ಆನಂದ್‌ನನ್ನು ಸಾಯಿಸಬೇಡಿ ಪ್ಲೀಸ್‌... ಅಮೃತಧಾರೆ ಧಾರಾವಾಹಿ ವೀಕ್ಷಕರ ವಿನಂತಿ, ಜೀವನ್‌ಗೆ ಭೂಪತಿಯ ಅಸಲಿ ಮುಖದ ದರ್ಶನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆನಂದ್‌ನನ್ನು ಸಾಯಿಸಬೇಡಿ ಪ್ಲೀಸ್‌... ಅಮೃತಧಾರೆ ಧಾರಾವಾಹಿ ವೀಕ್ಷಕರ ವಿನಂತಿ, ಜೀವನ್‌ಗೆ ಭೂಪತಿಯ ಅಸಲಿ ಮುಖದ ದರ್ಶನ

ಆನಂದ್‌ನನ್ನು ಸಾಯಿಸಬೇಡಿ ಪ್ಲೀಸ್‌... ಅಮೃತಧಾರೆ ಧಾರಾವಾಹಿ ವೀಕ್ಷಕರ ವಿನಂತಿ, ಜೀವನ್‌ಗೆ ಭೂಪತಿಯ ಅಸಲಿ ಮುಖದ ದರ್ಶನ

ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಪ್ರೊಮೊಗಳಿಗೆ ಕಿರುತೆರೆ ಸೀರಿಯಲ್‌ ವೀಕ್ಷಕರು "ಆನಂದ್‌ನನ್ನು ಸಾಯಿಸಬೇಡಿ" ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಅಮೃತಧಾರೆ ಸೀರಿಯಲ್‌ನಲ್ಲಿ ಆನಂದ್‌ಗೆ ಏನು ತೊಂದರೆಯಾಗಿದೆ ಎಂದು ತಿಳಿದುಕೊಳ್ಳೋಣ.

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀಕನ್ನಡ ಬಿಡುಗಡೆ ಮಾಡಿದೆ. ಇದರಲ್ಲಿ ಆನಂದ್‌ ವಿಚಾರವಾಗಿ ಗೌತಮ್‌ ದಿವಾನ್‌ ಅವರು ಅಪರ್ಣ ಮತ್ತು ಭೂಮಿಕಾರ ಬಳಿ ವಿಚಾರಿಸುವ ವಿವರ ಇದೆ.
icon

(1 / 10)

ಇದರೊಂದಿಗೆ ಭೂಪತಿಯಲ್ಲಿಗೆ ಬಂದ ಜೀವನಿಗೆ ಭೂಪತಿಯ ನಿಜವಾದ ಉದ್ದೇಶ ಏನೆಂದೂ ತಿಳಿಯುವ ಸೂಚನೆ ಇದೆ. ನಿನ್ನೆಯ ಎಪಿಸೋಡ್‌ಗೆ ಆನಂದ್‌ಗೆ ಶಕುಂತಲಾ ಗ್ಯಾಂಗ್‌ನ ಗೂಂಡಾಗಳು ಸಿಕ್ಕಾಪಟ್ಟೆ ಹೊಡೆದಿದ್ದರು.
icon

(2 / 10)

ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾದೇವಿಯ ಹಳೆ ಕಥೆ ಆನಂದ್‌ಗೆ ತಿಳಿದುಬಿಟ್ಟಿದೆ. ಅವಳು ಶಕುಂತಲಾದೇವಿ ಅಲ್ಲ, ಅವಳ ಹೆಸರು ಪಂಕಜಾ, ಅವನು ಲಕ್ಷ್ಮಿಕಾಂತ ಅಲ್ಲ, ಅವನು ಕೇವಲ ಕಾಂತಾ ಎಂಬ ಸತ್ಯವನ್ನು ನಂಜಮ್ಮನ ಗಂಡ ಬಾಯ್ಬಿಟ್ಟಿದ್ದಾನೆ.
icon

(3 / 10)

ಹಳ್ಳಿಯಲ್ಲಿದ್ದಾಗ ಅವರಿಬ್ಬರು ಮಾಡದ ಕೆಲಸವಿಲ್ಲ ಎಂದು ಆತ ಹೇಳಿದ್ದಾನೆ. ಗೌತಮ್‌ನ ಮಲತಾಯಿಯಾಗಿ ಇಷ್ಟು ವರ್ಷ ಶಕುಂತಲಾದೇವಿ ಮಾಡಿರುವ ಮೋಸವನ್ನು ಆನಂದ್‌ ತಿಳಿದುಕೊಂಡಿದ್ದಾನೆ.
icon

(4 / 10)

ಆನಂದ್‌ಗೆ ವಿಚಾರ ಗೊತ್ತಾಗಿದೆ ಎಂದು ತಿಳಿದ ನಂಜಮ್ಮ ಮತ್ತು ಶಕುಂತಲಾದೇವಿಯು ಆನಂದ್‌ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ.
icon

(5 / 10)

ಆನಂದ್‌ಗೆ ಗೂಂಡಾಗಳು ಸಿಕ್ಕಾಪಟ್ಟೆ ಹೊಡೆದಿದ್ದಾರೆ. ತಲೆಗೂ ಪೆಟ್ಟು ಬಿದ್ದಿದೆ. ಗೌತಮ್‌ ಕೂಡ ಆನಂದ್‌ನನ್ನು ಹುಡುಕುತ್ತಿದ್ದಾರೆ.
icon

(6 / 10)

ಇಲ್ಲಿ ಏನು ನಡೆಯುತ್ತಿದೆ ಎಂದು ಗೌತಮ್‌ ಅವರು ಗೊಂದಲದಲ್ಲಿ ಇದ್ದಾರೆ. ಏನು ನಡೆಯುತ್ತಿದೆ ಎಂದು ಅಪರ್ಣಾ ಮತ್ತು ಭೂಮಿಕಾ ಬಳಿ ಕೇಳಿದ್ದಾರೆ. ಅಪರ್ಣಾ ಏನೋ ಹೇಳಿದಂತೆ ಪ್ರೊಮೊದಲ್ಲಿ ತೋರಿಸಲಾಗಿದೆ.
icon

(7 / 10)

ಆನಂದ್‌ ಈಗ ಸತ್ಯ ಸುದ್ದಿಯನ್ನು ಗೌತಮ್‌ಗೆ ಹೇಳಿದರೆ ಪಂಕಜಾಳ ರಹಸ್ಯ ತಿಳಿಯಲಿದೆ. ಗೌತಮ್‌ ತನ್ನ ಮಲತಾಯಿಯ ವಿರುದ್ಧ ಯುದ್ಧ ಸಾರಬೇಕಾಗುತ್ತದೆ. ಗೂಂಡಾಗಳಿಂದ ಪೆಟ್ಟು ಬಿದ್ದ ಆನಂದ್‌ನ ಕಥೆ ಏನಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.
icon

(8 / 10)

ಮಲತಾಯಿಯ ಕೆಟ್ಟ ಕೆಲಸಗಳು ಗೌತಮ್‌ಗೆ ತಿಳಿದರೆ ಸೀರಿಯಲ್‌ ಬೇಗ ಮುಗಿಯುತ್ತದೆ. ಇದರ ಬದಲು ಆನಂದ್‌ ಸಾಯುತ್ತಾನ? ಕೋಮಕ್ಕೆ ಹೋಗುತ್ತಾನ ಎಂಬ ಸಂದೇಹ ಪ್ರೇಕ್ಷಕರಲ್ಲಿ ಮೂಡಿದೆ. ಇದೇ ಕಾರಣಕ್ಕೆ ಆನಂದ್‌ನನ್ನು ಸಾಯಿಸಬೇಡಿ ಎಂದು ವೀಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.
icon

(9 / 10)

ಇನ್ನೊಂದೆಡೆ ಜೀವನ್‌ಗೆ ಸತ್ಯ ಏನೆಂದು ತಿಳಿಯುತ್ತದೆ. ಭೂಪತಿ ತನ್ನ ಪರ್ಸನಲ್‌ ಸೆಕ್ರೆಟರಿ ಜತೆ "ಜೀವನನ್ನು ಕೇವಲ ಬಳಸಿಕೊಂಡು ಗೌತಮ್‌ನ ಮುಗಿಸುವೆ" ಎಂದೆಲ್ಲ ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಾನೆ. ಮುಂದೆ ಏನಾಗಬೇಕೆಂದು ಕಾದು ನೋಡಬೇಕಿದೆ.
icon

(10 / 10)

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು