ಅಯ್ಯನ ಮನೆ ಕನ್ನಡ ವೆಬ್ ಸರಣಿಯಲ್ಲಿ ಕಾಂತಾರ ಟೆಕ್ನಿಕ್; ಮಾನಸಿ ಸುಧೀರ್, ಸಪ್ತಮಿ ಗೌಡ ಈಗ ಫೇಮಸ್ ಅಲ್ವೇ?
- ಕನ್ನಡ ಒರಿಜಿನಲ್ ವೆಬ್ ಸರಣಿ "ಅಯ್ಯನ ಮನೆ" ಏಪ್ರಿಲ್ 25ರಂದು ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ವೆಬ್ ಸರಣಿಯು ಜನಪ್ರಿಯ ಸೀರಿಯಲ್ ಕಲಾವಿದರನ್ನು ತನ್ನ ತಾರಾಗಣಕ್ಕೆ ಸೇರಿಸಿಕೊಡಿಲ್ಲ. ಕಾಂತಾರ ಸಿನಿಮಾದಲ್ಲಿ ಮಾನಸಿ ಸುಧೀರ್, ಸಪ್ತಮಿ ಗೌಡ ಮುಂತಾದ ಹೊಸ ಮುಖಗಳನ್ನು ಪರಿಚಯಿಸಲಾಗಿತ್ತು. ಇದೇ ಟೆಕ್ನಿಕ್ ಅನ್ನು ಇಲ್ಲೂ ಬಳಸಲಾಗಿದೆಯಂತೆ.
- ಕನ್ನಡ ಒರಿಜಿನಲ್ ವೆಬ್ ಸರಣಿ "ಅಯ್ಯನ ಮನೆ" ಏಪ್ರಿಲ್ 25ರಂದು ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ವೆಬ್ ಸರಣಿಯು ಜನಪ್ರಿಯ ಸೀರಿಯಲ್ ಕಲಾವಿದರನ್ನು ತನ್ನ ತಾರಾಗಣಕ್ಕೆ ಸೇರಿಸಿಕೊಡಿಲ್ಲ. ಕಾಂತಾರ ಸಿನಿಮಾದಲ್ಲಿ ಮಾನಸಿ ಸುಧೀರ್, ಸಪ್ತಮಿ ಗೌಡ ಮುಂತಾದ ಹೊಸ ಮುಖಗಳನ್ನು ಪರಿಚಯಿಸಲಾಗಿತ್ತು. ಇದೇ ಟೆಕ್ನಿಕ್ ಅನ್ನು ಇಲ್ಲೂ ಬಳಸಲಾಗಿದೆಯಂತೆ.
(1 / 16)
ಇದೇ ಏಪ್ರಿಲ್ 25ರಿಂದ ಅಯ್ಯನ ಮನೆ ಎಂಬ ಮಿನಿ ವೆಬ್‌ಸರಣಿ ಬಿಡುಗಡೆಯಾಗಲಿದೆ. ಆರಂಭದಲ್ಲಿ ಇದು ಏಳು ಎಪಿಸೋಡ್‌ನ ವೆಬ್ ಸರಣಿ ಎನ್ನಲಾಗಿತ್ತು. ಇತ್ತೀಚೆಗೆ ಶ್ರುತಿ ನಾಯ್ಡು ನೀಡಿದ ಮಾಹಿತಿ ಪ್ರಕಾರ ಇದನ್ನು ಆರು ಎಪಿಸೋಡ್‌ಗಳಿಗೆ ಇಳಿಸಲಾಗಿದೆ. ಈ ವೆಬ್‌ಸರಣಿಗೆ ಶ್ರುತಿ ನಾಯ್ಡು ಬಂಡವಾಳ ಹೂಡಿದ್ದಾರೆ. ಈ ವೆಬ್‌ಸರಣಿಯಲ್ಲಿ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಮುಂತಾದವರು ನಟಿಸಿದ್ದಾರೆ. ಇದು ಕ್ರೈಮ್ ಥ್ರಿಲ್ಲರ್ ಜಾನರ್‌ನ ವೆಬ್‌ಸರಣಿಯಾಗಿದೆ. ಭಯ, ನಂಬಿಕೆ, ವಿಧಿ ನಡುವಿನ ಘರ್ಷಣೆಯ ಕಥೆಯನ್ನು ಅಯ್ಯನ ಮನೆ ವೆಬ್ ಸರಣಿ ಹೊಂದಿದೆಯಂತೆ.
(2 / 16)
ಒಟಿಟಿಗಳಲ್ಲಿ ಕನ್ನಡ ಒರಿಜಿನಲ್ ವೆಬ್‌ಸರಣಿಗಳು ಬರುತ್ತಿಲ್ಲ ಎಂಬ ದೂರು ಇದೆ. ಕನ್ನಡದಲ್ಲಿ ವೆಬ್ ಸರಣಿ ಮಾಡಿದರೆ ಅದನ್ನು ಒಟಿಟಿಗಳು ಖರೀದಿಸುತ್ತಿಲ್ಲ ಎಂಬ ಬೇಸರವೂ ಇದೆ. ಇದೇ ಕಾರಣದಿಂದ ರಕ್ಷಿತ್ ಶೆಟ್ಟಿ ತನ್ನ ಏಕಂ ವೆಬ್ ಸರಣಿಯನ್ನು ಸ್ವಂತ ವೆಬ್‌ಸೈಟ್ ನಿರ್ಮಿಸಿ ಜನರ ಜತೆ ಹಂಚಿಕೊಂಡಿದ್ದರು. ಕನ್ನಡ ವೆಬ್ ಸರಣಿ ವಿಭಾಗದಲ್ಲಿ ಇದೀಗ ಬದಲಾವಣೆಯ ಗಾಳಿ ಬೀಸುವಂತೆ ಇದೆ. ಏಕೆಂದರೆ, ಜೀ5ನ ಮೊದಲ ಕನ್ನಡ ವೆಬ್ ಸರಣಿ ಅಯ್ಯನ ಮನೆ ಏಪ್ರಿಲ್ 25ರಂದು ಸ್ಟ್ರೀಮಿಂಗ್ ಆಗಲಿದೆ.
(ಚಿತ್ರಕೃಪೆ: ಅಯ್ಯನ ಮನೆ ಟ್ರೇಲರ್‌ನಿಂದ )(3 / 16)
ರಮೇಶ್ ಇಂದಿರಾ ನಿರ್ದೇಶನದ ಈ ವೆಬ್ ಸರಣಿಯಲ್ಲಿ ಜನಪ್ರಿಯ ಕನ್ನಡ ಸೀರಿಯಲ್ ನಟಿ ಅಥವಾ ನಟರಿಗೆ ಅವಕಾಶ ನೀಡಿಲ್ಲ (ಹೀರೋ ಹೊರತುಪಡಿಸಿ) ಯಾಕೆ ಎನ್ನುವುದಕ್ಕೆ ನಿರ್ಮಾಪಕಿ ಶ್ರುತಿ ನಾಯ್ಡು ಕಾರಣ ನೀಡಿದ್ದಾರೆ. ಈ ವೆಬ್ ಸರಣಿಯಲ್ಲಿ ಒಲವಿನ ನಿಲ್ದಾಣ ಹೀರೋ ಅಕ್ಷಯ್ ನಾಯಕ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
(ಚಿತ್ರಕೃಪೆ: ಅಯ್ಯನ ಮನೆ ಟ್ರೇಲರ್‌ನಿಂದ )(4 / 16)
ಪ್ರೀಮಿಯರ್ ಪದ್ಮಿನಿ ಸಿನಿಮಾದ ಮೂಲಕ ಖ್ಯಾತಿ ಪಡೆದಿರುವ ಕನ್ನಡದ ಜನಪ್ರಿಯ ಸೀರಿಯಲ್ ನಿರ್ಮಾಪಕಿ ಶ್ರುತಿ ನಾಯ್ಡು ಅವರು ಜೀ5ನ ಮೊದಲ ಕನ್ನಡ ವೆಬ್ ಸರಣಿ ನಿರ್ಮಾಣ ಮಾಡುತ್ತಿದ್ದಾರೆ.
(ಚಿತ್ರಕೃಪೆ: ಅಯ್ಯನ ಮನೆ ಟ್ರೇಲರ್‌ನಿಂದ )(5 / 16)
ಈಗಾಗಲೇ ವಿವಿಧ ಧಾರಾವಾಹಿಗಳ ಮೂಲಕ ಖ್ಯಾತಿ ಪಡೆದಿರುವ ಕಲಾವಿದರಿಗೆ ಈ ವೆಬ್ ಸರಣಿಯಲ್ಲಿ ಅವಕಾಶ ನೀಡಿಲ್ಲ. ಈ ರೀತಿ ಮಾಡಿದರೆ ವೀಕ್ಷಕರಿಗೆ ಇದು ಅದೇ ಧಾರಾವಾಹಿಗಳ ಫೀಲ್ ತರಬಹುದು ಎಂದು ಅವರು ಹೇಳಿದ್ದಾರೆ.
(ಚಿತ್ರಕೃಪೆ: ಅಯ್ಯನ ಮನೆ ಟ್ರೇಲರ್‌ನಿಂದ )(6 / 16)
ಈ ವೆಬ್ ಸರಣಿಯ ಪ್ರಮುಖ ಪಾತ್ರಗಳಿಗೆ ಈಗಾಗಲೇ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದವರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ, ಶ್ರುತಿ ನಾಯ್ಡು ಹೀಗೆ ಮಾಡಿಲ್ಲ.
(ಚಿತ್ರಕೃಪೆ: ಅಯ್ಯನ ಮನೆ ಟ್ರೇಲರ್‌ನಿಂದ )(7 / 16)
"ಈ ವೆಬ್ ಸರಣಿಗೆ ನನ್ನ ಒಲವಿನ ನಿಲ್ದಾಣ ಸೀರಿಯಲ್‌ನ ಅಕ್ಷಯ್ ನಾಯಕ್ ಅವರನ್ನು ಆಯ್ಕೆ ಮಾಡಿದ್ದೇವೆ. ಉಳಿದಂತೆ ನಾನು ಮತ್ತು ನಿರ್ದೇಶಕ ರಮೇಶ್ ಇಂದಿರಾ ಅವರು ಸಿನಿಮಾ ಕಲಾವಿದರನ್ನು ಆಯ್ಕೆ ಮಾಡಲು ನಿರ್ಧರಿಸಿದೆವು. ಟಿವಿ ಆಕ್ಟರ್‌ಗಳನ್ನು ಸೇರಿಸಿಕೊಳ್ಳುವುದು ಕಷ್ಟವಿರಲಿಲ್ಲ. ಏಕೆಂದರೆ, ಸೀರಿಯಲ್ ನಟಿ ನಟರಲ್ಲಿ ಅದ್ಭುತ ಪ್ರತಿಭಾನ್ವಿತರಿದ್ದಾರೆ..." ಎಂದು ಅವರು ಹೇಳಿದ್ದಾರೆ.
(ಚಿತ್ರಕೃಪೆ: ಅಯ್ಯನ ಮನೆ ಟ್ರೇಲರ್‌ನಿಂದ )(8 / 16)
"...ಆದರೆ, ಹೆಚ್ಚು ಚಿರಪರಿಚಿತರಾದ ಆ ಮುಖಗಳನ್ನು ವೆಬ್ ಸರಣಿಗೆ ನೀಡಿದರೆ ವೆಬ್ ಸರಣಿಯ ಫ್ರೆಶ್‌ನೆಸ್ ಹೊರಟುಹೋಗಬಹುದು. ಅಂದಹಾಗೆ, ಪಾತ್ರವರ್ಗದ ಆಯ್ಕೆ ನಿರ್ದೇಶಕರ ಕೆಲಸ. ಅವರಿಗೆ ನಿರ್ದಿಷ್ಟ ಪಾತ್ರಗಳಿಗೆ ಯಾವ ರೀತಿಯ ಕಲಾವಿದರು ಬೇಕು ಎಂಬ ಐಡಿಯಾ ಇರುತ್ತದೆ. ಉದಾಹರಣೆಗೆ ಮಾನಸಿ ಸುಧೀರ್ ನಿರ್ವಹಿಸುವ ಅತ್ತೆ ಪಾತ್ರಕ್ಕೆ ಯಾರನ್ನೂ ಬೇಕಾದರೂ ಆಯ್ಕೆ ಮಾಡಬಹುದಿತ್ತು. ಆದರೆ, ನಮ್ಮ ಪ್ರಾಡಕ್ಟ್‌ಗೆ ಮಾನಸಿ ಸುಧೀರ್ ನೀಡುವ ಮೌಲ್ಯವು ತುಂಬಾ ಪ್ರಮುಖವಾದದ್ದು" ಎಂದು ಶ್ರುತಿ ನಾಯ್ಡು ಹೇಳಿದ್ದಾರೆ.
(9 / 16)
ಅಯ್ಯನ ಮನೆ ವೆಬ್ ಸರಣಿಯಲ್ಲಿ ಖುಷಿ ರವಿ, ಅರ್ಚನಾ ಕೊಟ್ಟಿಗೆ, ಹಿತಾ ಚಂದ್ರಶೇಖರ್, ಅನಿರುದ್ಧ್ ಆಚಾರ್ಯ, ವಿಜಯ್ ಶೋಭರಾಜ್, ರಮೇಶ್ ಇಂದಿರಾ ಮುಂತಾದ ಪ್ರತಿಭಾನ್ವಿತರು ನಟಿಸಿದ್ದಾರೆ.
(10 / 16)
ಅಯ್ಯನ ಮನೆ ವೆಬ್ ಸರಣಿಯಲ್ಲಿ ಖುಷಿ ರವಿ, ಅರ್ಚನಾ ಕೊಟ್ಟಿಗೆ, ಹಿತಾ ಚಂದ್ರಶೇಖರ್, ಅನಿರುದ್ಧ್ ಆಚಾರ್ಯ, ವಿಜಯ್ ಶೋಭರಾಜ್, ರಮೇಶ್ ಇಂದಿರಾ ಮುಂತಾದ ಪ್ರತಿಭಾನ್ವಿತರು ನಟಿಸಿದ್ದಾರೆ. "ಈ ವೆಬ್ ಸರಣಿ ನೋಡುವಾಗ ನೀವು ಪಾತ್ರವರ್ಗವನ್ನು ಮಾತ್ರವೇ ನೋಡುವುದಲ್ಲ. ಇದರ ಕಥೆ ಮತ್ತು ಚಿತ್ರಕಥೆ ತುಂಬಾ ಆಕರ್ಷಕವಾಗಿದೆ. ನಮ್ಮ ವೆಬ್‌ಸರಣಿಯ ಪ್ರತಿಪಾತ್ರಕ್ಕೂ ತಕ್ಕುದಾದ ಕಲಾವಿದರು ನಟಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.
(11 / 16)
ಶ್ರುತಿ ನಾಯ್ಡು ಅವರು ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾದ ಉದಾಹರಣೆಯನ್ನೇ ನೀಡಿದ್ದಾರೆ. ಕಾಂತಾರ ಸಿನಿಮಾದಲ್ಲಿ ಕೆಲವು ಪಾತ್ರಗಳು ಮಾತ್ರ ಹೆಚ್ಚು ಜನರಿಗೆ ಗೊತ್ತಿರುವ ನಟರಾಗಿದ್ದರು. ಆದರೆ, ಈ ಸಿನಿಮಾದಲ್ಲಿ ಹೆಚ್ಚು ಪರಿಚಿತರಲ್ಲದ ನಟರು, ನಟಿಯರು, ಹೊಸಬರು ಇದ್ದರು.
(12 / 16)
"ಅಲ್ಲಿಯವರೆಗೆ ಮಾನಸಿ ಸುಧೀರ್ ಎಷ್ಟು ಜನರಿಗೆ ಗೊತ್ತಿದ್ದರು. ಸಪ್ತಮಿ ಗೌಡರ ಬಗ್ಗೆ ಎಷ್ಟು ಜನರಿಗೆ ಗೊತ್ತಿತ್ತು. ಪ್ರೇಕ್ಷಕರು ಕಥೆ, ಸಂಭಾಷಣೆ, ಮೇಕಿಂಗ್‌ನಲ್ಲಿ ಎಂಗೇಜ್ ಆಗಬೇಕೆಂದು ರಿಷಬ್ ಶೆಟ್ಟಿ ಖಚಿತವಾಗಿ ನಿರ್ಧರಿಸಿದ್ದರು. ಅಯ್ಯನ ಮನೆ ವೆಬ್ ಸರಣಿಯೂ ಇದೇ ರೀತಿ ತಾರಾಗಣವನ್ನು ಆಯ್ಕೆ ಮಾಡಿಕೊಂಡಿದೆ" ಎಂದು ಶ್ರುತಿ ನಾಯ್ಡು ವಿವರಿಸಿದ್ದಾರೆ.
(14 / 16)
ಅಯ್ಯನ ಮನೆ ಕಥೆ: ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಅಯ್ಯನ ಮನೆಯ ಕಥೆಯ ಸಾರಾಂಶ ಹೀಗಿದೆ. ಇದು ಚಿಕ್ಕಮಂಗಳೂರಿನ ಅಯ್ಯನ ಮನೆ ಕುಟುಂಬದಲ್ಲಿ ನಡೆಯುವ ಕಾಲ್ಪನಿಕ ಕಥೆಯಾಗಿದೆ. ಇದರಲ್ಲಿ ಹಾರರ್ ಅಂಶಗಳು ಸಾಕಷ್ಟು ಇವೆ. ಹಳೆಯ ಕಟ್ಟಡ, ಯಾವುದೇ ಮಹಿಳೆ ಬದುಕಿ ಉಳಿಯದ ಸ್ಥಳ, ನಿಗೂಢ ಸಾವುಗಳ ಸುತ್ತ ಈ ಸರಣಿ ಸುತ್ತುತ್ತದೆ. ಈ ಸಿನಿಮಾದಲ್ಲಿ ಜಾಜಿ ಎಂಬವಳ ಕಥೆ ಇದೆ.
(15 / 16)
ಈಕೆ ಮದುವೆಯಾದ ಮನೆಯಲ್ಲಿ ಮೂವರು ಸೊಸೆಯರು ನಿಗೂಢವಾಗಿ ಮೃತಪಟ್ಟಿದ್ದಾರೆ. ಇವರ ಸಾವಿನ ರಹಸ್ಯ ತಿಳಿಯಲು ಈಕೆ ಮುಂದಾಗುತ್ತಾರೆ. ಈಕೆಗೆ ಈ ಸತ್ಯ ತಿಳಿಯಲು ಸಮಯ ತೀರ ಕಡಿಮೆ ಇದೆ. ಏಕೆಂದರೆ, ಆಕೆಗೂ ಸಾವು ಬರಬಹುದು. ಸಾವಿಗೆ ದೇವತೆ ಕಾರಣವೇ? ಅಥವಾ ಈ ಸಾವುಗಳ ಹಿಂದೆ ಬೇರೆ ಏನಾದರೂ ಕಾರಣವಿದೆಯೇ? ತಿಳಿಯಲು ಏಪ್ರಿ;ಲ್ 25ರ ಬಳಿಕ ವೆಬ್‌ಸರಣಿ ನೋಡಬಹುದು.
ಇತರ ಗ್ಯಾಲರಿಗಳು