ಇಂಗ್ಲೆಂಡ್ ವಿರುದ್ಧ ಸತತ ದ್ವಿಶತಕ; ಭಾರತದ ಏಕೈಕ ಆಟಗಾರನಾಗಿ ಐಸಿಸಿ ಪ್ರಶಸ್ತಿಗೆ ಯಶಸ್ವಿ ಜೈಸ್ವಾಲ್ ನಾಮನಿರ್ದೇಶನ
- ಭಾರತದ ಯುವ ಹಾಗೂ ಯಶಸ್ವಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಫೆಬ್ರವರಿ 2024ರ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಒಟ್ಟು ಮೂವರು ಬ್ಯಾಟರ್‌ಗಳು ನಾಮಿನೇಟ್ ಆಗಿದ್ದು, ಭಾರತದ ಏಕೈಕ ಆಟಗಾರನಾಗಿ ಜೈಸ್ವಾಲ್ ಸೇರಿದ್ದಾರೆ.
- ಭಾರತದ ಯುವ ಹಾಗೂ ಯಶಸ್ವಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಫೆಬ್ರವರಿ 2024ರ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಒಟ್ಟು ಮೂವರು ಬ್ಯಾಟರ್‌ಗಳು ನಾಮಿನೇಟ್ ಆಗಿದ್ದು, ಭಾರತದ ಏಕೈಕ ಆಟಗಾರನಾಗಿ ಜೈಸ್ವಾಲ್ ಸೇರಿದ್ದಾರೆ.
(1 / 6)
ಜೈಸ್ವಾಲ್ ಅವರೊಂದಿಗೆ ಕಿವೀಸ್ ಆಟಗಾರ ಕೇನ್ ವಿಲಿಯಮ್ಸನ್ ಹಾಗೂ ಶ್ರೀಲಂಕಾದ ಪಾತುಮ್ ನಿಸ್ಸಂಕಾ ಕೂಡಾ ನಾಮನಿರ್ದೇಶನಗೊಂಡಿದ್ದಾರೆ.
(PTI)(2 / 6)
ಫೆಬ್ರುವರಿ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಎರಡು ದ್ವಿಶತಕ ಸಿಡಿಸಿದ್ದ ಜೈಸ್ವಾಲ್, ಐಸಿಸಿ ತಿಂಗಳ ಆಟಗಾರನಿಗೆ ಪ್ರಶಸ್ತಿಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಸ್ಫೋಟಕ ಫಾರ್ಮ್‌ನಲ್ಲಿರುವ ಜೈಸ್ವಾಲ್, ವೈಜಾಗ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 209 ರನ್ ಗಳಿಸಿದ್ದರು. ಆ ನಂತರ ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೊಂದು ದ್ವಿಶತಕ (ಅಜೇಯ 214) ಗಳಿಸಿದರು.
(PTI)(3 / 6)
ಜೈಸ್ವಾಲ್ ಫೆಬ್ರುವರಿಯಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ರಾಜ್‌ಕೋಟ್ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್ ಸಿಡಿಸುವ ಮೂಲಕ, ಈ ಸ್ವರೂಪದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ಸರಿಗಟ್ಟಿದರು. ಇದರೊಂದಿಗೆ ಬ್ಯಾಕ್-ಟು-ಬ್ಯಾಕ್ ದ್ವಿಶತಕ ಸಿಡಿಸಿದ ವಿಶ್ವದ ಮೂರನೇ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡರು.
(PTI)(4 / 6)
ಫೆಬ್ರುವರಿಯಲ್ಲಿ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ 112ರ ಸರಾಸರಿಯಲ್ಲಿ 560 ರನ್ ಗಳಿಸಿದ್ದಾರೆ. ಇದರಲ್ಲಿ 20 ಸಿಕ್ಸರ್‌ಗಳು ಸೇರಿವೆ.
(PTI)(5 / 6)
ಅತ್ತ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿನಲ್ಲಿ ಕೇನ್ ವಿಲಿಯಮ್ಸನ್ ಪ್ರಮುಖ ಪಾತ್ರ ವಹಿಸಿದರು. ಅತ್ತ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸುವ ಮೂಲಕ ನಿಸ್ಸಂಕಾ ದಾಖಲೆ ನಿರ್ಮಿಸಿದರು. ಏಕದಿನ ಸ್ವರೂಪದಲ್ಲಿ 200ಕ್ಕೂ ಅಧಿಕ ರನ್ ಸಿಡಿಸಿದ ಲಂಕಾದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದರು.
(PTI)ಇತರ ಗ್ಯಾಲರಿಗಳು