Yugadi 2024: ಹಿಂದೂಗಳ ಹೊಸ ವರ್ಷ ಯುಗಾದಿಯ ದಿನ ಪಾಲಿಸಬೇಕಾದ ಕ್ರಮಗಳೇನು, ಪೂಜಾ ವಿಧಿವಿಧಾನ ಹೇಗಿರಬೇಕು; ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yugadi 2024: ಹಿಂದೂಗಳ ಹೊಸ ವರ್ಷ ಯುಗಾದಿಯ ದಿನ ಪಾಲಿಸಬೇಕಾದ ಕ್ರಮಗಳೇನು, ಪೂಜಾ ವಿಧಿವಿಧಾನ ಹೇಗಿರಬೇಕು; ಇಲ್ಲಿದೆ ಮಾಹಿತಿ

Yugadi 2024: ಹಿಂದೂಗಳ ಹೊಸ ವರ್ಷ ಯುಗಾದಿಯ ದಿನ ಪಾಲಿಸಬೇಕಾದ ಕ್ರಮಗಳೇನು, ಪೂಜಾ ವಿಧಿವಿಧಾನ ಹೇಗಿರಬೇಕು; ಇಲ್ಲಿದೆ ಮಾಹಿತಿ

  • ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬ ಎಂದರೆ ನಾಡಿನೆಲ್ಲೆಡೆ ಸಂಭ್ರಮ ಕಳೆಗಟ್ಟಿರುತ್ತದೆ. ಈ ವರ್ಷ ಏಪ್ರಿಲ್‌ 9ರಂದು ಯುಗಾದಿ ಹಬ್ಬವಿದ್ದು, ಈಗಾಗಲೇ ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ. ಯುಗಾದಿ ಹಬ್ಬದ ವಿಶೇಷವೇನು, ಆ ಹಬ್ಬದ ಆಚರಣೆಯ ಕ್ರಮ, ಪೂಜಾ ವಿಧಾನಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. (ಪ್ರಿಯಾಂಕ ಗೌಡ)

ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಈ ವರ್ಷ ಏಪ್ರಿಲ್ 9ರಂದು ಯುಗಾದಿ ಆಚರಣೆ ಇದೆ. ಯುಗಾದಿ ಹಬ್ಬವನ್ನು ಭಾರತದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಹಬ್ಬವೆಂದು, ಮಹಾರಾಷ್ಟ್ರ, ದಿಯು ಮತ್ತು ದಮನ್ ಮುಂತಾದೆಡೆ ಗುಡಿ ಪಾಡ್ವಾ ಹೆಸರಿನಿಂದ ಕರೆಯಲ್ಪಡುತ್ತದೆ. 
icon

(1 / 10)

ಹೊಸ ಯುಗದ ಆರಂಭವೇ ಯುಗಾದಿ. ಶೋಭಾಕೃತ್‌ ನಾಮ ಸಂವತ್ಸರ ಮುಗಿದು, ಯುಗಾದಿ ದಿನದಿಂದ ಕ್ರೋಧಿನಾಮ ಸಂವತ್ಸರ ಆರಂಭವಾಗುತ್ತದೆ. ಈ ಹಬ್ಬದಂದು ಬೇವು-ಬೆಲ್ಲ ಹಂಚಿ ತಿನ್ನುವ ಜೊತೆಗೆ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ, ಬ್ರಹ್ಮದೇವನು ಯುಗಾಗಿ ಹಬ್ಬದಂದು ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ್ದನು ಎಂದು ನಂಬಲಾಗಿದೆ. ಇದು ವಸಂತ ಕಾಲವನ್ನು ಬರ ಮಾಡಿಕೊಳ್ಳುವ ಹಬ್ಬವೂ ಹೌದು. ಯುಗಾದಿ ಬಂತೆಂದರೆ ಗಿಡ-ಮರಗಳು ಚಿಗುರೊಡೆಯುತ್ತವೆ. ಪ್ರಕೃತಿ ಕೂಡ ಹಬ್ಬಕ್ಕೆ ಸಿಂಗಾರಗೊಂಡಂತೆ ಕಾಣುತ್ತದೆ. ಜನರು ಹೊಸವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರೆ. ಯುಗಾದಿ ದಿನದ ಪೂಜಾ ವಿಧಾನ ಹೇಗಿರುತ್ತದೆ? ಇಲ್ಲಿ ತಿಳಿಯಿರಿ..
icon

(2 / 10)

ಯುಗಾದಿ ಹಬ್ಬಕ್ಕೆ ಎರಡ್ಮೂರು ದಿನಗಳ ಮುನ್ನವೇ ಹಬ್ಬದ ಸಿದ್ಧತೆ ಆರಂಭವಾಗುತ್ತದೆ. ಈ ಹಬ್ಬಕ್ಕೆ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬೇಕು. ಹಬ್ಬದ ದಿನ ಮಾವಿನ ಎಲೆ, ಹೂಗಳಿಂದ ತೋರಣ ಕಟ್ಟಬೇಕು. ಮನೆ ಮುಂದೆ ವರ್ಣರಂಜಿತ ರಂಗೋಲಿಗಳನ್ನು ಬಿಡಿಸಬೇಕು. ರಂಗೋಲಿಯ ಜೊತೆ ಸ್ವಸ್ತಿಕ ಚಿಹ್ನೆಯನ್ನು ಸಹ ಬಿಡಿಸಬೇಕು.
icon

(3 / 10)

ಹಬ್ಬದ ದಿನ ಸೂರ್ಯೋದಯಕ್ಕೆ ಮುನ್ನ ಎದ್ದೇಳಬೇಕು. ಈ ದಿನ ಬ್ರಹ್ಮ (ಬ್ರಾಹ್ಮೀ) ಮುಹೂರ್ತದಲ್ಲಿ ಎದ್ದರೆ ಮಂಗಳಕರ ಎಂಬ ನಂಬಿಕೆ ಇದೆ. ಕಡಲೆಹಿಟ್ಟು ಹಚ್ಚಿಕೊಂಡು ಎಣ್ಣೆ-ಸ್ನಾನ ಮಾಡಿ ಹೊಸ ಬಟ್ಟೆ ಧರಿಸಬೇಕು. ಮನೆ ಹಾಗೂ ಸುತ್ತಮುತ್ತ ಹಸುವಿನ ಸಗಣಿಯಿಂದ ಶುದ್ಧ ಮಾಡಬೇಕು.
icon

(4 / 10)

ಯುಗಾದಿ ಹಬ್ಬ ಅಂದರೆ ನೆನಪಾಗುವುದೇ ಬೇವು-ಬೆಲ್ಲ. ಇದನ್ನು ಹಂಚಿ ತಿನ್ನುವ ಮೊದಲು ಸೂರ್ಯ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು. 
icon

(5 / 10)

ಈ ಮಂಗಳಕರ ದಿನದಂದು ಬ್ರಹ್ಮನು ಬ್ರಹ್ಮಾಂಡದ ಸೃಷ್ಟಿಯನ್ನು ಪ್ರಾರಂಭಿಸಿದನು ಎಂದು ನಂಬಲಾಗಿದ್ದರೆ, ಯುಗಗಳ ಸೃಷ್ಟಿಕರ್ತ ವಿಷ್ಣುವಿಗೆ ಪೂಜೆ ಸಲ್ಲಿಸಬೇಕು. ಈ ದಿನ ವಿಷ್ಣು ಹಾಗೂ ಬ್ರಹ್ಮ ದೇವನಿಗೆ ವಿಶೇಷ ಪೂಜೆ ಸಲ್ಲಿಸಬೇಕು. ಬೆಳಗ್ಗೆ ಬೇಗನೆ ಎದ್ದು ಅಭ್ಯಂಜನ ಸ್ನಾನ ಮಾಡಿದ ಬಳಿಕ ಕೈನಲ್ಲಿ ಹೂ, ಅಕ್ಷತೆ, ಗಂಧ ಹಾಗೂ ನೀರನ್ನು ಹಿಡಿದು ಬ್ರಹ್ಮದೇವನ ಮಂತ್ರಗಳನ್ನು ಪಠಿಸಬೇಕು.
icon

(6 / 10)

ಕಾರ್ತಿಕೇಯ ಹಾಗೂ ಗಣೇಶ ಸಮೃದ್ಧಿ, ಯೋಗಕ್ಷೇಮವನ್ನು ನೀಡುವ ದೇವರು ಎಂದು ನಂಬಲಾಗಿದೆ. ಹೀಗಾಗಿ ಮನೆಯಲ್ಲಿ ಈ ದೇವರುಗಳಿಗೆ ಪ್ರಿಯವಾದ ಮಾವಿನತೋರಣದ ಅಲಂಕಾರವನ್ನು ಮಾಡಬೇಕು. ಮನೆ ದೇವರು, ಕುಲದೇವರನ್ನು ಸಹ ಈ ದಿನ ಪೂಜಿಸಬಹುದು.
icon

(7 / 10)

ಕಾರ್ತಿಕೇಯ ಹಾಗೂ ಗಣೇಶ ಸಮೃದ್ಧಿ, ಯೋಗಕ್ಷೇಮವನ್ನು ನೀಡುವ ದೇವರು ಎಂದು ನಂಬಲಾಗಿದೆ. ಹೀಗಾಗಿ ಮನೆಯಲ್ಲಿ ಈ ದೇವರುಗಳಿಗೆ ಪ್ರಿಯವಾದ ಮಾವಿನತೋರಣದ ಅಲಂಕಾರವನ್ನು ಮಾಡಬೇಕು. ಮನೆ ದೇವರು, ಕುಲದೇವರನ್ನು ಸಹ ಈ ದಿನ ಪೂಜಿಸಬಹುದು.(PC: Canva)

ಯುಗಾದಿಯ ಸಮಯದಲ್ಲಿ ಭಕ್ತರು ಆರೋಗ್ಯ, ಸುಖ-ಸಂಪತ್ತು, ಸಮೃದ್ಧಿ ಮತ್ತು ಯಶಸ್ಸಿಗಾಗಿ ದೇವರ ಆಶೀರ್ವಾದವನ್ನು ಪಡೆಯಲು ಆಚರಣೆಗಳು ಮತ್ತು ಪೂಜೆಗಳಲ್ಲಿ ತೊಡಗುತ್ತಾರೆ. ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಕೆಲವರು ತಮ್ಮ ಹೊಸ ಉದ್ಯಮಗಳನ್ನು ಸಹ ಈ ದಿನದಂದೇ ಪ್ರಾರಂಭಿಸುತ್ತಾರೆ. ಒಟ್ಟಾರೆ ಯಾವುದೇ ಶುಭಕಾರ್ಯ ಮಾಡಲು ಈ ದಿನ ಸೂಕ್ತ. 
icon

(8 / 10)

ಯುಗಾದಿ ದಿನ ವಿಶೇಷ ಖಾದ್ಯ ಪಚಡಿ ತಯಾರಿಸುತ್ತಾರೆ. ಪಚಡಿ ಪಾನೀಯವನ್ನು ತಯಾರಿಸಿ ಮನೆ ಮಂದಿ, ನೆರೆಹೊರೆಯವರಿಗೆ ಹಂಚಲಾಗುತ್ತದೆ. ಜೊತೆಗೆ ಬೇವು-ಬೆಲ್ಲವನ್ನು ಹಂಚಿ ಯುಗಾದಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
icon

(9 / 10)

ಧರ್ಮ, ಧಾರ್ಮಿಕ, ಆಧ್ಯಾತ್ಮ, ಹಬ್ಬ-ಹರಿದಿನ, ದಿನಭವಿಷ್ಯ, ವಾರಭವಿಷ್ಯ ಈ ಎಲ್ಲವೂ ಇಲ್ಲಿದೆ. 
icon

(10 / 10)

ಇತರ ಗ್ಯಾಲರಿಗಳು