Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರೋಚಕ ಕ್ಷಣ; ಪಾರು ಜತೆ ಮಾತಾಡಿದ ಶಿವು ತಾಯಿ ಶಾರದಾ
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಕುಟುಂಬ ಹಣವನ್ನು ಮಾತ್ರ ಕಳೆದುಕೊಂಡಿಲ್ಲ. ಮನೆಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಆದರೆ ಶಾರದಾ ಬಂದು ಎಲ್ಲರನ್ನೂ ಕಾಪಾಡುತ್ತಾಳೆ.
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಕುಟುಂಬ ಹಣವನ್ನು ಮಾತ್ರ ಕಳೆದುಕೊಂಡಿಲ್ಲ. ಮನೆಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಆದರೆ ಶಾರದಾ ಬಂದು ಎಲ್ಲರನ್ನೂ ಕಾಪಾಡುತ್ತಾಳೆ.
(1 / 8)
ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಆದಾಗಿನಿಂದ ಯಾರಿಗೂ ನೆಮ್ಮದಿ ಇಲ್ಲ. ಎಲ್ಲರೂ ಅಳುತ್ತಿದ್ದಾರೆ.
(Zee Kannada)(2 / 8)
ರಶ್ಮಿಯ ಮದುವೆ ನಿಂತು ಹೋಗುವಂತೆ ಮಾಡಿದ್ದು ಶಿವು ತಾಯಿ ಶಾರದಾ. ಆದರೆ, ಅದರ ಹಿಂದೆ ಒಂದು ಬಲವಾದ ಕಾರಣ ಇದೆ.
(Zee Kannada)(3 / 8)
ಆ ಕಾರಣ ಯಾರಿಗೂ ಗೊತ್ತಿಲ್ಲ. ಮದುವೆ ಮನೆಯಲ್ಲಿದ್ದ ಹಣವನ್ನು ಅವಳು ಕದ್ದು ಮದುವೆ ನಿಲ್ಲಿಸಿದ್ದಳು. ಆದರೆ, ಈಗ ಆ ಹಣವನ್ನು ಹಿಂದಿರುಗಿಸುವ ಪ್ರಯತ್ನ ಮಾಡುತ್ತಿದ್ದಾಳೆ.
(Zee Kannada)(4 / 8)
ಮಾಕಾಳಮ್ಮನೇ ಮಾತಾಡುತ್ತಿದ್ದಾಳೆ ಎನ್ನುವ ರೀತಿಯಲ್ಲಿ ಶಾರದಾ, ಪಾರು ಜತೆ ಮಾತಾಡಿದ್ದಾಳೆ. ಅವಳ ಮಾತನ್ನು ಕೇಳಿ ಪಾರು ಭಯದಲ್ಲಿದ್ದಾಳೆ.
(Zee Kannada)(5 / 8)
ರಾತ್ರಿ ಹೊತ್ತು ಮನೆ ಪಕ್ಕದಲ್ಲಿ ಯಾರೋ ಸುಳಿದಂತಾಗಿ ಪಾರು ಹೊರಗಡೆ ಹೋಗುತ್ತಾಳೆ. ಶಿವು ಮಾತಾಡುತ್ತಿದ್ದ ಮರದ ಬಳಿ ಹೋಗಿ ನಿಲ್ಲುತ್ತಾಳೆ.
(Zee Kannada)(6 / 8)
ಆದರೆ ಪಾರುಗೊಂದು ಆಶ್ಚರ್ಯ ಕಾದಿತ್ತು, ಮರದ ಹಿಂದಿನಿಂದ ಯಾರದೋ ಧ್ವನಿ ಕೇಳಿಸುತ್ತಿತ್ತು. ಆ ಧ್ವನಿ ಯಾರದ್ದೆಂದು ಪಾರುಗೆ ಗೊತ್ತಾಗಲಿಲ್ಲ.
(Zee Kannada)(7 / 8)
ಮದರ ಹಿಂದೆ ನಿಂತ ಶಿವು ತಾಯಿ ಶಾರದೆ ಪಾರುಗೆ ಧೈರ್ಯ ಹೇಳುತ್ತಿದ್ದಳು. “ನೀವ್ಯಾರು?” ಎಂದು ಪಾರು ಪ್ರಶ್ನೆ ಮಾಡಿದ್ದಕ್ಕೆ ನಾನು ಮಾಕಾಳಮ್ಮ ಎಂದು ಮರದ ಹಿಂದೆ ಅಡಗಿನಿಂದ ಶಾರದಾ ಉತ್ತರಿಸಿದ್ದಾಳೆ.
(Zee Kannada)ಇತರ ಗ್ಯಾಲರಿಗಳು