ಸಿಕ್ಕಿಬಿದ್ಲು ಶಕುಂತಲಾ! ಪಂಕಜಾಳ ರಹಸ್ಯ ಬಹಿರಂಗಪಡಿಸಿದ ನಂಜಮ್ಮಳ ಗಂಡ- ಅಮೃತಧಾರೆ ಮಹಾಸಂಚಿಕೆಯಲ್ಲಿ ಅಚ್ಚರಿಯ ಬೆಳವಣಿಗೆ
ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಮಹಾ ಸಂಚಿಕೆ ಮೇ 23ರಂದು ಪ್ರಸಾರವಾಗುತ್ತಿದೆ. ಇದರ ಪ್ರೊಮೊದಲ್ಲಿ ಸಾಕಷ್ಟು ಅಚ್ಚರಿಯ ವಿಷಯ ಬಹಿರಂಗವಾಗಿದೆ. ನಂಜಮ್ಮನ ಗಂಡ ಕುಡಿದ ಮತ್ತಿನಲ್ಲಿ ಆನಂದ್ ಮುಂದೆ ಪಂಕಜಾಳ ರಹಸ್ಯ ಬಿಚ್ಚಿಟ್ಟಿದ್ದಾರೆ.
(1 / 12)
ಅಮೃತಧಾರೆಯಲ್ಲಿ ಕಳೆದ ಹಲವು ಸಂಚಿಕೆಗಳಿಂದ ಪಂಕಜಾಳ ರಹಸ್ಯ ಕಂಡುಹಿಡಿಯುವ ಪ್ರಯತ್ನವನ್ನು ಭೂಮಿಕಾ ಮಾಡುತ್ತಿದ್ದಾರೆ. ಆನಂದ್ ಕೂಡ ಈಕೆಗೆ ಸಾಥ್ ನೀಡುತ್ತಿದ್ದಾರೆ. ಪಂಕಜಾ ಮತ್ತು ಶಕುಂತಲಾದೇವಿ ಇಬ್ಬರೂ ಒಬ್ಬರೇ ಎಂಬ ಅನುಮಾನ ಭೂಮಿಕಾಳಿಗೆ ಬಂದಿದೆ.
(2 / 12)
ಶಕುಂತಲಾದೇವಿಯ ಕೋಣೆಯೊಳಗೆ ಪಂಕಜಾ ಎಂಬ ಹೆಸರಿನ ಜನನ ಪ್ರಮಾಣ ಪತ್ರ ದೊರಕಿತ್ತು. ಇದನ್ನು ನೋಡಿದ ಬಳಿಕ ಭೂಮಿಕಾಗೆ ಅನುಮಾನ ಬಂದಿದೆ. ಪಂಕಜಾಳ ಜನನ ಪ್ರಮಾಣ ಪತ್ರದಲ್ಲಿರುವ ಊರಿನಲ್ಲಿ ವಿಚಾರಿಸಿದ್ದಾರೆ.
(3 / 12)
ಆ ಸಮಯದಲ್ಲಿ ನಂಜಮ್ಮ ಎಂಬ ಮಹಿಳೆ ಫೋನ್ ಮಾಡಿದ್ದಳು. ಶಕುಂತಲಾದೇವಿ ಆಕೆಯೊಂದಿಗೆ ಮಾತನಾಡಿ ಕನಕಪುರದ ಬಳಿ ಭೇಟಿಯಾಗಿದ್ದರು.
(5 / 12)
ಪಂಕಜಾಳ ರಹಸ್ಯ ತಿಳಿಯಲು ಭೂಮಿಕಾ ಅದೇ ಊರಿಗೆ ಹೋಗಿದ್ದಾರೆ. ಫ್ಯಾಕ್ಟರಿ ವಿಸಿಟ್ ನೆಪದಲ್ಲಿ ಗೌತಮ್‌ನನ್ನೂ ಕರೆದುಕೊಂಡು ಆನಂದ್ ಹೋಗಿದ್ದರು. ಆನಂದ್, ಅಪರ್ಣಾ, ಗೌತಮ್, ಭೂಮಿಕಾ ಅಲ್ಲಿದ್ದರು. ಆ ಸಮಯದಲ್ಲಿ ಭೂಮಿಕಾ ಮತ್ತು ಆನಂದ್‌ಗೆ ನಂಜಮ್ಮನ ಗಂಡನ ಪರಿಚಯವಾಗಿದೆ.
(6 / 12)
ಜೀ ಕನ್ನಡ ಇಂದು ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ನಂಜಮ್ಮ ತನ್ನ ಗಂಡನಿಗೆ ಹಣ ನೀಡುತ್ತಾಳೆ. ಅವಳಲ್ಲಿ ಶಕುಂತಲಾದೇವಿ ನೀಡಿದ ಹಣವಿದೆ. "ಬೇಕಾದ್ದಷ್ಟು ಕುಡಿ" ಎಂದು ಹಣ ನೀಡುತ್ತಾಳೆ.
(7 / 12)
ಕುಡುಕ ಗಂಡ ನೇರ ಬಾರ್‌ಗೆ ಹೋಗಿದ್ದಾನೆ. ಭೂಮಿಕಾ ಮತ್ತು ಆನಂದ್‌ಗೆ ಇದು ಗೊತ್ತಾಗಿದೆ. ಆನಂದ್ ನೇರವಾಗಿ ಹೋಗಿ ಬಾರ್‌ನೊಳಗೆ ಈ ತಾತಾನ ಪಕ್ಕ ಕುಳಿತಿದ್ದಾನೆ.
(8 / 12)
ಈ ಊರಲ್ಲಿ ನಂಜಮ್ಮ ಎಂಬವರ ಬಗ್ಗೆ ಗೊತ್ತಾ ಎಂದು ಮಾತು ಆರಂಭಿಸಿದ್ದಾನೆ. ಬಳಿಕ ಪಂಕಜಾಳ ಬಗ್ಗೆ ವಿಚಾರಿಸಿದ್ದಾನೆ.
(10 / 12)
ಕಾಂತ ಮತ್ತು ಪಂಕಜಾ ಅಣ್ಣ ತಂಗಿ. ಕಾಂತಾ ಅಪಘಾತ ಮಾಡಿ ಊರಿಂದ ಓಡಿ ಹೋದ. ಇಲ್ಲಾಂದ್ರೆ ಜೈಲಿಗೆ ಹೋಗಬೇಕಿತ್ತು ಎಂದು ಹೇಳುತ್ತಾನೆ. ಇದನ್ನು ಕೇಳಿದ ಆನಂದ್ ಅಚ್ಚರಿಗೆ ಈಡಾಗುತ್ತಾನೆ.
ಇತರ ಗ್ಯಾಲರಿಗಳು