ಕನಸು ನನಸಾಗಿಸಿಕೊಂಡ ʻಅಣ್ಣಯ್ಯʼ ಸೀರಿಯಲ್ ನಟಿ; ಹೊಸ ಮನೆಯ ಗೃಹ ಪ್ರವೇಶದಲ್ಲಿ ನಿಶಾ ರವಿಕೃಷ್ಣನ್
ಜೀ ಕನ್ನಡದಲ್ಲಿ ಸದ್ಯ ಪ್ರಸಾರವಾಗುತ್ತಿರುವ ʻಅಣ್ಣಯ್ಯʼ ಸೀರಿಯಲ್ ಮೂಲಕ ಕರುನಾಡಿನ ಮನೆಮನಗಳಿಗೆ ಹತ್ತಿರವಾದವರು ನಟಿ ನಿಶಾ ರವಿಕೃಷ್ಣನ್. ಇದೀಗ ಇದೇ ನಟಿ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಮನೆ ಕಟ್ಟಿ ಅದರ ಗೃಹ ಪ್ರವೇಶವನ್ನೂ ನೆರವೇರಿಸಿದ್ದಾರೆ. ಹೀಗಿದೆ ನೋಡಿ ಆ ಸಂಭ್ರಮದ ಫೋಟೋಗಳು.
(1 / 9)
ಕನ್ನಡದ ʻಅಣ್ಣಯ್ಯʼ ಸೀರಿಯಲ್ ಜತೆಗೆ ತೆಲುಗಿನ ʻಅಮ್ಮಾಯಿಗಾರುʼ ಧಾರಾವಾಹಿಯಲ್ಲಿಯೂ ಬಿಜಿಯಾಗಿದ್ದಾರೆ. ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ ನಟಿ ನಿಶಾ ರವಿಕೃಷ್ಣನ್.
(3 / 9)
ಇದೀಗ ಇದೇ ನಟಿ ಬಹುದಿನಗಳ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅಂದರೆ, ಮನೆ ಕಟ್ಟಿ ಅದರ ಗೃಹಪ್ರವೇಶ ನೆರವೇರಿಸಿಕೊಂಡಿದ್ದಾರೆ.
(4 / 9)
ಬೆಂಗಳೂರಿನಲ್ಲಿ ಚೆಂದದ ಮನೆ ಕಟ್ಟಿ, ಇತ್ತೀಚೆಗಷ್ಟೇ ಅದರ ಗೃಹಪ್ರವೇಶ ಮಾಡಿದ್ದಾರೆ. ಆ ಗ್ರಹಪ್ರವೇಶದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿಯೂ ಹರಿದಾಡುತ್ತಿವೆ.
(5 / 9)
ನಿಶಾ ರವಿಕೃಷ್ಣನ್ ಬೆಂಗಳೂರಿನಲ್ಲಿಯೇ ಮನೆ ಕಟ್ಟಿದ್ದಾರೆ. ಆದರೆ, ಅದ್ಯಾವ ಏರಿಯಾ, ಎಲ್ಲಿ ಎಂಬಿತ್ಯಾದಿ ವಿವರ ಸದ್ಯಕ್ಕೆ ಲಭ್ಯವಿಲ್ಲ.
(6 / 9)
2018ರಲ್ಲಿ ಸರ್ವಮಂಗಳ ಮಾಂಗಲ್ಯೆ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಕಾಲಿರಿಸಿದ ನಿಶಾ, ಅದಾದ ಮೇಲೆ ಗಟ್ಟಿಮೇಳ ಮೂಲಕ ಹೆಚ್ಚು ಮುನ್ನೆಲೆಗೆ ಬಂದರು.
ಇತರ ಗ್ಯಾಲರಿಗಳು