ಆನಂದ್‌ನ ಕೊಲೆಯಾಗುತ್ತಾ, ಕೋಮಾಕ್ಕೆ ಹೋಗುತ್ತಾನ? ಎಲ್ಲಾ ಸೀರಿಯಲ್‌ಗಳ ಹಣೆಬರಹ ಇಷ್ಟೇ ಎಂದ ಅಮೃತಧಾರೆ ವೀಕ್ಷಕರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆನಂದ್‌ನ ಕೊಲೆಯಾಗುತ್ತಾ, ಕೋಮಾಕ್ಕೆ ಹೋಗುತ್ತಾನ? ಎಲ್ಲಾ ಸೀರಿಯಲ್‌ಗಳ ಹಣೆಬರಹ ಇಷ್ಟೇ ಎಂದ ಅಮೃತಧಾರೆ ವೀಕ್ಷಕರು

ಆನಂದ್‌ನ ಕೊಲೆಯಾಗುತ್ತಾ, ಕೋಮಾಕ್ಕೆ ಹೋಗುತ್ತಾನ? ಎಲ್ಲಾ ಸೀರಿಯಲ್‌ಗಳ ಹಣೆಬರಹ ಇಷ್ಟೇ ಎಂದ ಅಮೃತಧಾರೆ ವೀಕ್ಷಕರು

ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಕೆಲವು ಎಪಿಸೋಡ್‌ಗಳು ಪ್ರೇಕ್ಷಕರ ಕುತೂಹಲ ಕೆರಳಿಸಿತ್ತು. ಆನಂದ್‌ಗೆ ನಂಜಮ್ಮನ ಗಂಡ ಕುಡಿದ ಮತ್ತಿನಲ್ಲಿ ಎಲ್ಲಾ ಸತ್ಯ ವಿಷಯ ಹೇಳಿರುತ್ತಾನೆ. ಇದನ್ನು ತಿಳಿದ ಶಕುಂತಲಾ ಗ್ಯಾಂಗ್‌ ರೌಡಿಗಳನ್ನು ಕಳುಹಿಸಿದೆ.

ಅಮೃತಧಾರೆ ಧಾರಾವಾಹಿಯ ಕಳೆದ ಕೆಲವು ಸಂಚಿಕೆಗಳನ್ನು ನೋಡಿ ಸೀರಿಯಲ್‌ ವೀಕ್ಷಕರು ಖುಷಿಯಾಗಿದ್ದರು. ಕೊನೆಗೂ ಶಕುಂತಲಾದೇವಿಯ ರಹಸ್ಯ ಎಲ್ಲರಿಗೂ ತಿಳಿಯುವ ಸಮಯ ಬಂದಿದೆ ಎಂದು ಭಾವಿಸಿದ್ದರು. ಆದರೆ, ಸೀರಿಯಲ್‌ ನಿರ್ದೇಶಕರು ಅಮೃತಧಾರೆ ಧಾರಾವಾಹಿಯನ್ನು ಬೇಗ ಮುಗಿಸುವ ಆತುರದಲ್ಲಿ ಇಲ್ಲ ಎನ್ನುವುದು ತಿಳಿದು ಬೇಸರಗೊಂಡಿದ್ದಾರೆ.
icon

(1 / 10)

ಕನಕದುರ್ಗಾದಲ್ಲಿ ಭೂಮಿಕಾ ಮತ್ತು ಆನಂದ್‌ ಸೇರಿ ಪಂಕಜಾಳ ರಹಸ್ಯ ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಬಾರ್‌ನೊಳಗೆ ನಂಜಮ್ಮಳ ಗಂಡ ಇರುವ ವಿಷಯ ತಿಳಿದು ಆನಂದ್‌ ಅಲ್ಲಿಗೆ ಹೋಗಿ ಸಾಕಷ್ಟು ಸಂಗತಿ ತಿಳಿದುಕೊಳ್ಳುತ್ತಾನೆ.
icon

(2 / 10)

ವಿಶೇಷವೆಂದರೆ ನಂಜಮ್ಮನ ಗಂಡ ಕಾಂತನ ಕಥೆಯನ್ನು ಹೇಳುತ್ತಾನೆ. ಪಂಕಜಾಳ ಕಥೆಯನ್ನು ಇನ್ನು ಬಾಯ್ಬಿಟ್ಟಿಲ್ಲ. ಹೀಗಾಗಿ, ಶಕುಂತಲಾ ಗ್ಯಾಂಗ್‌ ಸದ್ಯ ಸಿಕ್ಕಿ ಬೀಳುವ ಸಾಧ್ಯತೆ ಇಲ್ಲ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.
icon

(3 / 10)

ತನ್ನ ಗಂಡನನ್ನು ಹುಡುಕುತ್ತಾ ಬಂದ ನಂಜಮ್ಮಳಿಗೆ ಅಲ್ಲಿ ಆನಂದ್‌ ಕಾಣಿಸುತ್ತಾನೆ. ಅವತ್ತು ಕನಕಪುರದಲ್ಲಿಯೂ ಇವನೇ ಅಲ್ವಾ ಡಿಕ್ಕಿ ಹೊಡೆದದ್ದು ಎಂದು ಆಕೆಗೆ ನೆನಪಿಗೆ ಬರುತ್ತದೆ. ತಕ್ಷಣ ಆನಂದ್‌ ಅಲ್ಲಿರುವ ವಿಷಯವನ್ನು ಶಕುಂತಲಾದೇವಿಗೆ ತಿಳಿಸುತ್ತಾಳೆ.
icon

(4 / 10)

ಆನಂದ್‌ ಮತ್ತು ಭೂಮಿಕಾಳನ್ನು ಅಲ್ಲೇ ಮುಗಿಸಲು ವ್ಯವಸ್ಥೆ ಮಾಡು ಎಂದು ಶಕುಂತಲಾದೇವಿ ಹೇಳುತ್ತಾಳೆ. ಜತೆಗೆ ತನ್ನ ಗೂಂಡಾಗಳನ್ನೂ ಕನಕದುರ್ಗಾಕ್ಕೆ ಕಳುಹಿಸುತ್ತಾಳೆ.
icon

(5 / 10)

ಜೀ ಕನ್ನಡ ವಾಹಿನಿಯು ಬಿಡುಗಡೆ ಮಾಡಿರುವ ಪ್ರೊಮೊವೊಂದರಲ್ಲಿ ಆನಂದ್‌ ನಿಂತಿರುವಾಗ ರೌಡಿಗಳು ಕಾರಿನಲ್ಲಿ ಬರುವ ದೃಶ್ಯವಿದೆ.  ಈ ಪ್ರೊಮೊ ನೋಡಿ ವೀಕ್ಷಕರು ಬೇಸರಗೊಂಡು ಕಾಮೆಂಟ್‌ಗಳನ್ನು ಮಾಡಿದ್ದಾರೆ.
icon

(6 / 10)

ಈ ಬಾರಿ ಆನಂದ್‌ ಹೊಗೆ ಹಾಕಿಸಿಕೊಳ್ಳುವುದು ಪಕ್ಕಾ, ಆನಂದ್‌ ಕೋಮಾಕ್ಕೆ ಹೋಗಬಹುದು, ಗೌತಮ್‌ ಹೀರೋ ತರಹ ಬಂದು ರೌಡಿಗಳ ಜತೆ ಫೈಟಿಂಗ್‌ ಮಾಡಬಹುದು ಎಂದೆಲ್ಲ ಪ್ರೇಕ್ಷಕರು ಅಂದಾಜಿಸಿದ್ದಾರೆ.
icon

(7 / 10)

ಆದರೆ, ಪಂಕಜಾಳ ರಹಸ್ಯ ಗೌತಮ್‌ಗೆ ತಿಳಿಯಲು ಇನ್ನೂ ಹಲವು ತಿಂಗಳು, ವರ್ಷಗಳು ಬೇಕಾಗಬಹುದು ಎಂದು ಕಿರುತೆರೆ ಸೀರಿಯಲ್‌ ವೀಕ್ಷಕರು ಊಹಿಸುತ್ತಿದ್ದಾರೆ.
icon

(8 / 10)

ಅಮೃತಧಾರೆ ಧಾರಾವಾಹಿಯು ಕನ್ನಡದ ಉತ್ತಮ ಧಾರಾವಾಹಿ ಎನ್ನುವುದು ನಿಜ. ಗೌತಮ್‌ಗೆ ಲಕ್ಷ್ಮಿಕಾಂತ್‌ ಮತ್ತು ಶಕುಂತಲಾದೇವಿಯ ನಿಜ ಕಥೆ ಗೊತ್ತಾದರೆ ಸೀರಿಯಲ್‌ ಮುಗಿದಂತೆ. ಹೀಗಾಗಿ, ಸೀರಿಯಲ್‌ ನಿರ್ದೇಶಕರು ಕ್ಲೈಮ್ಯಾಕ್ಸ್‌  ಹತ್ತಿರ ಬಂದು ಮತ್ತೆಮತ್ತೆ ವಾಪಸ್‌ ಇಂಟರ್‌ವಲ್‌ಗೆ ಹೋಗುವ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
icon

(9 / 10)

 ಎಲ್ಲಾ ಸೀರಿಯಲ್‌ಗಳ ಕಥೆ ಇಷ್ಟೇ ಎಂದು ಸೀರಿಯಲ್‌ ವೀಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.
icon

(10 / 10)

ಎಲ್ಲಾ ಸೀರಿಯಲ್‌ಗಳ ಕಥೆ ಇಷ್ಟೇ ಎಂದು ಸೀರಿಯಲ್‌ ವೀಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು