Yoga day 2024: ಪಾಪ್ ತಾರೆ ಮಡೋನ್ನಾಗೂ ಯೋಗದ ಗುಂಗು ಹಚ್ಚಿಸಿದ ಮೈಸೂರಿನ ಗುರು, ತೆಂಡೂಲ್ಕರ್, ಕರೀನಾ ಕಪೂರ್ ಕೂಡ ಇವರ ಶಿಷ್ಯರೇ !
- Mysuru Yoga ಬಿಕೆಎಸ್ ಅಯ್ಯಂಗಾರ್( BKS Iyengar) ಎನ್ನುವ ಹೆಸರು ಯೋಗದಲ್ಲಿ ಅಜರಾಮರ. ಮೈಸೂರಿನಲ್ಲಿ ಜನಿಸಿ ಪುಣೆ ಕರ್ಮ ಭೂಮಿ ಮಾಡಿಕೊಂಡು ಯೋಗಕ್ಕೆ ಜಾಗತಿಕ ಮನ್ನಣೆ ನೀಡಿದವರು ಬಿಕೆಎಸ್. ಜಗತ್ತಿನ ನಾನಾ ಮೂಲೆಗಳಲ್ಲಿಅವರ ಶಿಷ್ಯರಿದ್ದಾರೆ. ಅಮೆರಿಕಾ ಪಾಪ್ ಗಾಯಕಿ ಮಡೋನಾ, ಕ್ರಿಕೆಟಿಗ ತೆಂಡೂಲ್ಕರ್ ಕೂಡ. ಬಿಕೆಎಸ್ ಕುರಿತ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
- Mysuru Yoga ಬಿಕೆಎಸ್ ಅಯ್ಯಂಗಾರ್( BKS Iyengar) ಎನ್ನುವ ಹೆಸರು ಯೋಗದಲ್ಲಿ ಅಜರಾಮರ. ಮೈಸೂರಿನಲ್ಲಿ ಜನಿಸಿ ಪುಣೆ ಕರ್ಮ ಭೂಮಿ ಮಾಡಿಕೊಂಡು ಯೋಗಕ್ಕೆ ಜಾಗತಿಕ ಮನ್ನಣೆ ನೀಡಿದವರು ಬಿಕೆಎಸ್. ಜಗತ್ತಿನ ನಾನಾ ಮೂಲೆಗಳಲ್ಲಿಅವರ ಶಿಷ್ಯರಿದ್ದಾರೆ. ಅಮೆರಿಕಾ ಪಾಪ್ ಗಾಯಕಿ ಮಡೋನಾ, ಕ್ರಿಕೆಟಿಗ ತೆಂಡೂಲ್ಕರ್ ಕೂಡ. ಬಿಕೆಎಸ್ ಕುರಿತ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
(1 / 10)
ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಜನಿಸಿದ್ದು4 ಡಿಸೆಂಬರ್ 1918ರಂದು ಮೈಸೂರಿನಲ್ಲಿ. ಕುಟುಂಬದ ಮೂಲಕ ಬೆಳ್ಳೂರು, ಸಣ್ಣ ವಯಸ್ಸಿನಲ್ಲಿಯೇ ಅನಾರೋಗ್ಯಕ್ಕೆ ಈಡಾಗಿ ಯೋಗಕ್ಕೆ ಆಕರ್ಷಿತರಾದರು.
(2 / 10)
ಇವರ ತಂದೆ ಕೃಷ್ಣಮಾಚಾರ್ ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಬಿಕೆಎಸ್ ಒಂಬತ್ತು ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಕಡುಬಡತನದ ಬಾಲ್ಯವನ್ನು ಕಂಡ ಇವರು ಸಂಬಂಧಿಕರ ಮನೆಯಲ್ಲೇ ಬೆಳೆದರು. ಯೋಗ ಕಲಿಕೆ ಅವರ ಬದುಕನ್ನೇ ಬದಲಿಸಿತು.
(3 / 10)
ಹದಿನೈದನೇ ವಯಸ್ಸಿನಲ್ಲಿ ಮೈಸೂರಿನಲ್ಲಿ ನೆಲೆಸಿದ್ದ ತಮ್ಮ ಭಾವಮೈದುನ ಟಿ.ಕೃಷ್ಣಮಾಚಾರಿಯವರ ಬಳಿ ಎರಡು ವರ್ಷ ಕಾಲ ಯೋಗಾಭ್ಯಾಸ ನಡೆಸಿದ್ದರು. ಇದು ಅವರನ್ನು ಯೋಗದಲ್ಲಿಯೇ ಮುಂದುವರೆಯುವಂತೆ ಮಾಡಿ ದೊಡ್ಡ ಯೋಗ ಗುರುವನ್ನಾಗಿ ಮುಂದೆ ರೂಪಿಸಿತು.
(4 / 10)
ಮೈಸೂರು ಬದಲು ಪುಣೆಗೆ ಸ್ಥಳಾಂತರಗೊಂಡ ಬಿಕೆಎಸ್ ಅಯ್ಯಂಗಾರ್ ಅವರು ಅಲ್ಲಿಯೇ ಯೋಗ ತರಗತಿ ಶುರು ಮಾಡಿದರು. ವಿದೇಶಗಳಿಗೂ ಹೋಗಿ ಯೋಗ ಹೇಳಿಕೊಡತೊಡಗಿದರು,
(5 / 10)
ಬರೀ ಕರ್ನಾಟಕ, ಭಾರತ ಮಾತ್ರವಲ್ಲ. ಜಗತ್ತಿನಲ್ಲೇ ಅಯ್ಯಂಗಾರ್ ಯೋಗ ಎನ್ನುವ ಬ್ರಾಂಡ್ ಜನಪ್ರಿಯವಾಯಿತು. ಹಲವರು ಇಲ್ಲಿಗೆ ಬಂದು ಯೋಗ ಕಲಿತು ತಾವು ಅಲ್ಲಿ ಯೋಗ ಗುರುಗಳಾದರು.
(6 / 10)
ಬಿಕೆಎಸ್ ಅಯ್ಯಂಗಾರ್ ಅವರಲ್ಲಿ ಯೋಗ ಕಲಿಯಲು ಬರುವವರಲ್ಲಿ ಭಾರತದವರು ಮಾತ್ರವಲ್ಲ ವಿದೇಶಿಯರೂ ಇದ್ದರು. ತಮ್ಮದೇ ಕೆಲವು ಆಸನಗಳ ಮೂಲಕ ಅನಾರೋಗ್ಯ, ತೂಕ ಇಳಿಕೆ ಸಹಿತ ಹಲವು ಸಮಸ್ಯೆಗಳಿಗೆ ಯೋಗದಿಂದ ಪರಿಹಾರ ಸೂಚಿಸುತ್ತಿದ್ದ ಅಯ್ಯಂಗಾರರು.
(7 / 10)
ಬೆಲ್ಜಿಯಂ ರಾಣಿ ಎಲಿಜಬೆತ್, ಆರನೇ ಪೋಪ್ ಪಾಲ್ ಇವರ ಶಿಷ್ಯರಾಗಿದ್ದರು. ಇನ್ನು ಭಾರತದಲ್ಲಿ ನೆಹರು, ರಾಜೇಂದ್ರ ಪ್ರಸಾದ್, ಜಯಪ್ರಕಾಶ್ ನಾರಾಯಣ್, ಅಚ್ಯುತ್ ಪಟವರ್ಧನ್, ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ, ದಿಲೀಪ್ಕುಮಾರ್ ರಾಯ್, ಸಂಗೀತಗಾರ ಅಮ್ಜದ್ ಆಲಿಖಾನ್, ಕಲಾವಿದ ಆರ್.ಕೆ. ಲಕ್ಷ್ಮಣ್, , ಅನಿಲ್ ಕುಂಬ್ಳೆ, ಮಹಿಂದರ್ ಅಮರನಾಥ್, ರಾಹುಲ್ ದ್ರಾವಿಡ್, ಕಿರಣ್ ಮೋರೆ, ಜಹೀರ್ ಖಾನ್ , ಸಚಿನ್ ತೆಂಡೂಲ್ಕರ್ ಕೂಡ ಇವರಲ್ಲಿ ಯೋಗ ಕಲಿತು ಆರೋಗ್ಯ ಕಾಪಾಡಿಕೊಂಡವರೇ.
(8 / 10)
ಅಮೆರಿಕಾದ ಪಾಪ್ ತಾರೆ ಮಡೋನಾ ಕೂಡ ಅಯ್ಯಂಗಾರ್ ಅವರ ಯೋಗಕ್ಕೆ ಆಕರ್ಷಿತರಾದವರೇ. ಅಯ್ಯಂಗಾರ್ ಅವರ ಯೋಗಾಸನಗಳನ್ನು ಕಲಿತು ತಾವೇ ಯೋಗ ತರಗತಿ ಆರಂಭಿಸಿದ್ದು ಈಗ ಇತಿಹಾಸ
(9 / 10)
ಹಿಂದಿ ಸಿನೆಮಾ ತಾರೆ ಕರೀನಾ ಕಪೂರ್ ಕೂಡ ಅಯ್ಯಂಗಾರ್ ಅವರ ಯೋಗಾಸನಗಳನ್ನೇ ಬಳಸಿಕೊಂಡು ತೂಕ ಇಳಿಸಲು ಪ್ರಯತ್ನಿಸಿದೆ. ಯಶಸ್ವಿಯೂ ಆದೆ. ಅವರ ಯೋಗಾಸನದ ಮಹತ್ವ ಆರೋಗ್ಯಪೂರ್ಣ ಎಂದು ಕರೀನಾ ಹೇಳಿಕೊಂಡಿದ್ದರು.
(10 / 10)
ಬಿಕೆಎಸ್ ಅಯ್ಯಂಗಾರ್ ಅವರು ಯೋಗದ ಕುರಿತ ಹಲವು ಕೃತಿ ರಚಿಸಿದ್ದಾರೆ. ಅವರಿಗೆ ಭಾರತದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಮೂರು ಗೌರವಗಳು ಲಭಿಸಿವೆ. ಚೀನಾ ಸಹಿತ ಹಲವು ದೇಶಗಳೂ ಅಯ್ಯಂಗಾರ್ ಅವರಿಗೆ ನಾನಾ ರೂಪದಲ್ಲಿ ಗೌರವ ಸಲ್ಲಿಸಿವೆ. ಬಿಕೆಎಸ್ ಅಯ್ಯಂಗಾರ್ 2014, ಆಗಸ್ಟ್ 20ರಂದು ತಮ್ಮ 95ನೇ ವಯಸ್ಸಿನಲ್ಲಿ ಪುಣೆಯಲ್ಲಿ ನಿಧನರಾದರು. ಈಗಲೂ ಅವರ ಯೋಗದ ಮೂಲಕ ಜಗತ್ತಿನಾದ್ಯಂತ ಜೀವಂತವಾಗಿದ್ದಾರೆ.
ಇತರ ಗ್ಯಾಲರಿಗಳು