Yashasvi Jaiswal: ಇತಿಹಾಸ ನಿರ್ಮಿಸಿದ ಯಶಸ್ವಿ ಜೈಸ್ವಾಲ್; 2024ರಲ್ಲಿ ಈ ಸಾಧನೆಗೈದ ಮೊದಲ ಆಟಗಾರ
- Yashasvi Jaiswal Record: ಪಲ್ಲೆಕೆಲ್ಲೆಯಲ್ಲಿ ಜರುಗಿದ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
- Yashasvi Jaiswal Record: ಪಲ್ಲೆಕೆಲ್ಲೆಯಲ್ಲಿ ಜರುಗಿದ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
(1 / 6)
ಪಲ್ಲೆಕೆಲೆಯಲ್ಲಿ ಜುಲೈ 28ರ ಭಾನುವಾರ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ವೈಯಕ್ತಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
(2 / 6)
2ನೇ ಟಿ20ಐನಲ್ಲಿ 7 ರನ್ ಗಳಿಸಿದ ಬೆನ್ನಲ್ಲೇ ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ 1,000ಕ್ಕೂ ಅಧಿಕ ಅಂತಾರಾಷ್ಟ್ರೀಯ ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2024ರಲ್ಲಿ ಜಸ್ವಾಲ್ ಟೆಸ್ಟ್ ಮತ್ತು ಟಿ20 ಪಂದ್ಯಗಳಲ್ಲಿ 13 ಪಂದ್ಯಗಳ 18 ಇನ್ನಿಂಗ್ಸ್ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ. ಯಶಸ್ವಿ ಇದುವರೆಗೂ ಈ ವರ್ಷದ ಏಕದಿನವೂ ಆಡಿಲ್ಲ.
(3 / 6)
ಯಶಸ್ವಿ ಜೈಸ್ವಾಲ್ ಈ ವರ್ಷ 6 ಟೆಸ್ಟ್ಗಳ 11 ಇನ್ನಿಂಗ್ಸ್ಗಳಲ್ಲಿ 2 ಶತಕ ಮತ್ತು ಮೂರು ಅರ್ಧಶತಕ ಸಹಿತ 740 ರನ್ ಗಳಿಸಿದ್ದಾರೆ. ಇಂಗ್ಲೆಂಡ್ನ ಜೋ ರೂಟ್ (611) ಈ ವರ್ಷ ಟೆಸ್ಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಜೈಸ್ವಾಲ್ ನಂತರ 2ನೇ ಸ್ಥಾನದಲ್ಲಿದ್ದಾರೆ.
(4 / 6)
ಅಲ್ಲದೆ, 7 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಜೈಸ್ವಾಲ್, 260 ರನ್ಗಳ ಗಡಿ ದಾಟಿದ್ದಾರೆ. ಇದರೊಂದಿಗೆ ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 1,000 ರನ್ಗಳ ಗಡಿ ದಾಟಿದರು.
(5 / 6)
ಶ್ರೀಲಂಕಾದ ಕುಸಾಲ್ ಮೆಂಡಿಸ್ ಈ ವರ್ಷ 3 ಸ್ವರೂಪಗಳಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಯಶಸ್ವಿ ನಂತರ 2ನೇ ಸ್ಥಾನದಲ್ಲಿದ್ದಾರೆ. ಮೆಂಡಿಸ್ ಈ ಕ್ಯಾಲೆಂಡರ್ ವರ್ಷದಲ್ಲಿ 26 ಅಂತಾರಾಷ್ಟ್ರೀಯ ಪಂದ್ಯಗಳ 28 ಇನ್ನಿಂಗ್ಸ್ಗಳಲ್ಲಿ 888 ರನ್ ಗಳಿಸಿದ್ದಾರೆ. ಅಫ್ಘಾನಿಸ್ತಾನದ ಇಬ್ರಾಹಿಂ ಝದ್ರನ್ ಮೂರನೇ ಸ್ಥಾನದಲ್ಲಿದ್ದು, 27 ಇನ್ನಿಂಗ್ಸ್ಗಳಲ್ಲಿ 844 ರನ್ ಗಳಿಸಿದ್ದಾರೆ.
ಇತರ ಗ್ಯಾಲರಿಗಳು