ಸ್ಮಾರ್ಟ್‌ಫೋನ್ ಬಿಸಿಯಾದರೆ ಸ್ಪೋಟಗೊಳ್ಳಬಹುದು; ಬೇಸಿಗೆಯಲ್ಲಿ ಮೊಬೈಲ್ ಬಳಸುವಾಗ ಎಚ್ಚರಿಕೆ ವಹಿಸಿ
ಸ್ಮಾರ್ಟ್‌ಫೋನ್ ಅತಿಯಾಗಿ ಬಳಸಿದಾಗ ಅದು ಬಿಸಿಯಾಗುವುದು ಸಾಮಾನ್ಯ ಸಮಸ್ಯೆ. ಆದರೆ ಸರಿಯಾಗಿ ನೀವು ಫೋನ್ ಕುರಿತು ಕಾಳಜಿ ವಹಿಸದಿದ್ದರೆ, ಅದು ಸ್ಫೋಟದಂತಹ ಗಂಭೀರ ಘಟನೆಗೆ ಕಾರಣವಾಗಬಹುದು. ನಿಮ್ಮ ಫೋನ್ ಅತಿಯಾಗಿ ಬಿಸಿಯಾಗುವುದರಿಂದ ಮತ್ತು ಬ್ಲಾಸ್ಟ್ ಆಗುವುದರಿಂದ ರಕ್ಷಿಸಲು ನೀವು ತೆಗೆದುಕೊಳ್ಳಬಹುದಾದ ಕೆಲವು ಪ್ರಮುಖ ಮುನ್ನೆಚ್ಚರಿಕೆಗಳನ್ನು ಇಲ್ಲಿ ನೀಡಲಾಗಿದೆ.
(1 / 11)
ಇಂದೋರ್: ಮೊಬೈಲ್ ಫೋನ್ ಸ್ಫೋಟಗೊಂಡು 9 ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. ಬಾಲಕಿ ಸ್ಮಾರ್ಟ್‌ಫೋನ್ ಅನ್ನು ಚಾರ್ಜಿಂಗ್ ಮಾಡುವ ಸಮಯದಲ್ಲಿ ಮಾತನಾಡುತ್ತಿದ್ದಳು, ಈ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಮತ್ತು ಕಿವಿ, ಮುಖ ಮತ್ತು ದವಡೆಗೆ ಗಾಯಗಳಾಗಿ ಅವಳು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅಂದಿನಿಂದ, ಸ್ಮಾರ್ಟ್‌ಫೋನ್ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಅತಿಯಾದ ಒತ್ತಡ ಮತ್ತು ಶಾಖದಿಂದಾಗಿ ಫೋನ್ ಸ್ಫೋಟಗೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು, ಇದರಿಂದ ನೀವು ಸುರಕ್ಷಿತವಾಗಿರುತ್ತೀರಿ.
(2 / 11)
ಚಾರ್ಜಿಂಗ್ ಮಾಡುವಾಗ ಬಳಸಬೇಡಿ - ಆಟಗಳನ್ನು ಆಡುವುದು, ವೀಡಿಯೊಗಳನ್ನು ನೋಡುವುದು ಅಥವಾ ಫೋನ್ ಅನ್ನು ಚಾರ್ಜ್ ಮಾಡುವಾಗ ಹೆವಿ ಅಪ್ಲಿಕೇಶನ್ಗಳನ್ನು ಬಳಸುವುದರಿಂದ ಫೋನ್ ಹೆಚ್ಚು ಬಿಸಿಯಾಗಬಹುದು.
(3 / 11)
ಮೂಲ ಚಾರ್ಜರ್ ಗಳು ಮತ್ತು ಕೇಬಲ್ ಬಳಸಿ - ನಕಲಿ ಅಥವಾ ಸ್ಥಳೀಯ ಚಾರ್ಜರ್ ಬ್ಯಾಟರಿಯನ್ನು ಹಾನಿಗೊಳಿಸಬಹುದು ಮತ್ತು ಹೆಚ್ಚು ಬಿಸಿಯಾಗುವ ಅಪಾಯವನ್ನು ಹೆಚ್ಚಿಸಬಹುದು. ಕಂಪನಿಯ ಒರಿಜಿನಲ್ ಚಾರ್ಜರ್ ಬಳಸಿ.
(4 / 11)
ಫಾಸ್ಟ್ ಚಾರ್ಜಿಂಗ್ ಅಗತ್ಯವಿಲ್ಲದಿದ್ದೆ ತಪ್ಪಿಸಿ - ಯಾವಾಗಲೂ ಫಾಸ್ಟ್ ಚಾರ್ಜಿಂಗ್ ಅನ್ನು ಬಳಸುವುದರಿಂದ ಬ್ಯಾಟರಿಯನ್ನು ತ್ವರಿತವಾಗಿ ಹಾನಿಗೊಳಿಸಬಹುದು ಮತ್ತು ಫೋನ್ ಬಿಸಿಯಾಗಲು ಕಾರಣವಾಗಬಹುದು.
(5 / 11)
ಫೋನ್ ಅನ್ನು ಬಿಸಿಲಿನಲ್ಲಿ ಅಥವಾ ಬೆಚ್ಚಗಿನ ಸ್ಥಳದಲ್ಲಿ ಇಡಬೇಡಿ - ಫೋನ್ ಅನ್ನು ಬಿಸಿಲಿನಲ್ಲಿ ಅಥವಾ ಮುಚ್ಚಿದ ಕಾರಿನೊಳಗೆ ಬಿಡುವುದು ಅಪಾಯಕಾರಿ. ಹೆಚ್ಚಿದ ಶಾಖವು ಅದರ ಬ್ಯಾಟರಿ ಸ್ಫೋಟಗೊಳ್ಳಲು ಕಾರಣವಾಗಬಹುದು.
(6 / 11)
ಹಿನ್ನೆಲೆ ಅಪ್ಲಿಕೇಶನ್ ಆಫ್ ಮಾಡಿ - ಫೋನ್ ಬ್ಯಾಕ್‌ಗ್ರೌಂಡ್ ನಲ್ಲಿ ಹೆಚ್ಚು ಅಪ್ಲಿಕೇಶನ್ ಚಾಲನೆ ಮಾಡುವುದರಿಂದ ಪ್ರೊಸೆಸರ್ ಲೋಡ್ ಹೆಚ್ಚಾಗುತ್ತದೆ ಮತ್ತು ಫೋನ್ ಅನ್ನು ಬಿಸಿ ಮಾಡುತ್ತದೆ.
(7 / 11)
ಸಾಫ್ಟ್‌ವೇರ್ ಅಪ್‌ಡೇಟ್- ಹಳೆಯ ಸಾಫ್ಟ್ ವೇರ್ ಕೆಲವೊಮ್ಮೆ ಹೆಚ್ಚು ಬಿಸಿಯಾಗಲು ಕಾರಣವಾಗಬಹುದು. ಅಪ್‌ಡೇಟ್ ಮೂಲಕ ದೋಷಗಳನ್ನು ಸರಿಪಡಿಸಲಾಗುತ್ತದೆ.
(8 / 11)
ಭಾರೀ ಗೇಮಿಂಗ್ ತಪ್ಪಿಸಿ - ದೀರ್ಘಕಾಲದವರೆಗೆ ಆಟಗಳನ್ನು ಆಡುವುದರಿಂದ ಪ್ರೊಸೆಸರ್ ಮತ್ತು ಜಿಪಿಯು ಹೆಚ್ಚು ಬಿಸಿಯಾಗಬಹುದು.
(9 / 11)
ಫೋನ್ ತುಂಬಾ ಬಿಸಿಯಾದಾಗ ಕವರ್ ಅನ್ನು ತೆಗೆದುಹಾಕಿ - ಕೆಲವು ಮೊಬೈಲ್ ಕವರ್‌ಗಳು ಶಾಖವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರಿಂದ ಫೋನ್ ಬಿಸಿಯಾಗಿ ಬ್ಲಾಸ್ಟ್ ಆಗಬಹುದು.
(10 / 11)
ಬ್ಯಾಟರಿಯಲ್ಲಿ ಊತವನ್ನು ನೀವು ನೋಡಿದರೆ, ಅದನ್ನು ತಕ್ಷಣ ಸರ್ವೀಸ್ ಸೆಂಟರ್ ಗೆ ತೆಗೆದುಕೊಂಡು ಹೋಗಿ - ಬ್ಯಾಟರಿ ಊದಿಕೊಂಡಿದ್ದರೆ ಅಥವಾ ಫೋನ್ ಹಿಂಭಾಗವು ಎಂಬೋಸ್ ಆಗಿದ್ದರೆ, ಅದು ಸ್ಫೋಟದ ಸಂಕೇತವಾಗಿರಬಹುದು.
ಇತರ ಗ್ಯಾಲರಿಗಳು