PM Modi Speech in Hubballi: ಯುವ ಶಕ್ತಿಯ ಕನಸುಗಳು ಭಾರತದ ದಿಕ್ಕನ್ನು ನಿರ್ಧರಿಸುತ್ತವೆ: ಹುಬ್ಬಳ್ಳಿಯಲ್ಲಿ ಮೋದಿ ಅಭಿಮತ
- ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು(ಜ.12-ಗುರುವಾರ), ಹುಬ್ಬಳ್ಳಿಯಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಿ ಭಾಷಣ ಮಾಡಿದರು. ರಾಷ್ಟ್ರ ನಿರ್ಮಾಣದಲ್ಲಿ ಭಾರತದ ಯುವಶಕ್ತಿಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಯುವ ಶಕ್ತಿಯ ಕನಸುಗಳು ಭಾರತದ ದಿಕ್ಕನ್ನು ನಿರ್ಧರಿಸುತ್ತವೆ ಎಂದು ಹೇಳಿದರು. ಈ ಕುರಿತು ಇಲ್ಲಿದೆ ಮಾಹಿತಿ..

(1 / 5)
ಯುವ ಶಕ್ತಿಯ ಕನಸುಗಳು ಭಾರತದ ದಿಕ್ಕನ್ನು ನಿರ್ಧರಿಸುತ್ತವೆ. ಯುವ ಶಕ್ತಿಯ ಆಕಾಂಕ್ಷೆಗಳು ಭಾರತದ ಗಮ್ಯಸ್ಥಾನವನ್ನು ನಿರ್ಧರಿಸುತ್ತವೆ. ಯುವ ಶಕ್ತಿಯ ಉತ್ಸಾಹವು ಭಾರತದ ಶಕ್ತಿಯನ್ನು ನಿರ್ಧರಿಸುತ್ತದೆ ಎಂದು ಪ್ರಧಾನಿ ಮೋದಿ ಈ ವೇಳೆ ಅಭಿಪ್ರಾಯಟ್ಟರು.(ANI)
(2 / 5)
ದೇಶ ಈಗ ಅಮೃತ ಕಾಲದಲ್ಲಿದ್ದು, ಯುವಕರು ತಮ್ಮ ರಾಷ್ಟ್ರೀಯ ಕರ್ತವ್ಯಗಳ ಮೇಲೆ ಹೆಚ್ಚಿನ ಒತ್ತು ನೀಡಬೇಕಿದೆ. ನಾವು ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಭಾರತದ ಯುವ ಸಮುದಾಯ ಸದಾಕಾಲ ಸ್ವಾಮಿ ವಿವೇಕಾನಂದ ಅವರಿಂದ ಸ್ಪೂರ್ತಿಯನ್ನು ಪಡೆದಿದೆ ಎಂದು ಪ್ರಧಾನಿ ಮೋದಿ ನುಡಿದರು.(ANI)
(3 / 5)
ಇಂದು(ಜ.12-ಗುರುವಾರ) ಸ್ವಾಮಿ ವಿವೇಕಾನಂದ ಅವರ 160ನೇ ಜನ್ಮದಿನ. ಯುವ ಸಮುದಾಯಕ್ಕೆ ಸದಾ ಮಾರ್ಗದರ್ಶಕರಾಗಿರುವ ಸ್ವಾಮಿ ವಿವೇಕಾನಂದ ಅವರು, ಭಾರತದ ಯುವಕರಿಗೆ ಸರಿಯಾದ ದಾರಿಯನ್ನು ತೋರುತ್ತಿದ್ದಾರೆ. ರಾಷ್ಟೀಯ ಯುವಜನೋತ್ಸವದ ಈ ಶುಭ ಸಂದರರ್ಭದಲ್ಲಿ ನಾನು ಸ್ವಾಮಿ ವಿವೇಕಾನಂದ ಅವರಿಗೆ ನಮಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.(ANI)
(4 / 5)
ಭಾರತವು ಇಂದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಭಾರತ ವಿಶ್ವದ ಅಗ್ರ 3ನೇ ಆರ್ಥಿಕತೆಯನ್ನು ಹೊಂದಿದ ರಾಷ್ಟ್ರವಾಗುವ ದಿನಗಳು ದೂರವಿಲ್ಲ. ದೇಶದ ಈ ಆರ್ಥಿಕ ಬೆಳವಣಿಗೆಯು ನಮ್ಮ ಯುವಕರಿಗೆ ಅಪಾರ ಅವಕಾಶಗಳನ್ನು ತರುತ್ತದೆ ಎಂದು ಪ್ರಧಾನಿ ಮೋದಿ ಭರವಸೆ ವ್ಯಕ್ತಪಡಿಸಿದರು.(ANI)
ಇತರ ಗ್ಯಾಲರಿಗಳು