ಭಾರತದಲ್ಲಿ ಇಂದಿನ ಬೆಳ್ಳಿ ಬೆಲೆಗಳು

Updated on 20 July, 2024
891-26.00
10 ಗ್ರಾಂ ಬೆಳ್ಳಿ ಬೆಲೆ
8907-267.00
100 ಗ್ರಾಂ ಬೆಳ್ಳಿ ಬೆಲೆ
89070-2670.00
1 ಕೆಜಿ ಬೆಳ್ಳಿ ಬೆಲೆ

ಕೈಗಾರಿಕಾ ವಲಯ ಮತ್ತು ಆಭರಣ ತಯಾರಿಕೆಯಲ್ಲಿ ಬೆಳ್ಳಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಭಾರತವು ಜಗತ್ತಿನ ಅತಿದೊಡ್ಡ ಬೆಳ್ಳಿ ಗ್ರಾಹಕ ದೇಶವಾಗಿದೆ. ಭಾರತವು ಈ ಅಮೂಲ್ಯ ಲೋಹದ ಪ್ರಮುಖ ಆಮದುದಾರ ದೇಶವೂ ಹೌದು. ಭಾರತದಲ್ಲಿ ಬೆಳ್ಳಿ ದರವನ್ನು ನಿರ್ಧರಿಸುವ ವಿಚಾರದಲ್ಲಿ ಆಮದು ಸುಂಕಗಳು ಮತ್ತು ಇತರ ತೆರಿಗೆಗಳೊಂದಿಗೆ ಅಂತಾರಾಷ್ಟ್ರೀಯ ಬೆಲೆಗಳು ಮುಖ್ಯ ಪಾತ್ರ ನಿರ್ವಹಿಸುತ್ತವೆ. ಚಿನ್ನದಂತೆ ಬೆಳ್ಳಿಯನ್ನೂ ಹೂಡಿಕೆಯ ಮುಖ್ಯ ಸಾಧನ ಎಂದು ಪರಿಗಣಿಸಲಾಗಿದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕರ್ನಾಟಕ ಮತ್ತು ಭಾರತದ ಮುಖ್ಯ ನಗರಗಳಲ್ಲಿ ಬೆಳ್ಳಿಯ ಧಾರಣೆ ಎಷ್ಟಿದೆ ಎಂಬ ವಿವರ ಇಲ್ಲಿ ಲಭ್ಯ.

ಭಾರತದಲ್ಲಿ ಬೆಳ್ಳಿ ಬೆಲೆಯ ಗ್ರಾಫ್

ಮೆಟ್ರೋ ನಗರಗಳಲ್ಲಿ ಬೆಳ್ಳಿ ಬೆಲೆ 20 July,2024

   ನಿಮ್ಮ ಪ್ರದೇಶದಲ್ಲಿ ಬೆಳ್ಳಿ ಬೆಲೆಯನ್ನು ಹುಡುಕಿ

   ಭಾರತದ ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ

   • ನಗರದ ಹೆಸರು

   • 10 ಗ್ರಾಂ ಬೆಲೆ

   • 100 ಗ್ರಾಂ ಬೆಲೆ

   • 1 ಕೆಜಿ ಬೆಲೆ

   • Delhi
   • 891
   • 8907
   • 89070
   • Jaipur
   • 892
   • 8925
   • 89250
   • Kerala
   • 892
   • 8925
   • 89250
   Show More

   ಕಳೆದ 15 ದಿನಗಳ ಬೆಳ್ಳಿ ಬೆಲೆ

   • ದಿನಾಂಕಗಳು

   • 10 ಗ್ರಾಂ ಬೆಲೆ

   • 1 ಕೆಜಿ ಬೆಲೆ

   • July 19, 2024
   • 917
   • 91740 -370.00
   • July 18, 2024
   • 921
   • 92110 -90.00
   • July 17, 2024
   • 922
   • 92200 180.00
   • July 16, 2024
   • 920
   • 92020 100.00
   • July 15, 2024
   • 919
   • 91920 0.00
   • July 14, 2024
   • 919
   • 91920 -180.00
   • July 13, 2024
   • 921
   • 92100 -290.00
   • July 12, 2024
   • 924
   • 92390 410.00
   • July 11, 2024
   • 920
   • 91980 0.00
   • July 09, 2024
   • 920
   • 92010 1210.00
   • July 08, 2024
   • 908
   • 90800 -180.00
   • July 07, 2024
   • 910
   • 90980 180.00
   • July 06, 2024
   • 908
   • 90800 600.00

   ಬೆಳ್ಳಿ ಧಾರಣೆ ಮತ್ತು ಬೆಳ್ಳಿಯ ವೈಶಿಷ್ಟ್ಯಗಳು

   ಅಮೂಲ್ಯ ಲೋಹ ಎನಿಸಿಕೊಂಡರೂ ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿಯ ಬೆಲೆ ಅಗ್ಗ. ಒಂದು ಗ್ರಾಂ ಬೆಳ್ಳಿಯು 100 ರೂಪಾಯಿ ಒಳಗೆ ಸಿಗುತ್ತದೆ. ನೀವು ಒಂದು ಕೆಜಿ ಬೆಳ್ಳಿಯನ್ನು 1 ಲಕ್ಷ ರೂಪಾಯಿಗಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಒಂದು ಕೆಜಿ ಬೆಳ್ಳಿಯ ಧಾರಣೆಗೆ 10 ಗ್ರಾಮ್ ಅಷ್ಟೇ ಚಿನ್ನ ಖರೀದಿಸಲು ಸಾಧ್ಯವಿದೆ.

   ಚಿನ್ನಕ್ಕಿಂತ ಬೆಳ್ಳಿಗೆ ಯಾವಾಗಲೂ ಹೆಚ್ಚಿನ ಬೇಡಿಕೆ ಇರುತ್ತದೆ. ಏಕೆಂದರೆ ಇದರ ಬಳಕೆ ಕೇವಲ ಆಭರಣ ವಸ್ತುಗಳಿಗೆ ಸೀಮಿತವಾಗಿಲ್ಲ. ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳು ಕೆಲವು ಉತ್ಪನ್ನಗಳನ್ನು ತಯಾರಿಸಲು ಸಹ ಬೆಳ್ಳಿಯನ್ನು ಬಳಸುತ್ತವೆ. ಬೆಳ್ಳಿಗೆ ಬೇಡಿಕೆ ಹೆಚ್ಚಿರುವುದರಿಂದ ಈ ಲೋಹದ ಲಭ್ಯತೆ ಕಡಿಮೆಯಾಗುತ್ತಿದೆ. ಬೆಳ್ಳಿಯಲ್ಲಿ ಹೂಡಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆಗಳಿವೆ. ಭಾರತದಲ್ಲಿ ಬೆಳ್ಳಿ ಬೆಲೆಯು ಚಿನ್ನದ ದರಗಳು ಸೇರಿದಂತೆ ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಬೆಲೆ ಏರಿಕೆಯಾದರೆ ಬೆಳ್ಳಿ ಬೆಲೆಯೂ ಅದೇ ಅನುಪಾತದಲ್ಲಿ ಹೆಚ್ಚಾಗುತ್ತದೆ. ದೊಡ್ಡಮಟ್ಟದ ಸಗಟು ಖರೀದಿಗಳು ಬೆಳ್ಳಿ ಬೆಲೆಯ ಮೇಲೂ ಪರಿಣಾಮ ಬೀರುತ್ತವೆ.

   ಬ್ಯಾಂಕ್‌ಗಳು, ಆಭರಣ ವ್ಯಾಪಾರಿಗಳು, ಆನ್‌ಲೈನ್ ಏಜೆಂಟ್‌ಗಳ ಮೂಲಕ ಬೆಳ್ಳಿಯನ್ನು ಖರೀದಿಸಬಹುದು. ನೀವು ಬ್ಯಾಂಕಿನಿಂದ ಬೆಳ್ಳಿಯನ್ನು ಖರೀದಿಸುತ್ತಿದ್ದರೆ, ಬ್ಯಾಂಕರ್ ಶುದ್ಧತೆಯ ತಪಾಸಣೆ ನಡೆಸಿ ಖರೀದಿದಾರರಿಗೆ ಭರವಸೆ ನೀಡುವುದರಿಂದ ದರಗಳು ಹೆಚ್ಚಿರುತ್ತವೆ. ಆಭರಣ ತಯಾರಕರು ಮತ್ತು ಆನ್‌ಲೈನ್ ಏಜೆಂಟ್‌ಗಳ ಮೂಲಕವೂ ಬೆಳ್ಳಿಯನ್ನು ಖರೀದಿಸಬಹುದು.

   ಬೆಳ್ಳಿ ಗಟ್ಟಿಯು ಶುದ್ಧತೆಯ ಗ್ರೇಡ್ 999.9, 999.5, 999 ರಲ್ಲಿ ಲಭ್ಯವಿದೆ. ಇತರ ಲೋಹಗಳ ಮಿಶ್ರಣವಿರುವ ಬೆಳ್ಳಿಯಿಂದ ಆಭರಣಗಳು ಮತ್ತು ಕಲಾಕೃತಿಗಳನ್ನು ತಯಾರಿಸುತ್ತಾರೆ. ಇಂಥ ಬೆಳ್ಳಿಯ ಶುದ್ಧತೆಯನ್ನು 970, 925, 900, 835 ಎಂದು ವಿಂಗಡಿಸಲಾಗಿದೆ. ಬೆಳ್ಳಿಯನ್ನು ಅದರ ಶುದ್ಧ ರೂಪದಲ್ಲಿ ಬಳಸುವ ಸಾಧ್ಯತೆಗಳು ಬಹಳ ಕಡಿಮೆ. ಆಭರಣ ತಯಾರಕರು ಶೇ 92.5 ಬೆಳ್ಳಿ ಮತ್ತು ಶೇ 7.5 ಇತರ ಲೋಹಗಳ ಮಿಶ್ರಣ ಇರುವ ಸ್ಟರ್ಲಿಂಗ್ ಬೆಳ್ಳಿಯನ್ನು ಬಳಸುತ್ತಾರೆ. ಭಾರತವು ತನ್ನ ಬೆಳ್ಳಿಯ ಅವಶ್ಯಕತೆಗಳನ್ನು ಹೆಚ್ಚಾಗಿ ಆಮದುಗಳ ಮೂಲಕ ಪೂರೈಸಿಕೊಳ್ಳುತ್ತದೆ. ಬೆಳ್ಳಿ ಉತ್ಪಾದನೆಯು ಅದರ ಬೇಡಿಕೆಗಳನ್ನು ಪೂರೈಸಲು ಸಾಕಾಗುವುದಿಲ್ಲ. ಜಾರ್ಖಂಡ್, ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಬೆಳ್ಳಿಯ ಗಣಿ, ಸಂಸ್ಕರಣಾ ಕೇಂದ್ರಗಳಿವೆ.

   ಪ್ರಸ್ತುತ, ಭಾರತದಲ್ಲಿ ಚಿನ್ನದ ಆಮದು ಸುಂಕವು ಶೇ 10 ಇದೆ. ಆಮದು ನಿಯಂತ್ರಿಸುವ ಉದ್ದೇಶದಿಂದ ಭಾರತದ ಆಂತರಿಕ ಆರ್ಥಿಕತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕೇಂದ್ರ ಸರ್ಕಾರವು ಆಮದು ಸುಂಕವನ್ನು ನಿರ್ಧರಿಸುತ್ತದೆ.

   ಭಾರತವು ಚೀನಾ, ಬ್ರಿಟನ್, ಐರೋಪ್ಯ ಒಕ್ಕೂಟದ ದೇಶಗಳು, ಆಸ್ಟ್ರೇಲಿಯಾ ಮತ್ತು ದುಬೈನಿಂದ ಬೆಳ್ಳಿಯನ್ನು ಆಮದು ಮಾಡಿಕೊಳ್ಳುತ್ತದೆ.

   ಇಂದಿನ ಬೆಳ್ಳಿ ಧಾರಣೆ ಸುದ್ದಿ

   ಭಾನುವಾರ ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

   Gold Rate: ಬಡವರಿಗೆ ಗಗನ ಕುಸುಮವಾಯ್ತು ಚಿನ್ನ; ಮತ್ತಷ್ಟು ಹೆಚ್ಚಾಯ್ತು ಬೆಳ್ಳಿ , ಬಂಗಾರದ ಬೆಲೆ

   Sunday, April 28, 2024

   ಏಪ್ರಿಲ್‌ 21ರ ಚಿನ್ನದ ಬೆಲೆ

   Gold Rate: ಚಿನ್ನದ ಬೆಲೆ ಸ್ವಲ್ಪ ಇಳಿಕೆ; ಪ್ರಮುಖ ನಗರಗಳು, ಹೊರ ರಾಜ್ಯಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಬೆಲೆ ಹೀಗಿದೆ

   Sunday, April 21, 2024

    ಏಪ್ರಿಲ್‌ 15ರ ಚಿನ್ನ, ಬೆಳ್ಳಿ ದರ

   Gold Rate: ಕಡಿಮೆ ಆದರೂ ಆಭರಣಪ್ರಿಯರಿಗಿಲ್ಲ ಖುಷಿ; ಕರ್ನಾಟಕ, ಹೊರ ರಾಜ್ಯಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಬೆಲೆ ಹೀಗಿದೆ

   Monday, April 15, 2024

   ಮಾರ್ಚ್‌ 26ರ ಚಿನ್ನ, ಬೆಳ್ಳಿಯ ದರ

   Gold Rate: ಚಿನ್ನದ ಬೆಲೆ ತುಸು ಇಳಿಕೆ, ಏರಿಕೆ ಆಯ್ತು ಬೆಳ್ಳಿ; ವಿವಿಧ ಕಡೆಗಳಲ್ಲಿ ಬಂಗಾರದ ಬೆಲೆ ಹೀಗಿದೆ ನೋಡಿ

   Tuesday, March 26, 2024

   ಚಿನ್ನಾಭರಣ ದರ (ಸಾಂದರ್ಭಿಕ ಚಿತ್ರ)

   Gold Rate Today: ಚಿನ್ನದ ದರ ತಟಸ್ಥ: ಸೋಮವಾರ ನಿಮ್ಮ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಹೀಗಿದೆ

   Monday, March 4, 2024

   ಎಲ್ಲವನ್ನೂ ನೋಡಿ

   ಬೆಳ್ಳಿ ಲೋಹ ಮತ್ತು ಬೆಳ್ಳಿ ಬೆಲೆಗಳ ಕುರಿತು ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQ)

   ಪ್ರಶ್ನೆ :ಬೆಳ್ಳಿಯಲ್ಲಿ ಏಕೆ ಹೂಡಿಕೆ ಮಾಡಬೇಕು?

   ಉತ್ತರ: ಬೆಳ್ಳಿಯಲ್ಲಿ ಹೂಡಿಕೆ ಮಾಡಲು ಹಲವು ಕಾರಣಗಳಿವೆ. ಬೆಲೆ ಬಾಳುವ ಲೋಹವಾಗಿರುವುದರಿಂದ, ಇದು ಭಾರತದ ಆಭರಣ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆಯಲ್ಲಿದೆ. ಬೆಳ್ಳಿಗೆ ಭಾರಿ ಬೇಡಿಕೆ ಇರುವುದರಿಂದ ಲೋಹದ ಲಭ್ಯತೆ ಕಡಿಮೆಯಾಗುತ್ತದೆ. ಭವಿಷ್ಯದಲ್ಲಿ ಬೆಲೆಗಳು ಹೆಚ್ಚಾಗುತ್ತವೆ, ಈಗ ತಮ್ಮ ಹಣವನ್ನು ಬೆಳ್ಳಿಯಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರಿಗೆ ಲಾಭವಾಗುತ್ತದೆ. ಇನ್ನೊಂದು ಪ್ರಮುಖ ಅಂಶವೆಂದರೆ ಬೆಳ್ಳಿಯು ಚಿನ್ನಕ್ಕಿಂತ ಅಗ್ಗ.

   ಪ್ರಶ್ನೆ:ಭಾರತದಲ್ಲಿ ಬೆಳ್ಳಿಯ ಬೆಲೆಯ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ?

   ಉತ್ತರ: ಭಾರತದಲ್ಲಿ ಬೆಳ್ಳಿ ಬೆಲೆಯು ಚಿನ್ನದ ದರಗಳು, ಕೈಗಾರಿಕಾ ಬೇಡಿಕೆ, ಬೃಹತ್ ಖರೀದಿಗಳು, ಹಣದುಬ್ಬರದಂತಹ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಬೆಲೆ ಹೆಚ್ಚಾದರೆ ಬೆಳ್ಳಿಯ ಬೆಲೆಯೂ ಹೆಚ್ಚಾಗಲಿದೆ. ಬೆಳ್ಳಿಯನ್ನು ಕೈಗಾರಿಕೆಗಳು, ಆಭರಣಗಳು, ನಾಣ್ಯಗಳು ಮತ್ತು ಪದಕಗಳಂತಹ ವಿವಿಧ ವಸ್ತುಗಳ ಉತ್ಪಾದನೆಗೆ ಬಳಸುತ್ತವೆ. ದೊಡ್ಡಮಟ್ಟದ ವಹಿವಾಟು, ಖರೀದಿ, ಮಾರಾಟದಂಥ ಅಂಶಗಳು ಸಹ ಬೆಳ್ಳಿ ಧಾರಣೆಯ ಮೇಲೆ ಪ್ರಭಾವ ಬೀರುತ್ತವೆ.

   ಪ್ರಶ್ನೆ: ನಾನು ಭಾರತದಲ್ಲಿ ಬೆಳ್ಳಿಯನ್ನು ಎಲ್ಲಿ ಖರೀದಿಸಬಹುದು?

   ಉತ್ತರ: ಭಾರತದಲ್ಲಿ ಬ್ಯಾಂಕ್‌ಗಳು, ಆಭರಣ ವ್ಯಾಪಾರಿಗಳು, ಆನ್‌ಲೈನ್ ಏಜೆಂಟ್‌ಗಳಿಂದ ಬೆಳ್ಳಿಯನ್ನು ಖರೀದಿಸಬಹುದು. ಬ್ಯಾಂಕ್‌ಗಳು ಶುದ್ಧತೆಯ ಖಾತ್ರಿಗೆ ವೆಚ್ಚ ಮಾಡುವುದರಿಂದ ಅಲ್ಲಿ ಖರೀದಿಸುವ ಬೆಳ್ಳಿಯ ಬೆಲೆ ತುಸು ಹೆಚ್ಚು ಇರುತ್ತದೆ. ಆಭರಣ ತಯಾರಕರು ತೂಕದ ಆಧಾರದ ಮೇಲೆ ವಿವಿಧ ಬಗೆಯ ಉತ್ಪನ್ನಗಳನ್ನು ನೀಡುತ್ತಾರೆ. ಬೆಳ್ಳಿಯನ್ನು ಆನ್‌ಲೈನ್‌ನಲ್ಲಿಯೂ ಖರೀದಿಸಬಹುದು, ಅನೇಕ ಕಂಪನಿಗಳು ಆನ್‌ಲೈನ್‌ನಲ್ಲಿ ಖರೀದಿಸುವ ಆಯ್ಕೆಯನ್ನು ನೀಡುತ್ತವೆ.

   ಪ್ರಶ್ನೆ: ಬೆಳ್ಳಿಯ ಶುದ್ಧತೆಯ ದರ್ಜೆ ಏನು?

   ಉತ್ತರ: ಉತ್ತಮವಾದ ಬೆಳ್ಳಿಯು ಶುದ್ಧತೆಯ ಗ್ರೇಡ್ 999.9, 999.5, 999 ರಲ್ಲಿ ಲಭ್ಯವಿದೆ. ಕಲಾಕೃತಿಗಳು ಮತ್ತು ಆಭರಣ ತಯಾರಿಕೆಗೆ ಬಳಸುವ ಬೆಳ್ಳಿಯ ಮಿಶ್ರಲೋಹದ ಶುದ್ಧತೆಯು 970, 925, 900, 835, 800 ಆಯ್ಕೆಯಲ್ಲಿ ಸಿಗುತ್ತವೆ.

   ಪ್ರಶ್ನೆ: ಸ್ಟರ್ಲಿಂಗ್ ಸಿಲ್ವರ್ ಎಂದರೇನು?

   ಉತ್ತರ: ಬೆಳ್ಳಿಯನ್ನು ಅದರ ಶುದ್ಧ ರೂಪದಲ್ಲಿ ಬಳಸಲಾಗುವುದಿಲ್ಲ. ಆಭರಣಕಾರರು ಸ್ಟರ್ಲಿಂಗ್ ಬೆಳ್ಳಿಯನ್ನು ಬಳಸುತ್ತಾರೆ. ಇದಕ್ಕೆ ಶೇ 92.5ರಷ್ಟು ಬೆಳ್ಳಿ ಮತ್ತು ಶೇ.7.5ರಷ್ಟು ಇತರೆ ಲೋಹಗಳನ್ನು ಬಳಸಲಾಗುತ್ತದೆ.