ಅಮೃತಧಾರೆ: ಶಕುಂತಲಾದೇವಿಯನ್ನು ಬ್ಲ್ಯಾಕ್‌ಮೇಲ್ ಮಾಡಿದ ಹಳ್ಳಿಹೆಂಗಸು, ಪಂಕಜಾ ರಹಸ್ಯ ಕೇಳಿಸಿಕೊಂಡ್ರು ಭೂಮಿಕಾ
ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಬಿಡುಗಡೆ ಮಾಡಿದೆ. ಇದರಲ್ಲಿ ಇಂದಿನ ಎಪಿಸೋಡ್‌ನಲ್ಲಿ ಮಹತ್ವದ ಘಟನೆಗಳು ನಡೆಯುವ ಸೂಚನೆ ದೊರಕಿವೆ. ವಿಶೇಷವಾಗಿ ಪಂಕಜಾ ಎಂಬ ಮಹಿಳೆಯ ರಹಸ್ಯ ಭೂಮಿಕಾ ಮತ್ತು ಆನಂದ್‌ಗೆ ತಿಳಿಯುತ್ತದೆ.
(1 / 11)
ಅಮೃತಧಾರೆ ಧಾರಾವಾಹಿಯಲ್ಲಿ ಕೆಲವು ಸಂಚಿಕೆಗಳ ಹಿಂದೆ ಭೂಮಿಕಾಗೆ ಪಂಕಜಾ ಎಂಬವರ ಜನನ ಪ್ರಮಾಣಪತ್ರ ದೊರಕಿತ್ತು. ಪಂಕಜಾ ಮತ್ತು ಶಕುಂತಲಾದೇವಿ ಇಬ್ಬರೂ ಒಬ್ಬರೆಯೇ ಎಂಬ ಸಂದೇಹ ಭೂಮಿಕಾಗೆ ಬಂದಿತ್ತು.
(2 / 11)
ಬಳಿಕ ಭೂಮಿಕಾ ಮತ್ತು ಆನಂದ್ ರಹಸ್ಯ ಕಂಡುಹಿಡಿಯಲು ಬೇರೆ ಹಾದಿ ಹಿಡಿಯುತ್ತಾರೆ. ಪಂಕಜಾಳ ಜನನ ಪ್ರಮಾಣಪತ್ರದಲ್ಲಿದ್ದ ಊರಿನವರನ್ನು ಸಂಪರ್ಕಿಸಲು ಯತ್ನಿಸುತ್ತಾರೆ. ಗ್ರಾಮ ಪಂಚಾಯತಿಯ ಅಕೌಂಟೆಂಟ್ ಒಬ್ಬರು ಸಹಾಯ ಮಾಡುತ್ತಾರೆ.
(3 / 11)
ಊರಲ್ಲಿದ್ದ ಹಳ್ಳಿ ಹೆಂಗಸು "ನನಗೆ ಪಂಕಜಾ ಗೊತ್ತು" ಎನ್ನುತ್ತಾರೆ. ಬಳಿಕ ಗೌತಮ್ ಮನೆಗೆ ಕಾಲ್ ಮಾಡುತ್ತಾಳೆ. ಪಂಕಜಾ ಎನ್ನುವವರು ಇಲ್ಲಾ ಎಂದು ಕಾಲ್ ರಿಸೀವ್ ಮಾಡಿದ ಅಜ್ಜಿ ಹೇಳುತ್ತಾರೆ. ದೊಡ್ಡ ಮನೆಗೆ ಶಕುಂತಲಾ ಹೆಸರಿನಲ್ಲಿ ಪಂಕಜಾ ಸೇರಿಕೊಂಡಿರುವುದು ಗೊತ್ತಾಗುತ್ತದೆ.
(4 / 11)
ಇಂದಿನ ಸಂಚಿಕೆಯಲ್ಲಿ ಹಳ್ಳಿ ಹೆಂಗಸು ಮತ್ತೆ ಕಾಲ್ ಮಾಡಿ ಶಕುಂತಲಾದೇವಿ ಜತೆ ಮಾತನಾಡಿದ್ದಾರೆ. ಅದೇ ಫೋನ್‌ನ ಇನ್ನೊಂದು ರಿಸೀವರ್ ಮೂಲಕ ಭೂಮಿಕಾ ಹಳ್ಳಿ ಹೆಂಗಸಿನ ಮಾತುಗಳನ್ನು ಕೇಳಿಸಿಕೊಂಡಿದ್ದಾರೆ.
(5 / 11)
ನಿನಗೆ ಏನು ಬೇಕು, ಯಾರು ನೀನು ಎಂದು ಶಕುಂತಲಾದೇವಿ ಕೇಳುತ್ತಾರೆ. ನನಗೆ ದುಡ್ಡುಬೇಕು ಎಂದು ಹಳ್ಳಿ ಹೆಂಗಸು ಹೇಳುತ್ತಾಳೆ. "ಹಾಗಾದರೆ ಕನಕಪುರ ರಸ್ತೆಯಲ್ಲಿರುವ ಕಾಫಿ ಶಾಪ್‌ಗೆ ಬಾʼ ಎನ್ನುತ್ತಾರೆ.
(6 / 11)
ಕಾಫಿಶಾಪ್‌ಗೆ ಶಕುಂತಲಾದೇವಿ ಮತ್ತು ಲಕ್ಷ್ಮಿಕಾಂತ್ ಬರುತ್ತಾರೆ. ಆನಂದ್ ಮತ್ತು ಭೂಮಿಕಾ ಕೂಡ ಅಲ್ಲಿಗೆ ಬರುತ್ತಾರೆ.
(7 / 11)
ಆನಂದ್ ಜಾಣತನದಿಂದ ಮೈಕ್ರೋಫೋನ್ ಒಂದನ್ನು ಶಾಪ್‌ನವರ ಸಹಾಯದಿಂದ ಶಕುಂತಲಾ ಟೇಬಲ್ ಪಕ್ಕ ಇಡಿಸುತ್ತಾನೆ. ಅಲ್ಲಿ ಮಾತನಾಡಿದ ವಿಚಾರಗಳು ಮೊಬೈಲ್ ಮೂಲಕ ಆನಂದ್ ಮತ್ತು ಭೂಮಿಕಾಗೆ ಕೇಳಿಸುತ್ತಿದೆ.
(8 / 11)
"ಏನೇ ಪಂಕಜಾ" ಎಂದು ಶಕುಂತಲಾದೇವಿ ಬಳಿ ಹಳ್ಳಿ ಹೆಂಗಸು ಮಾತನಾಡುತ್ತಾಳೆ. ಇದನ್ನು ಕೇಳಿ ಆನಂದ್ ಮತ್ತು ಭೂಮಿಕಾ ಅಚ್ಚರಿಗೊಳ್ಳುತ್ತಾರೆ.
(9 / 11)
ಹಾಗಾದರೆ ಪಂಕಜಾ ಮತ್ತು ಶಕುಂತಲಾದೇವಿ ಇಬ್ಬರು ಒಬ್ಬರೇ ಎಂದಾಯ್ತು. ಯಾವುದೋ ಹಳ್ಳಿಯ ಸಾಮಾನ್ಯ ಮಹಿಳೆಯಾಗಿದ್ದ ಪಂಕಜಾ ಮೋಸದಿಂದ ಗೌತಮ್ ತಂದೆ ಮನೆಗೆ ಎಂಟ್ರಿ ನೀಡಿದ್ದಾಳೆ. ಹಳೆ ಕಥೆ ಮುಂದಿನ ಸಂಚಿಕೆಗಳಲ್ಲಿ ತೆರೆದುಕೊಳ್ಳುವ ಸೂಚನೆ ಇದೆ.
(10 / 11)
ಈ ಪ್ರೊಮೊಗೆ ಕಿರುತೆರೆ ಸೀರಿಯಲ್ ಅಭಿಮಾನಿಗಳು ವೈವಿಧ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. "ಈ ವಾರದ ಕಿಚ್ಚನ ಚಪ್ಪಾಳೆ ನಮ್ ಸಿಐಡಿ ಭೂಮಿಕಾ ಅವ್ರಿಗೆ ಅನ್ನೋರು ಲೈಕ್ ಮಾಡಿ" "ನಮ್ಮ ಭೂಮಿಕಾಗೆ ಇದೇ ಜಾಣ್ಮೆ, ಚಾಣಾಕ್ಷತನ, ಬುದ್ಧಿವಂತಿಕೆ ಸೀರಿಯಲ್ ಮುಗಿಯೋ ತನಕ ಹೀಗೆ ಇರಲಿ ಡೈರೆಕ್ಟರ್" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಇತರ ಗ್ಯಾಲರಿಗಳು