ʻಕ್ರೂರತನವನ್ನು ವಿಜೃಂಭಿಸಲು 1000 ಎಪಿಸೋಡ್, ಶಿಕ್ಷೆಗೆ ಒಂದೇ ವಾರ!ʼ ʻಸೀತಾ ರಾಮʼ ಧಾರಾವಾಹಿ ಬಗ್ಗೆ ವೀಕ್ಷಕರ ಅಸಮಾಧಾನ
ಜೀ ಕನ್ನಡದಲ್ಲಿ ಕೊನೇ ಸಂಚಿಕೆಗಳ ಪ್ರಸಾರ ಆರಂಭಿಸಿದೆ ʻಸೀತಾ ರಾಮʼ ಧಾರಾವಾಹಿ. ಬಚ್ಚಿಟ್ಟ ಸತ್ಯಗಳ ಅನಾವರಣ ಪ್ರಕ್ರಿಯೆ ಆರಂಭವಾಗಿದೆ. ಮೊದಲಿಗೆ ಸಿಹಿ ಸುಬ್ಬಿ ಅವಳಿ ಜವಳಿ ಎಂಬುದು ಗೊತ್ತಾಗಿದೆ. ಇದರ ಬೆನ್ನಲ್ಲೇ ಇಂದ್ರ- ವಾಣಿ ಸಾವಿನ ಹಿಂದಿನ ರಹಸ್ಯವೂ ಬಯಲಾಗಲಿದೆ. ಆದರೆ, ಎಲ್ಲವನ್ನೂ ಒಂದೇ ವಾರದಲ್ಲಿ ಬಯಲಿಗೆಳೆಯುವ ಪ್ರಕ್ರಿಯೆಗೆ ವೀಕ್ಷಕ ಕೊಂಚ ರೋಸಿಹೋಗಿದ್ದಾನೆ.
(1 / 10)
ಸೀತಾ ರಾಮ ಸೀರಿಯಲ್‌ನಲ್ಲಿ ಇದೀಗ ಇಂದ್ರ- ವಾಣಿ ದಂಪತಿಯ ಪುಣ್ಯ ತಿಥಿ ಕಾರ್ಯ ನೆರವೇರಿಸುತ್ತಿದ್ದಾರೆ. ಅಚ್ಚರಿಯ ರೀತಿಯಲ್ಲಿ ಕರೀಮ್ ಕಾಕಾ ಅವರ ಆಗಮನವಾಗಿದೆ.
(Images\ Zee Kannada)(2 / 10)
ಅಷ್ಟಕ್ಕೂ ಈ ಕರೀಮ್ ಕಾಕಾ, ದೇಸಾಯಿ ಕುಟುಂಬದ ಕಾರ್ ಡ್ರೈವರ್ ಆಗಿದ್ದವರು. ಇದೀಗ ದಿಢೀರ್ ಎಂದು ಸೂರ್ಯಪ್ರಕಾಶ್ ದೇಸಾಯಿ ಮನೆಗೆ ಆಗಮಿಸಿದ್ದಾರೆ.
(3 / 10)
ಇದೇ ವೇಳೆ ಸತ್ಯಜೀತ್ ಬಳಿ ಹೋದ ಕರೀಮ್ ಕಾಕಾ, ಹೇಗಿದ್ದವರು, ಹೇಗಾಗಿದ್ದೀರಿ? ಚಿಕ್ಕೆಜಮಾನ್ರು ಯಾವ ತಪ್ಪನ್ನೂ ಮಾಡಿಲ್ಲ ಎಂದಿದ್ದಾರೆ.
(5 / 10)
ಅಲ್ಲೇ ಇದ್ದ ಭಾರ್ಗವಿ ಮಾತ್ರ ಕರೀಮ್ ಕಾಕಾನ ಮಾತು ಕೇಳಿ, ಒಳಗೊಳಗೆ ಕುದಿಯುತ್ತಿದ್ದಾಳೆ. ಈ ಸಮಯದಲ್ಲಿ ಇವನ್ಯಾಕೆ ಇಲ್ಲಿಗೆ ಬಂದ ಎಂದು ಭಾರ್ಗವಿ ಕಣ್ಣು ಕೆಂಪಗಾಗಿಸಿದ್ದಾಳೆ.
(6 / 10)
ಸತ್ಯ ಚಿಕ್ಕಪ್ಪ ಅತ್ತೆ ಮಾವನ್ನ ಕೊಲೆ ಮಾಡಿಲ್ಲ ಅಂದ್ರೆ, ಬೇರೆ ಯಾರೋ ಮಾಡಿರ್ಬೇಕಲ್ವಾ? ಅನ್ನೋ ಅನುಮಾನ ಸೀತಾಗೂ ಬಂದಿದೆ.
(7 / 10)
ಸೀತಾ ಹೇಳಿದ ಮಾತಿಂದ ರಾಮ್ ತಲೆಯಲ್ಲಿಯೂ ಹಲವು ವಿಚಾರಗಳು ಓಡುತ್ತಿವೆ. ಇದೆಲ್ಲದರ ಹಿಂದೆ ಬೇರೆ ಯಾರೋ ಇದ್ದಾರೆ ಅನ್ನೋದು ರಾಮ್‌ಗೂ ಅನಿಸಿದೆ.
(8 / 10)
ಅಷ್ಟಕ್ಕೂ ಕೊಲೆಯಾದ ಸ್ಥಳಕ್ಕೆ ಭಾರ್ಗವಿ ಚಿಕ್ಕಿ ಯಾಕೆ ಬಂದ್ರು. ಕೊಲೆ ಆರೋಪವನ್ನು ಸತ್ಯ ಚಿಕ್ಕಪ್ಪನ ಮೇಲೆ ಯಾಕೆ ಹೊರಸಿದ್ರು. ಈ ಕೊಲೆಗೂ ಭಾರ್ಗವಿ ಚಿಕ್ಕಿಗೂ ಸಂಬಂಧ ಇದೆ ಅಂತಾನಾ? ಎಂದು ಅಶೋಕ ಮತ್ತು ಪ್ರಿಯಾ ಮಾತನಾಡಿಕೊಳ್ಳುತ್ತಿದ್ದಾರೆ.
(9 / 10)
ಸೀತಾ ರಾಮ ಧಾರಾವಾಹಿಯ ಕೊನೇ ಸಂಚಿಕೆಗಳ ಪ್ರಸಾರ ಆರಂಭವಾಗುತ್ತಿದ್ದಂತೆ, ವೀಕ್ಷಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ. ಚೆನ್ನಾಗಿರೋ ಸೀರಿಯಲ್‌ಅನ್ನು ಇಷ್ಟು ಬೇಗ ಮುಗಿಸಬಾರದಿತ್ತು ಎನ್ನುತ್ತಿದ್ದಾರೆ.
ಇತರ ಗ್ಯಾಲರಿಗಳು