದೇನೆ. ನಾನು ಆಡಿದ ರೀತಿ ಮತ್ತು ನಾವು ಸರಣಿಯನ್ನು 4-1ರಿಂದ ಗೆದ್ದಿರುವುದಕ್ಕೆ ಖುಷಿಯಾಗಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.
(PTI)ಇತರ ಗ್ಯಾಲರಿಗಳು