PAK vs ZIM: ಕೊನೆಯ ಟಿ20ಐನಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಸಾಧಿಸಿದ ಜಿಂಬಾಬ್ವೆ ತಂಡ
- Zimbabwe beat Pakistan: ಬುಲವಾಯೋದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಅಂತಿಮ ಹಾಗೂ 3ನೇ ಟಿ20ಐ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಜಿಂಬಾಬ್ವೆ ಎರಡು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
- Zimbabwe beat Pakistan: ಬುಲವಾಯೋದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಅಂತಿಮ ಹಾಗೂ 3ನೇ ಟಿ20ಐ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಜಿಂಬಾಬ್ವೆ ಎರಡು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
(1 / 5)
ಜಿಂಬಾಬ್ವೆ ವಿರುದ್ಧ ಅಂತಿಮ ಹಾಗೂ ಮೂರನೇ ಟಿ20ಐ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹೀನಾಯ ಸೋಲಿಗೆ ಶರಣಾಗಿದೆ. ಆತಿಥೇಯ ಜಿಂಬಾಬ್ವೆ 2 ವಿಕೆಟ್ಗಳ ಅಂತರದಿಂದ ಅಮೋಘ ಗೆಲುವು ಸಾಧಿಸಿತು. ಅಂತಿಮ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದರೂ ಸರಣಿಯನ್ನು 2-1ರ ಅಂತರದಲ್ಲಿ ಸರಣಿಯನ್ನು ಕೈ ಚೆಲ್ಲಿತು. ಸರಣಿಗೆ ಮುತ್ತಿಕ್ಕದರೂ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ತೀವ್ರ ಮುಖಭಂಗಕ್ಕೆ ಒಳಗಾಗಿದೆ.
(AP)(2 / 5)
ಬುಲವಾಯೋದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ಅವರ ಉತ್ತಮ ಪ್ರದರ್ಶನ ನೀಡದೇ ಇದ್ದಿದ್ದರೆ ಜಿಂಬಾಬ್ವೆ ಗೆಲುವು ಅಸಾಧ್ಯವಾಗುತ್ತಿತ್ತು. ಪಾಕಿಸ್ತಾನ ತಂಡದ ಬೌಲರ್ಗಳು ಜಿಂಬಾಬ್ವೆ ಮೇಲೆ ಒತ್ತಡ ಹೇರುತ್ತಿದ್ದರು. ಬೆನಟ್ ಅವರು 35 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 43 ರನ್ಗಳ ಕಾಣಿಕೆ ನೀಡಿದರು.
(AP)(3 / 5)
ಟಾಸ್ ಗೆದ್ದ ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಜಿಂಬಾಬ್ವೆ ವಿರುದ್ಧ ಪಾಕ್ ಅಗ್ರ ಕ್ರಮಾಂಕ ವೈಫಲ್ಯ ಅನುಭವಿಸಿತು. ಆರಂಭಿಕ ಆಟಗಾರ ಉಮರ್ ಯೂಸುಫ್ ಡಕೌಟ್, ಮತ್ತೊಬ್ಬ ಆರಂಭಿಕ ಆಟಗಾರ ಫರ್ಹಾನ್ 4 ರನ್ ಗಳಿಸಿ ಔಟಾದರು. ಉಸ್ಮಾನ್ ಖಾನ್ 5 ರನ್ ಗಳಿಸಿದರು. ನಾಯಕ ಸಲ್ಮಾನ್ ನಿಧಾನಗತಿಯ ಇನ್ನಿಂಗ್ಸ್ನಲ್ಲಿ 32 ಎಸೆತಗಳಲ್ಲಿ 32 ರನ್ ಗಳಿಸಿದರು.
(AP)(4 / 5)
ಜಿಂಬಾಬ್ವೆ ಬೌಲರ್ಗಳು ಆರಂಭಿಕ ಆಘಾತ ನೀಡಿದ ನಂತರ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ತಾಹಿರ್ 21 ರನ್, ಖಾಸಿಂ ಅಕ್ರಮ್ 20 ರನ್, ಅರಾಫತ್ ಮಿನ್ಹಾಸ್ 22 ರನ್, ಅಬ್ಬಾಸ್ ಅಫ್ರಿದಿ 15 ರನ್ ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ 20 ಓವರ್ಗೆ 7 ವಿಕೆಟ್ ಕಳೆದುಕೊಂಡು 132 ರನ್ ಕಲೆಹಾಕಿತು.
(AP)ಇತರ ಗ್ಯಾಲರಿಗಳು