ʻಸಿನಿಮಾ ಚಾನ್ಸ್‌ ಬೇಕಾ? ಹಾಗಾದ್ರೆ ಕಾಂಪ್ರಮೈಸ್‌ ಆಗಿ ಅಂದಿದ್ರುʼ ಇದು ಲಕ್ಷ್ಮೀ ನಿವಾಸ ಸೀರಿಯಲ್‌ ಚಂದನಾ ನಿಜ ಜೀವನದ ಕೆಟ್ಟ ಕ್ಷಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ʻಸಿನಿಮಾ ಚಾನ್ಸ್‌ ಬೇಕಾ? ಹಾಗಾದ್ರೆ ಕಾಂಪ್ರಮೈಸ್‌ ಆಗಿ ಅಂದಿದ್ರುʼ ಇದು ಲಕ್ಷ್ಮೀ ನಿವಾಸ ಸೀರಿಯಲ್‌ ಚಂದನಾ ನಿಜ ಜೀವನದ ಕೆಟ್ಟ ಕ್ಷಣ

ʻಸಿನಿಮಾ ಚಾನ್ಸ್‌ ಬೇಕಾ? ಹಾಗಾದ್ರೆ ಕಾಂಪ್ರಮೈಸ್‌ ಆಗಿ ಅಂದಿದ್ರುʼ ಇದು ಲಕ್ಷ್ಮೀ ನಿವಾಸ ಸೀರಿಯಲ್‌ ಚಂದನಾ ನಿಜ ಜೀವನದ ಕೆಟ್ಟ ಕ್ಷಣ

ಲಕ್ಷ್ಮೀ ನಿವಾಸ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ ನಟಿ ಚಂದನಾ ಅನಂತಕೃಷ್ಣ. ಜಾನು ಪಾತ್ರದ ಮೂಲಕವೇ ಗಮನಸೆಳೆಯುತ್ತಿದ್ದಾರೆ. ಇಂತಿಪ್ಪ, ನಟಿಯ ಬಣ್ಣದ ಲೋಕದಲ್ಲಿ ಆಗಿನ್ನೂ ಗುರುತಿಸಿಕೊಳ್ಳುವ ವೇಳೇ, ಕಾಸ್ಟಿಂಗ್‌ ಕೌಚ್‌ ಸಂದರ್ಭದಲ್ಲಿ ಎದುರಿಸಿದ್ದಾರೆ. ಸಿನಿಮಾ ಚಾನ್ಸ್‌ ಸಲುವಾಗಿ ಕಾಂಪ್ರಮೈಸ್‌ ಆಗುವಂತೆಯೂ ಹೇಳಿದವರಿದ್ದಾರೆ.

ಜೀ ಕನ್ನಡದ ಟಾಪ್‌ ರೇಟಿಂಗ್‌ ಸೀರಿಯಲ್‌ಗಳಲ್ಲಿ ʻಲಕ್ಷ್ಮೀ ನಿವಾಸʼ ಧಾರಾವಾಹಿಯೂ ಒಂದು. ಈ ಸೀರಿಯಲ್‌ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ ನಟಿ ಚಂದನಾ ಅನಂತಕೃಷ್ಣ.
icon

(1 / 10)

(Image Source: Zee5)

ಸೈಕೋ ಪತಿ ಜಯಂತ್‌ನ ಪತ್ನಿ ಜಾನು ಪಾತ್ರದ ಮೂಲಕವೇ ಗಮನಸೆಳೆಯುತ್ತಿದ್ದಾರೆ. ಇಂತಿಪ್ಪ, ನಟಿ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಸಂದರ್ಭದಲ್ಲಿ, ಕಾಸ್ಟಿಂಗ್‌ ಕೌಚ್‌ ಸಂದರ್ಭಗಳನ್ನು ಎದುರಿಸಿದ್ದಾರೆ. ಸಿನಿಮಾ ಚಾನ್ಸ್‌ ಸಲುವಾಗಿ ಕಾಂಪ್ರಮೈಸ್‌ ಆಗುವಂತೆಯೂ ಹೇಳಿದವರಿದ್ದಾರೆ.
icon

(2 / 10)

ಇದೆಲ್ಲದರ ಬಗ್ಗೆ ವೈ5 ಯೂಟ್ಯೂಬ್‌ ಚಾನೆಲ್‌ ಜತೆಗೆ ಮಾತನಾಡಿದ ಚಂದನಾ ಅನಂತಕೃಷ್ಣ, ಈ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಅದು ಅವರ ಮಾತಿನಲ್ಲಿಯೇ ಮುಂದಿದೆ ಓದಿ.
icon

(3 / 10)

“ಆಡಿಷನ್‌ ನೆಪದಲ್ಲಿ ನನಗೂ ಸಾಕಷ್ಟು ಫೋನ್‌ ಕರೆಗಳು ಬಂದಿದೆ. ಒಂದು ದಿನ ಯಾವುದೋ ಸಿನಿಮಾದಲ್ಲಿ ಅವಕಾಶ ಎಂದು ಕಾಲ್‌ ಬಂದಿತ್ತು. ವಿಡಿಯೋ ಕಾಲ್‌ ಮಾಡಿ, ನೀವು ಯಾವ ಥರ ಇದ್ದೀರಿ ನೋಡಬೇಕು ಅಂತಿದ್ರು. ಅದಕ್ಕೂ ಮೊದಲು ನಾನು ಫೋಟೋ ಕಳಿಸಿದ್ದೆ”
icon

(4 / 10)

“ಆದರೆ ಆ ಥರದ ಫೋಟೋ ಬೇಡ. ಸ್ವಲ್ಪ ಮಾಡರ್ನ್‌ ಫೋಟೋ ಬೇಕು ಅಂದ್ರು. ಆಗ ನಾನು ಅಷ್ಟೊಂದು ಮಾಡರ್ನ್‌ ಫೋಟೋ ಶೂಟ್‌ ಮಾಡಿಸಿರಲಿಲ್ಲ. ಇರೋದ್ರಲ್ಲಿಯೇ ಯಾವುದಿತ್ತೋ ಅದನ್ನು ಕಳಿಸಿದ್ದೆ”
icon

(5 / 10)

"ಅದಾದ ಮೇಲೆ ಮೇಕಪ್‌ ಇಲ್ಲದ ಫೋಟೋ ಕಳಿಸಿ ಅಂದ್ರು, ಅದನ್ನೂ ಕಳಿಸಿದೆ. ಅದಾದ ಮೇಲೆ ವಿಡಿಯೋ ಕಾಲ್‌ ಮಾಡಿ ಅಂದ" ಎಂದು ಹಳೇ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
icon

(6 / 10)

“ಇದಷ್ಟೇ ಅಲ್ಲದೆ, ಏಜೆನ್ಸಿವೊಂದರಿಂದ ಮೆಸೆಜ್‌ ಬಂದಿತ್ತು. ದೊಡ್ಡ ಫಾರ್ಮ್‌ ಕೊಟ್ಟಿದ್ದರು. ಅದರಲ್ಲಿ ನಮ್ಮ ವಯಸ್ಸು ಸೇರಿ ಎಲ್ಲ ಮಾಹಿತಿ ಫಿಲ್‌ ಮಾಡಬೇಕಿತ್ತು. ನಾವು ಓಕೆ ಅಂದರೆ, ಪೇಮೆಂಟ್‌ ವಿಚಾರ ಮಾತನಾಡ್ತಿವಿ ಎಂದಿದ್ದರು. ಅದರ ಕೊನೆಯಲ್ಲಿ ಮೂರು ತಿಂಗಳು ಶೂಟಿಂಗ್‌ ಪ್ಲಸ್‌ ಕಾಂಪ್ರಮೈಸ್‌ ಎಂದು ಬರೆದಿತ್ತು.‌ ಆ ಮೆಸೆಜ್‌ ನೋಡಿ ಹಿಂದೂ ಮುಂದೂ ನೋಡದೆ ಬ್ಲಾಕ್‌ ಮಾಡಿದ್ದೆ”
icon

(7 / 10)

"ಇನ್ನೊಮ್ಮೆ ಪ್ರಜ್ವಲ್‌ ದೇವರಾಜ್‌ ಅವರ ಸಿನಿಮಾದಿಂದಲೂ ನನಗೆ ಕಾಲ್‌ ಬಂದಿತ್ತು. ಓಹ್‌ ಪ್ರಜ್ವಲ್‌ ಅವರ ಸಿನಿಮಾ ಅಲ್ವಾ? ಹೋದ್ರಾಯ್ತು ಎಂದು ಆಡಿಷನ್‌ಗೆ ಹೋಗಲು ರೆಡಿಯಾಗಿದ್ದೆ. ಅದಕ್ಕೂ ಮುನ್ನ ಮೇಘನಾ ರಾಜ್‌ ಅವರಿಗೆ ಒಂದು ಮೆಸೆಜ್‌ ಮಾಡಿದೆ. ಈ ಥರ ಕಾಲ್‌ ಬಂದಿದೆ ಹೋಗ್ಲಾ ಅಂತ ಕೇಳಿದೆ"
icon

(8 / 10)

"ತಕ್ಷಣ ಕಾಲ್‌ ಮಾಡಿ, ಯಾವುದೇ ಕಾರಣಕ್ಕೂ ಹೋಗಬೇಡ. ಅದೆಲ್ಲ ಒಂದು ದೊಡ್ಡ ಸ್ಕ್ಯಾಮ್‌. ತುಂಬ ಜನ ಹುಡುಗಿಯರಿಗೆ ಹೀಗೆ ಮಾಡ್ತಾರೆ ಹೋಗಬೇಡ ಅಂದ್ರು. ನಾನು ಆವತ್ತು ಆ ಆಡಿಷನ್‌ಗೆ ಹೋಗಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ ಚಂದನಾ ಅನಂತಕೃಷ್ಣ.‌
icon

(9 / 10)

ಸದ್ಯ ಜೀ ಕನ್ನಡದಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಾನು ಪಾತ್ರದ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ.
icon

(10 / 10)

ಸದ್ಯ ಜೀ ಕನ್ನಡದಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಾನು ಪಾತ್ರದ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು