ಮಲ್ಲಿ ಮೋಹಿನಿ ಕಾಟಕ್ಕೆ ದಿಯಾ ವಿಲವಿಲ, ಅಕ್ರಮ ಸಂಬಂಧ ಮಾಡಿದವಳ ಬೆವರಿಳಿಸಿದ ಜೈದೇವ್‌ ಪತ್ನಿ- ಅಮೃತಧಾರೆ ಇಂದಿನ ಸ್ಟೋರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಲ್ಲಿ ಮೋಹಿನಿ ಕಾಟಕ್ಕೆ ದಿಯಾ ವಿಲವಿಲ, ಅಕ್ರಮ ಸಂಬಂಧ ಮಾಡಿದವಳ ಬೆವರಿಳಿಸಿದ ಜೈದೇವ್‌ ಪತ್ನಿ- ಅಮೃತಧಾರೆ ಇಂದಿನ ಸ್ಟೋರಿ

ಮಲ್ಲಿ ಮೋಹಿನಿ ಕಾಟಕ್ಕೆ ದಿಯಾ ವಿಲವಿಲ, ಅಕ್ರಮ ಸಂಬಂಧ ಮಾಡಿದವಳ ಬೆವರಿಳಿಸಿದ ಜೈದೇವ್‌ ಪತ್ನಿ- ಅಮೃತಧಾರೆ ಇಂದಿನ ಸ್ಟೋರಿ

ಜೀ ಕನ್ನಡದ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಮಲ್ಲಿಯ ಮೋಹಿನಿ ಅವತಾರ ಇರಲಿದೆ. ಹೌದು, ಜೀ ಕನ್ನಡ ವಾಹಿನಿಯು ಬಿಡುಗಡೆ ಮಾಡಿದ ಪ್ರೊಮೊದಲ್ಲಿ ಈ ಕುರಿತ ಝಲಕ್‌ ಇದೆ. ಮಲ್ಲಿಯ ಕಾಟಕ್ಕೆ ದಿಯಾ ವಿಲವಿಲ ಒದ್ದಾಡಿದ್ದಾಳೆ.

ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ: ಜೈದೇವ್‌ ಮತ್ತು ದಿಯಾ ಮನೆಯಲ್ಲಿದ್ದಾರೆ. ಮನೆಯಿಂದ ಎಲ್ಲರೂ ಹೊರಗೆ ಹೋಗಿರುವುದನ್ನು ಬಳಸಿರುವ ಜೈದೇವ ತನ್ನ ಮನೆಗೆ ದಿಯಾಳನ್ನು ಕರೆಸಿಕೊಂಡಿದ್ದಾನೆ. ದಿಯಾಳ ಜತೆ ಚಕ್ಕಂದ ಆಡಲು ಮೋಹಿನಿ ಕಾಟ ಅಡ್ಡಿಪಡಿಸುತ್ತಿದೆ.
icon

(1 / 12)

ಒಂದೆಡೆ ಗೌತಮ್‌ ದಿವಾನ್‌ ಮತ್ತು ಭೂಮಿಕಾ ಕನಕದುರ್ಗಾ ಗೆಸ್ಟ್‌ ಹೌಸ್‌ಗೆ ಹೋಗಿದ್ದಾರೆ. ಪಂಕಜಾಳ ರಹಸ್ಯ ತಿಳಿಯಲು ನಂಜಮ್ಮಳನ್ನು ಹುಡುಕಿಕೊಂಡು ಭೂಮಿಕಾ ಅಲ್ಲಿಗೆ ಹೋಗಿದ್ದಾರೆ. ಉಪಾಯವಾಗಿ ಅಲ್ಲಿಗೆ ಗೌತಮ್‌ ಕೂಡ ಬರುವಂತೆ ಮಾಡಿದ್ದಾರೆ ಭೂಮಿಕಾ ಮತ್ತು ಆನಂದ್.‌
icon

(2 / 12)

ಶಕುಂತಲಾ ದೇವಿ ಮತ್ತು ಲಕ್ಕಿ ಲಕ್ಷ್ಮಿಕಾಂತ್‌ ಕೂಡ ಹೊರಗೆ ಹೋಗಿದ್ದಾರೆ. ಈ ಸಮಯದಲ್ಲಿ ಮಲ್ಲಿಯನ್ನೂ ಹೊರಗೆ ಕಳುಹಿಸಿದ್ದಾನೆ ಜೈದೇವ್‌. ಜೈದೇವನ ಬುದ್ದಿ ಗೊತ್ತಿರುವ ಮಲ್ಲಿ ವಾಪಸ್‌ ಬಂದಿದ್ದಾಳೆ.
icon

(3 / 12)

ಜೈದೇವ್‌ ಮತ್ತು ದಿಯಾ ಮನೆಯೊಳಗಿನ ಜೋಕಾಲಿಯಲ್ಲಿ ಕುಳಿತಿದ್ದಾರೆ. ಆಗ ಜೈದೇವ್‌ಗೆ ಯಾಕೋ ಮಾಯಿಶ್ಚರ್‌ ಕ್ರೀಮ್‌ ಹಚ್ಚಬೇಕೆನಿಸಿದೆ. ಈಗ ಕ್ರೀಮ್‌ ತರುವೆ ಎಂದು ಹೋಗಿದ್ದಾನೆ.
icon

(4 / 12)

ಆಗ ಅಲ್ಲಿಗೆ ಎಂಟ್ರಿ ನೀಡಿದ ಮಲ್ಲಿ ಹಿಂದಿನಿಂದ ಜೋರಾಗಿ ಜೋಕಾಲಿ ತಳ್ಳಿದ್ದಾಳೆ. ಹೋಗ್ತಿನಿ ಅಂದವ ಇಷ್ಟು ಬೇಗ ಬಂದೆಯ ಜೈ, ಇಷ್ಟು ಜೋರು ತಳ್ಳಬೇಡ ಜೈ ಎಂದು ಹಿಂದುರುಗಿ ನೋಡಿದಾಗ ಅಲ್ಲಿ  ಯಾರೂ ಇರುವುದಿಲ್ಲ.
icon

(5 / 12)

ದಿಯಾಳಿಗೆ ನಿಜಕ್ಕೂ ಭಯವಾಗುತ್ತದೆ. ಈ ಮನೆಯಲ್ಲಿ ಭೂತ ಪ್ರೇತ ಪಿಶಾಚಿ ಇದೆಯೇ ಎಂದು ಭಯಗೊಳ್ಳುತ್ತಾಳೆ.
icon

(6 / 12)

ಆಗ ನಿಜಕ್ಕೂ ದೆವ್ವದ ವೇಷದಲ್ಲಿ ಮಲ್ಲಿ ಎಂಟ್ರಿ ನೀಡಿದ್ದಾಳೆ. ಮೆಲ್ಲಗೆ ದಿಯಾಳ ಹಿಂದೆ ನಿಂತಿದ್ದಾಳೆ. ಏನು ಜೈ ಹೀಗೆ ಹೋಗಿ ಹಾಗೆ ಬಂದ್ರಿ  ಎಂದು ದಿಯಾ ಹಿಂದೆ ತಿರುಗಿ ನೋಡಿದ್ದಾಳೆ. ಅಷ್ಟೇ...
icon

(7 / 12)

ನಿಜವಾದ ದೆವ್ವದ ರೂಪವನ್ನು ನೋಡಿ ದಿಯಾ ಕಿಟಾರನೆ ಕಿರುಚಿದ್ದಾಳೆ. ಅವಳ ಮುಂದೆ ಮಲ್ಲಿ ದೆವ್ವವಾಗಿ ನಿಂತಿದ್ದಾಳೆ. ಒಟ್ಟಾರೆ ಇಂದಿನ ಸಂಚಿಕೆ ಸಖತ್‌ ಕುತೂಹಲ ಕೆರಳಿಸಿದೆ.
icon

(8 / 12)

ಸೋಷಿಯಲ್‌ ಮೀಡಿಯಾದಲ್ಲಿ ಈ ಪ್ರೊಮೊ ನೀಡಿ ಸೀರಿಯಲ್‌ ವೀಕ್ಷಕರು ಖುಷಿಗೊಂಡಿದ್ದಾರೆ. ಸರಿಯಾಗಿ ಬುದ್ದಿ ಕಲಿಸು ಮಲ್ಲಿ ಎಂದು ಹುರಿದುಂಬಿಸಿದ್ದಾರೆ.
icon

(9 / 12)

"ಮಲ್ಲಿ ನಿನ್ನ ಧೈರ್ಯ ಮೆಚ್ಚಲೇಬೇಕು ಮನೇಲಿ ಯಾರೂ ಇಲ್ದೆ ಇರುವಾಗ ಈ ತರ ಎಲ್ಲಾ ಮಾಡೋದು ಬೇಕಾ???ಏನಾದ್ರೂ ಗೊತ್ತಗಿ ಸಿಕ್ಕಿಬಿದ್ದರೆ ಅಲ್ಲೇ ಇಬ್ಬರೂ ಸೇರಿ ಗೋರಿ ಕಟ್ಟುತ್ತಾರೆ ನಿನಗೆ " ಎಂದು ಕೆಲವರು ಕಾಮೆಂಟ್‌ನಲ್ಲಿ ಎಚ್ಚರಿಸಿದ್ದಾರೆ.
icon

(10 / 12)

ಕಳೆದ ಕೆಲವು ದಿನಗಳ ಹಿಂದೆ ಏಕತಾನತೆಯಿಂದ ಬಳಲುತ್ತಿದ್ದ ಸೀರಿಯಲ್‌ನಲ್ಲಿ ನಿರ್ದೇಶಕರು ದೆವ್ವದ ಆಟ ಆಡಿಸಿ ಕುತೂಹಲ ಕೆರಳಿಸುತ್ತಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಜನರು ಕಾಮೆಂಟ್‌ ಮಾಡುತ್ತಿದ್ದಾರೆ.
icon

(11 / 12)

ಇನ್ನೊಂದೆಡೆ ನಿನ್ನೆ ಭೂಮಿಕಾ ಮತ್ತು ಆನಂದ್‌ ರಾತ್ರಿ ಎಲ್ಲಿಗೆ ಹೋಗಿದ್ರಿ ಎಂದು ಗೌತಮ್‌ ಕೇಳುತ್ತಾರೆ. ಭೂಮಿಕಾ ಗೌತಮ್‌ಗೆ ಪಂಕಜಾಳ ರಹಸ್ಯ ಹೇಳುತ್ತಾರ? ಕಾದು ನೋಡಬೇಕಿದೆ.
icon

(12 / 12)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು