ʻಸೀತಾ ರಾಮʼ ಸೀರಿಯಲ್ ಮುಗೀತು, ʻಕರ್ಣʼ, ʻಶ್ರೀ ರಾಘವೇಂದ್ರ ಮಹಾತ್ಮೆʼ ಬರೋದ್ಯಾವಾಗ, ಪ್ರಸಾರದ ಸಮಯ ಯಾವುದು?
ಜೀ ಕನ್ನಡದಲ್ಲಿನ ಮುಂಬರುವ ಒಂದಷ್ಟು ಶೋ ಮತ್ತು ಸೀರಿಯಲ್‌ಗಳ ಮೇಲೆ ಕಿರುತೆರೆ ವೀಕ್ಷಕರು ಕುತೂಹಲದ ಕಣ್ಣಿಟ್ಟಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ʻಶ್ರೀ ರಾಘವೇಂದ್ರ ಮಹಾತ್ಮೆʼ ಸೀರಿಯಲ್ ಘೋಷಣೆ ಆದರೂ, ಇನ್ನೂ ಅಧಿಕೃತ ದಿನಾಂಕ ಹೊರಬಿದ್ದಿಲ್ಲ. ʻಕರ್ಣʼನ ಆಗಮನದ ಬಗ್ಗೆಯೂ ಸುಳಿವಿಲ್ಲ.
(1 / 8)
ಜೀ ಕನ್ನಡದಲ್ಲಿ ಎರಡು ಸೀರಿಯಲ್‌ಗಳು, ಒಂದು ರಿಯಾಲಿಟಿ ಶೋ ಆಗಮನದ ಹೊಸ್ತಿಲಿಗೆ ಬಂದು ನಿಂತಿವೆ. ಆದರೆ, ಅವುಗಳ ಅಧಿಕೃತ ಪ್ರಸಾರದ ದಿನಾಂಕ ಮಾತ್ರ ಈ ವರೆಗೂ ಘೋಷಣೆ ಆಗಿಲ್ಲ.
(Zee Kannada)(2 / 8)
ʻಶ್ರೀರಸ್ತು ಶುಭಮಸ್ತುʼ, ʻಸೀತಾ ರಾಮʼ ಧಾರಾವಾಹಿಗಳ ಪೈಕಿ ಒಂದು ಸೀರಿಯಲ್ ಮುಗಿಯಬಹುದು ಎನ್ನಲಾಗಿತ್ತು. ಅದರಂತೆ, ಯಾರೂ ಊಹಿಸದ ರೀತಿಯಲ್ಲಿ ʻಸೀತಾ ರಾಮʼ ಧಾರಾವಾಹಿಯೇ ತನ್ನ ಆಟ ಮುಗಿಸಿದೆ. ಈಗಾಗಲೇ ಅಂತಿಮ ಸಂಚಿಕೆಗಳ ಪ್ರಸಾರ ಶುರುವಾಗಿದೆ.
(3 / 8)
ಇತ್ತ ಹೊಸ ಸೀರಿಯಲ್ ʻಕರ್ಣʼನ ಆಗಮನ ಯಾವಾಗ? ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮೇ ಕೊನೇ ವಾರದಲ್ಲಿ ʻಕರ್ಣʼ ತನ್ನ ಪ್ರಸಾರ ಆರಂಭಿಸಬೇಕಿತ್ತು. ಆದರೆ, ಅದ್ಯಾಕೋ ಇನ್ನೂ ಪ್ರಸಾರ ದಿನಾಂಕವನ್ನು ರಿವೀಲ್ ಮಾಡಿಲ್ಲ.
(4 / 8)
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಸರಿಗಮಪ ಫಿನಾಲೆ ಭಾನುವಾರಕ್ಕೆ ಮುಗಿದಿರಬೇಕಿತ್ತು. ಮಳೆಯಿಂದಾಗಿ ಅದೂ ಕೂಡ ಒಂದು ವಾರ ಪೋಸ್ಟ್‌ಪೋನ್ ಆಗಿದೆ. ಅದು ಮುಗಿದ ಬಳಿಕವೇ ಕರ್ಣನ ಆಗಮನ ಎನ್ನಲಾಗಿತ್ತು. ಇದೀಗ ಕೆಲ ಮೂಲಗಳ ಪ್ರಕಾರ, ಜೂನ್ ಎರಡನೇ ವಾರ ʻಕರ್ಣʼ ಧಾರಾವಾಹಿ ಶುರುವಾಗುವ ಸಾಧ್ಯತೆಯಿದೆ.
(5 / 8)
ಇತ್ತ ʻಶ್ರೀ ರಾಘವೇಂದ್ರ ಮಹಾತ್ಮೆʼ ಸೀರಿಯಲ್ ಪ್ರಸಾರ ಯಾವಾಗ ಎಂಬುದಕ್ಕೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕರ್ಣ ಶುರುವಾದ ಒಂದು ವಾರದ ಬಳಿಕ ʻಶ್ರೀ ರಾಘವೇಂದ್ರ ಮಹಾತ್ಮೆʼ ಶುರುವಾಗಲಿದೆ ಎನ್ನಲಾಗುತ್ತಿದೆ. ಅಂದರೆ ಜೂನ್ 16ಕ್ಕೆ ಬರುವ ಸಾಧ್ಯತೆ ಇದೆ.
(6 / 8)
ರಿಯಾಲಿಟಿ ಶೋ ವಿಚಾರಕ್ಕೆ ಬಂದರೆ ʻಮಹಾನಟಿ ಸೀಸನ್ 2ʼ ಧಾರಾವಾಹಿಗೂ ದಿನಾಂಕ ಫಿಕ್ಸ್ ಆಗಿಲ್ಲ. ಸರಿಗಮಪ ಶೋ ಮುಗಿದ ಬಳಿಕ, ನಂತರದ ವಾರವೇ ಶುರುವಾಗಲಿದೆ.
(7 / 8)
ಹಾಗಾದರೆ ʻಕರ್ಣʼ ಮತ್ತು ʻಶ್ರೀ ರಾಘವೇಂದ್ರ ಮಹಾತ್ಮೆʼ ಸೀರಿಯಲ್‌ಗಳ ಪ್ರಸಾರ ಸಮಯ ಯಾವುದು? ಅದಕ್ಕೂ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ಎರಡೂ ಸೀರಿಯಲ್‌ಗಳು ಈಗಾಗಲೇ ಹೈಪ್ ಸೃಷ್ಟಿಸಿದ್ದರಿಂದ ಪ್ರೈಮ್ ಸ್ಲಾಟ್‌ಗೆ ಬರಲಿವೆ.
ಇತರ ಗ್ಯಾಲರಿಗಳು