ಕನ್ನಡ ಸುದ್ದಿ  /  Sports  /  3 Meter Rule Saved Shubman Gill Against Nathan Lyon In India Vs Australia 4th Test

VIDEO: ಗಿಲ್​​ ಔಟಾಗಿದ್ರೂ ನಾಟೌಟ್ ಕೊಟ್ಟ ಅಂಪೈರ್, ಶತಕ ಸಿಡಿಸಲು ನೆರವಾಯ್ತು 3 ಮೀಟರ್ ನಿಯಮ!

3ನೇ ದಿನ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಗಿಲ್, ನಾಥನ್ ಲಿಯಾನ್ ಬೌಲಿಂಗ್​​ನಲ್ಲಿ ವಿಕೆಟ್‌ ಒಪ್ಪಿಸಿದರು. ಆಗ ಅಂಪೈರ್ ನಾಟೌಟ್ ಎಂದು ಘೋಷಿಸಿತು. ಅದಕ್ಕೆ ಕಾರಣವಾಗಿದ್ದು, 3 ಮೀಟರ್​ ನಿಯಮ.!

ಶುಭ್​ಮನ್ ಗಿಲ್​​
ಶುಭ್​ಮನ್ ಗಿಲ್​​ (BCCI/Twitter)

ಅಹ್ಮದಾಬಾದ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಕುತೂಹಲ ಮೂಡಿಸಿದೆ. ಮೊದಲೆರಡು ದಿನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 480 ರನ್​ಗಳ ಬೃಹತ್ ಸ್ಕೋರ್ ಗಳಿಸಿ ಆಲೌಟ್ ಆಗಿದ್ದರೆ, ಟೀಮ್​​​ ಇಂಡಿಯಾ ಕೂಡ ದಿಟ್ಟ ಉತ್ತರ ನೀಡುತ್ತಿದೆ. ನಾಯಕ ರೋಹಿತ್ 35 ರನ್ ಗಳಿಸಿ ಔಟಾದರೆ, ಯುವ ಬ್ಯಾಟರ್​​ ಶುಬ್ಮನ್ ಗಿಲ್ 128 ರನ್ ಗಳಿಸಿ ದಾಖಲೆಯ ಶತಕ ಸಿಡಿಸಿದರು.

ಆ ಮೂಲಕ ಶುಬ್ಮನ್ ಗಿಲ್ ಈ ವರ್ಷ ಟಿ20, ಏಕದಿನ ಮತ್ತು ಟೆಸ್ಟ್‌ಗಳಲ್ಲಿ ಟೀಮ್​​ ಇಂಡಿಯಾ ಪರ ಗರಿಷ್ಠ ಸ್ಕೋರರ್ ಆಗಿದ್ದಾರೆ. ಗಿಲ್ ಅವರ ಶತಕದ ಜೊತೆಗೆ ಚೇತೇಶ್ವರ್ ಪೂಜಾರ 42 ರನ್​ ಮತ್ತು ವಿರಾಟ್ ಕೊಹ್ಲಿ ಅವರ ಅಜೇಯ ಅರ್ಧಶತಕದ ನೆರವಿನಿಂದ ಭಾರತ ತಂಡ ಮೂರನೇ ದಿನದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದೆ.

ಆದರೆ 3ನೇ ದಿನ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಗಿಲ್, ನಾಥನ್ ಲಿಯಾನ್ ಬೌಲಿಂಗ್​​ನಲ್ಲಿ ವಿಕೆಟ್‌ ಒಪ್ಪಿಸಿದರು. ಆಗ ಅಂಪೈರ್ ನಾಟೌಟ್ ಎಂದು ಘೋಷಿಸಿದರೂ, ಆಸ್ಟ್ರೇಲಿಯಾ ರಿವ್ಯೂ ತೆಗೆದುಕೊಂಡಿತು. ಆದರೆ ಔಟ್​​​ ಇದ್ದರೂ ನಾಟೌಟ್​ ನೀಡಿದ್ದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಯಿತು.

ಮೂರನೇ ಅಂಪೈರ್​​​​ ಮರು ಪರಿಶೀಲನೆಯಲ್ಲಿ ಚೆಂಡು ನೇರವಾಗಿ ವಿಕೆಟ್‌ಗೆ ಬಡಿದಿರುವುದು ಕಂಡು ಬಂತು. ಇದರೊಂದಿಗೆ ಶುಬ್ಮನ್ ನಿರಾಸೆಯೊಂದಿಗೆ ಪೆವಿಲಿಯನತ್​​ನತ್ತ ಹೆಜ್ಜೆ ಹಾಕಿದರು. ಆದರೆ 3ನೇ ಅಂಪೈರ್ ನಾಟೌಟ್ ಎಂದು ಪ್ರಕಟಿಸಿದರು. ಇದು ಆಸಿಸ್​ ಆಟಗಾರರು ಮತ್ತು ಯಂಗ್​ ಕ್ರಿಕೆಟರ್​​ ಗಿಲ್​ಗೂ ಒಂದು ಕ್ಷಣ ಅಚ್ಚರಿ ಮೂಡಿಸಿತು. ಇದಕ್ಕೆ ಕಾರಣ 3 ಮೀಟರ್ ನಿಯಮ.!

ನಾಥನ್ ಲಿಯಾನ್ ಬೌಲಿಂಗ್‌ನಲ್ಲಿ ಶಾಟ್ ಆಡಲು ಗಿಲ್ ಕ್ರೀಸ್ ತೊರೆದರು. ಆದರೆ ಯುವ ಬ್ಯಾಟರ್​​​ನನ್ನು ಉಳಿಸಿದ್ದೇ ಇದು. ಬಾಲ್ ಟ್ರ್ಯಾಕಿಂಗ್‌ನಲ್ಲಿ ಗಿಲ್‌ ಪ್ಯಾಡ್​​​ಗೆ ಬಡಿದ ನಂತರ ಚೆಂಡು, 3 ಮೀಟರ್ ದೂರ ಕ್ರಮಿಸಿದ ನಂತರವೇ ವಿಕೆಟ್‌ಗೆ ಬಡಿದಿದೆ ಎಂದು ತೋರಿಸಿದೆ. ಚೆಂಡು ಯಾವ ದಿಕ್ಕಿನಲ್ಲಿ ಹೋಗುತ್ತದೆ ಎಂಬುದನ್ನು ಊಹಿಸುವ ಮೂಲಕ ಬಾಲ್ ಟ್ರ್ಯಾಕಿಂಗ್ ಅನ್ನು ತಾಂತ್ರಿಕವಾಗಿ ನಡೆಸಲಾಗುತ್ತದೆ. ಆದರೆ ಚೆಂಡು ಅದೇ ದಿಕ್ಕಿನಲ್ಲಿ ಸಾಗುತ್ತದೆ ಎಂದು ಹೇಳಲಾಗುವುದಿಲ್ಲ.

ಇಂತಹ ನಿರ್ಧಾರಗಳು ಎದುರಾದಾಗ, 3ನೇ ಅಂಪೈರ್​ ತಂತ್ರಕ್ಕಿಂತ ಫೀಲ್ಡ್​ ಅಂಪೈರ್​ ನಿರ್ಧಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ 3 ಮೀಟರ್ ದೂರದ ಅಂದಾಜು ಮಾಡಲು ತಾಂತ್ರಿಕವಾಗಿ ನಿಖರವಾಗಿಲ್ಲ. ಅಷ್ಟೇ ಯಾಕೆ 3 ಮೀಟರ್ ನಿಯಮದ ಪ್ರಕಾರ, ಚೆಂಡು ವಿಕೆಟ್​​ಗೆ ಅಪ್ಪಳಿಸಿದರೂ ಫೀಲ್ಡ್ ಅಂಪೈರ್ ನಿರ್ಧಾರಕ್ಕೆ ಥರ್ಡ್ ಅಂಪೈರ್​​​​ ಆದ್ಯತೆ ನೀಡಿ ನಾಟೌಟ್ ಘೋಷಿಸಬೇಕು.

3 ಮೀಟರ್ ನಿಯಮ ಎಂದರೇನು.?

ಸಂಕ್ಷಿಪ್ತವಾಗಿ ಹೇಳುವುದಾದರೆ LBW ಔಟಾಗಿದ್ದರೆ, ಆ ಬ್ಯಾಟ್ಸ್​​ಮನ್​​ DRS ಮೊರೆ ಹೋದಾಗ, ಬ್ಯಾಟರ್ ಮತ್ತು ಸ್ಟಂಪ್‌ಗಳ ನಡುವಿನ ಅಂತರವು ಮೂರು ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಇದ್ದರೆ, ನಂತರ ನಿರ್ಧಾರವು ನಾಟ್ ಔಟ್ ಆಗಿರುತ್ತದೆ. ಇದರಿಂದ ಡಿಆರ್‌ಎಸ್ ತೆಗೆದುಕೊಂಡ ಆಸ್ಟ್ರೇಲಿಯಾ, ವಿಮರ್ಶೆ ಕಳೆದುಕೊಂಡಿತು. ಈ ವೇಳೆ ಗಿಲ್​​ ಸ್ಕೋರ್ ಕೇವಲ 35 ರನ್ ಆಗಿತ್ತು.

ಇದಾದ 3 ಓವರ್​ಗಳಲ್ಲಿ ಟೀಮ್​ ಇಂಡಿಯಾ ರೋಹಿತ್ ಶರ್ಮಾ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಮೊದಲ ವಿಕೆಟ್‌ಗೆ ರೋಹಿತ್ ಅವರೊಂದಿಗೆ 74 ರನ್‌ಗಳ ಜೊತೆಯಾಟ ನೀಡಿದರು. ಹಾಗೆಯೇ ಪೂಜಾರ ಅವರೊಂದಿಗೆ 3ನೇ ವಿಕೆಟ್‌ಗೆ 113 ರನ್‌, ವಿರಾಟ್​ ಕೊಹ್ಲಿ ಜೊತೆಗೆ 58 ರನ್​ ಪಾಲುದಾರಿಕೆ ನೀಡಿದರು. ಅಂತಿಮವಾಗಿ ಗಿಲ್​​​ 128 ರನ್​ಗಳಿಸಿ ಔಟಾದರು.